ವಿಷ್ಣು ಹಳೆ ವಿಡಿಯೋ ಹೊಸದಾಗಿ ವೈರಲ್.!
ನನ್ನ ಹಾಡು ನನ್ನದು. ಇಲ್ಲಿ ನನ್ನ ಚಿತ್ರಣವೇ ಇದೆ. ವಿಷ್ಣು ಹೀಗೆ ಹೇಳಿ ಅದೆಷ್ಟೋ ದಿನಗಳಾಗಿದೆ. ಆದರೆ, ಆ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇದರ ಮಾಹಿತಿ ಇಲ್ಲಿದೆ ಓದಿ.ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಜೀವನದಲ್ಲಿ ಹಲವಾರು ಸಿನಿಮಾಗಳು ಇವೆ. ಅನೇಕ ಹಾಡುಗಳು ವಿಷ್ಣು (Vishnu) ಗುಣಗಾನ ಮಾಡಿವೆ. ವಿಷ್ಣು ಹಾಡಿರೋ ‘ತುತ್ತು ಅನ್ನ ತಿನ್ನೋಕೆ’ ಹಾಡು ಈಗಲೂ ವಿಷ್ಣು ಅಭಿಮಾನಿಗಳ ಮನದಲ್ಲಿದೆ. ಇಷ್ಟೇ ಯಾಕೆ..? ವಿಷ್ಣುವರ್ಧನ್ ತಮ್ಮದೇ ಒಂದು ಕರೋಕೆ ಕ್ಲಬ್ (Karaoke club) ಮಾಡಿಕೊಂಡು ಇತರ ಹಾಡುಗಳನ್ನ ಹಾಡಿದ್ದು ಇದೆ. ಆದರೆ ವಿಷ್ಣುವರ್ಧನ್ ಚಿತ್ರ ಜೀವನದಲ್ಲಿ ಒಂದು ಹಾಡಿದೆ. ಇದು ವಿಷ್ಣು Anthem ಅಂತಲೂ ಹೇಳಬಹುದು. ಹಾಗಂತ ಇದನ್ನ ಅದ್ಯಾರೋ ಹೇಳಿದ್ದಾರೆ ಅನ್ಕೋಬೇಡಿ. ಸ್ವತಃ ವಿಷ್ಣುವರ್ಧನ್ ಇದನ್ನ ಹೇಳಿಕೊಂಡಿದ್ದಾರೆ. ಸುಮಾರು ಹಿಂದೇನೆ ವಿಷ್ಣು ಕೊಟ್ಟಿದ್ದ ಸಂದರ್ಶನದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವಿಡಿಯೋ ರೀಲ್ಸ್ ರೂಪದಲ್ಲಿ ಇದೀಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.ಇದು ನನ್ನ ಜೀವನದ ನನ್ನದೇ ಹಾಡು…!ಸಂಬಂಧಿತ ಸುದ್ದಿಗುಡ್ ನ್ಯೂಸ್ ಕೊಟ್ಟ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ; ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ-ಭುವನ್!ವಿಷ್ಣು ಬಂಧನ ಮೂವಿ ನೋಡಿ ಆ ನಟ ಫಿದಾ ಆಗಿದ್ರು! ಸ್ವತಃ ಕಟೌಟ್ ಏರಿ ಕ್ಷೀರಾಭಿಷೇಕ ಮಾಡಿದ್ರು, ಯಾರದು?Actor Ganesh: ಈ ಬಾರಿ ಬರ್ತ್ಡೇ ದಿನ ಮನೆಯಲ್ಲಿರಲ್ಲ ಗೋಲ್ಡನ್ ಸ್ಟಾರ್! ನಟ ಗಣೇಶ್ ಹೇಳಿದ್ದೇನು?Bheema Movie: ಡೋಂಟ್ ವರಿ ಬೇಬಿ ಚಿನ್ನಮ್ಮ ಎಂದ ಭೀಮ! ಸಾಂಗ್ ಹೆಂಗಿದೆ?ವಿಷ್ಣುದಾದ ಒಳ್ಳೆ ಕಂಠಸಿರಿ ಹೊಂದಿದ್ದರು. ಸಂಗೀತದ ಬಗ್ಗೆ ಆಸಕ್ತಿನೂ ಇತ್ತು. ತಮ್ಮದೇ ಒಂದು ಕರೋಕೆ ಕ್ಲಬ್ ಕೂಡ ಮಾಡಿಕೊಂಡಿದ್ದರು. ಅದು ಈಗಲೂ ಮುಂದುವರೆದಿದೆ. ಈ ಕರೋಕೆ ಕ್ಲಬ್‌ನಲ್ಲಿ ವಿಷ್ಣುರ್ಧನ್ ತಮಗಿಷ್ಟದ ಹಾಡುಗಳನ್ನ ಹಾಡಿ ಖುಷಿಪಡುತ್ತಿದ್ದರು. ನನ್ನ ಹಾಡು ನನ್ನದು’ ವಿಷ್ಣು Anthem ನೋಡಿ.!ವಿಷ್ಣುವರ್ಧನ್ ಅವರ ಸಿನಿಮಾ ಜೀವನದ ನಾಲ್ಕು ದಶಕದಲ್ಲಿ ಹೆಚ್ಚು ಕಡಿಮೆ 220 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗಳಲ್ಲಿ ಎಲ್ಲವೂ ತಮ್ಮದೇ ರೀತಿಯಲ್ಲಿ ಗಮನ ಸೆಳೆದಿವೆ. ಹಾಡುಗಳ ಮೂಲಕವೂ ಜನರ ಮನದಲ್ಲಿ ಉಲ್ಲಾಸ ಮೂಡಿಸಿವೆ.ನನ್ನ ಹಾಡು ನನ್ನದು ಎಂದ ದಾದಾ..!ನನ್ನ ಹಾಡು ನನ್ನದು ಆ ದಿನಗಳಲ್ಲಿಯೇ ಹೆಚ್ಚು ಗಮನ ಸೆಳೆದಿತ್ತು. ಚಿತ್ರ ಸಾಹಿತಿ ಚಿ.ಉದಯಶಂಕರ್ ಅವರು ಇದನ್ನ ಬರೆದಿದ್ದರು. ರಾಜನ್-ನಾಗೇಂದ್ರ ಅವರ ಸಂಗೀತದಲ್ಲಿ ಎಸ್.ಪಿ.ಬಿ. ಇದನ್ನ ಹಾಡಿದ್ದರು. ಈ ಒಂದು ಹಾಡು ಸುಪ್ರಭಾತ ಚಿತ್ರದಲ್ಲಿಯೇ ಇತ್ತು.ಇದನ್ನೂ ಓದಿ: Sriimurali: ನಾನು ಇನ್ನೂ ಆ ಸಿನಿಮಾದ ಗುಂಗಿನಲ್ಲೇ ಇದ್ದೇನೆ! ಶ್ರೀಮುರಳಿ ಹೀಗೆ ಹೇಳಿದ್ಯಾಕೆ?ಸುಪ್ರಭಾತ ಚಿತ್ರದಲ್ಲಿ ವಿಷ್ಣುವರ್ಧನ್ ಈ ಹಾಡಿಗೆ ತುಂಬಾನೆ ಚೆನ್ನಾಗಿ ಆ್ಯಕ್ಟ್ ಮಾಡಿದ್ದರು. ಚಿತ್ರದ ಪಾತ್ರದ ದೈನಂದಿನ ಬದುಕನ್ನ ಕಟ್ಟಿಕೊಡುವ ಈ ಹಾಡು, ತುಂಬಾನೆ ಚೆನ್ನಾಗಿ ಮೂಡಿ ಬಂದಿತ್ತು. ಪೆಟ್ರೋಲ್ ಬಂಕ್‌ನ ಮಾಲೀಕ ವಿಜಯ್ ಕುಮಾರ್ ಪಾತ್ರದಲ್ಲಿ ವಿಷ್ಣುವರ್ಧನ್ ಇಲ್ಲಿ ಅಭಿನಯಿಸಿದ್ದರು. ನನ್ನ ಹಾಡು ನನ್ನದು’ ವಿಷ್ಣು Anthem ನೋಡಿ.!ಸಪ್ರಭಾತ ಚಿತ್ರದ ‘ನನ್ನ ಹಾಡು ನನ್ನದು’ ವಿಷ್ಣು Anthem ಆಗಿದೆ. ಇದನ್ನ ಅಷ್ಟೇ ಹೆಮ್ಮೆಯಿಂದಲೇ ಸ್ವತಃ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಬಂದ ಸಿನಿಮಾಗಳಲ್ಲಿ ಸುಪ್ರಭಾತ ಸಿನಿಮಾ ವಿಶೇಷವಾಗಿದೆ. ಈ ಸಿನಿಮಾದಲ್ಲಿ ಬರೋ ‘ನನ್ನ ಹಾಡು ನನ್ನದು’ ಗೀತೆ ವಿಷ್ಣು Anthem ಆಗಿದೆ. ವಿಷ್ಣುವರ್ಧನ್ ಹೇಗೆ ಅನ್ನೋದನ್ನ ನನ್ನ ಹಾಡು ನನ್ನದು ಹೇಳುತ್ತದೆ. ಥ್ಯಾಂಕ್ಸ್ ಟು ಚಿ.ಉದಯ ಶಂಕರ್ ಅಂತಲೇ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ. ತುಂಬಾ ಹಿಂದೇನೆ ವಿಷ್ಣರ್ಧನ್ ಕೊಟ್ಟ ಸಂದರ್ಶನದಲ್ಲಿ ಈ ಒಂದು ಮಾಹಿತಿ ಇದೆ.ವಿಷ್ಣು ಹಳೆ ವಿಡಿಯೋ ಹೊಸದಾಗಿ ವೈರಲ್.!ವಿಷ್ಣುವರ್ಧನ್ ಹೆಚ್ಚಾಗಿ ಸಂದರ್ಶನ ಅಂತ ಕೊಡ್ತಾನೆ ಇರಲಿಲ್ಲ. ಕೊಟ್ಟಿರೋ ಸಂದರ್ಶನದಲ್ಲಿ ತುಂಬಾನೆ ಅದ್ಭುತವಾದ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆ ರೀತಿ ತಮ್ಮ ವ್ಯಕ್ತಿತ್ವವನ್ನ ಕಟ್ಟಿಕೊಡುವ ‘ನನ್ನ ಹಾಡು ನನ್ನದು’ ಕುರಿತು ವಿಷ್ಣು ಹೇಳಿಕೊಂಡಿದ್ದು, ಇದು ನನ್ನದೇ ಹಾಡು ಇದೇ ರೀತಿ ನಾನು ಇರೋದು ಅಂತ ವಿಷ್ಣು ಹೇಳಿದ್ದಾರೆ.ವಿಷ್ಣುವರ್ಧನ್ ಅವರ ಈ ಒಂದು ವಿಡಿಯೋ ಇದೀಗ ರೀಲ್ಸ್ ರೂಪದಲ್ಲಿಯೇ ವೈರಲ್ ಆಗುತ್ತಿದೆ. ಹಾಗೆ ಈ ವಿಡಿಯೋವನ್ನ ವಿಷ್ಣು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಅದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ವಿಷ್ಣು ಚಿತ್ರ ಬದುಕಿನ ಮಹತ್ವದ ಹಾಡಿನ ಮ್ಯಾಟರ್ ಅನ್ನೂ ಇದು ಹಂಚಿಕೊಳ್ಳುತ್ತಿದೆ ಅಂತಲೂ ಹೇಳಬಹುದು.

Post a Comment