ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಹಲವರು ಸಾವು, ಪ್ರಧಾನಿ ಮೋದಿಯಿಂದ ಸಂತಾಪ
ಉತ್ತರ ಪ್ರದೇಶದ (Uttar Pradesh) ಹತ್ರಾಸ್ (Hathras) ಜಿಲ್ಲೆಯಲ್ಲಿ ಇಂದು ಭಾರೀ ಕಾಲ್ತುಳಿತದಿಂದ ಭಾರೀ ದುರಂತ ಸಂಭವಿಸಿದೆ. ಭೋಲೆ ಬಾಬಾರವರ ಸತ್ಸಂಗ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಉತ್ತರ ಪ್ರದೇಶ: ಉತ್ತರ ಪ್ರದೇಶದ (Uttar Pradesh) ಹತ್ರಾಸ್ (Hathras) ಜಿಲ್ಲೆಯಲ್ಲಿ ಇಂದು ಭಾರೀ ಕಾಲ್ತುಳಿತದಿಂದ ಭಾರೀ ದುರಂತ ಸಂಭವಿಸಿದೆ. ಭೋಲೆ ಬಾಬಾರವರ ಸತ್ಸಂಗ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತೀವ್ರ ಕೋಪಗೊಂಡಿದ್ದು, ಘಟನೆಗೆ ಕಾರಣರಾದವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಮತ್ತು ಪ್ರಮುಖ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.24 ಗಂಟೆಗಳಲ್ಲಿ ವರದಿ ನೀಡುವಂತೆ ಯೋಗಿ ಆದೇಶಸಂಬಂಧಿತ ಸುದ್ದಿಬಾಲಕ ಬುದ್ಧಿ', 99 ಸ್ಥಾನ ದಾಟದ ಕಾಂಗ್ರೆಸ್! ಲೋಕಸಭೆಯಲ್ಲಿ 'ಕೈ'ಗೆ ಮೋದಿ ಟಾಂಗ್PM Modi Speech: ಹಿಂದುತ್ವ ತೆಗಳೋದು ಕಾಂಗ್ರೆಸ್‌ಗೆ ಫ್ಯಾಶನ್! ವಿಪಕ್ಷಗಳ ವಿರುದ್ಧ ಗುಡುಗಿದ ಮೋದಿ!ಉಗ್ರರನ್ನು ಅವರ ಮನೆಗೇ ನುಗ್ಗಿ ಭಾರತ ಹೊಡೆಯುತ್ತೆ! ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೋದಿ ಮಾತುಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ, 27 ಮಂದಿ ಸಾವು, ಹಲವರಿಗೆ ಗಾಯ!ಹತ್ರಾಸ್ ಅಪಘಾತದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಅವರೇ ಸ್ವತಃ ತನಿಖೆಗೆ ಒತ್ತಾಯಿಸಿದ್ದಾರೆ. ಎಡಿಜಿ ಆಗ್ರಾ ಮತ್ತು ಕಮಿಷನರ್ ಅಲಿಘರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು ಮತ್ತು ಅಪಘಾತದ ಕಾರಣವನ್ನು ತನಿಖೆ ಮಾಡಲು ಸೂಚನೆಗಳನ್ನು ಸಹ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಿಎಂ ಯೋಗಿ ಈ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.ಇದನ್ನೂ ಓದಿ: ‘ಬಾಲಕ ಬುದ್ಧಿ’, 99 ಸ್ಥಾನ ದಾಟದ ಕಾಂಗ್ರೆಸ್! ಲೋಕಸಭೆಯಲ್ಲಿ ‘ಕೈ’ಗೆ ಮೋದಿ ಟಾಂಗ್ಇನ್ನು ಈ ದುರಂತದ ಬಗ್ಗೆ ತಿಳಿದ ತಕ್ಷಣ ಸಿಎಂ ಯೋಗಿ ಆದಿತ್ಯನಾಥ್ ಅಲರ್ಟ್ ಆಗಿದ್ದಾರೆ ಅಂತಾನೇ ಹೇಳಬಹುದು. ಸಂತಾಪ ವ್ಯಕ್ತಪಡಿಸಿದ ಕೂಡಲೆ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಹಲವರು ಸಾವು, ಪ್ರಧಾನಿ ಮೋದಿಯಿಂದ ಸಂತಾಪಯುಪಿ ಸರ್ಕಾರದಿಂದ ಪರಿಹಾರ ಘೋಷಣೆಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50,000 ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಕೂಡ ಲೋಕಸಭೆಯಲ್ಲಿ ಹತ್ರಾಸ್ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರೆಲ್ಲರೂ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಯುಪಿ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.

Post a Comment