ಲೋಕಸಭೆಯಲ್ಲಿ ಮೋದಿ ಮಾತು
2014ರ ಮೊದಲು ದೇಶದಲ್ಲಿ ಆತಂಕಕಾರಿ ಸ್ಥಿತಿ ಇತ್ತು. ಆದರೀಗ ಭಾರತ ತನ್ನ ಸುರಕ್ಷತೆಗಾಗಿ ಏನಾದರೂ ಮಾಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು ಅಂತ ವಿಶ್ವಾಸದ ಮಾತುಗಳನ್ನಾಡಿದ್ದಾರೆ.ಲೋಕಸಭೆ: ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandi) ಹಾಗೂ ವಿಪಕ್ಷ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಮಾತುಗಳ ಮೂಲಕವೇ ಲೋಕಸಭೆಯಲ್ಲಿಂದು (Lok Sabha) ತಿರುಗೇಟು ನೀಡಿದ್ದಾರೆ. 2014ರ ಮೊದಲು ದೇಶದಲ್ಲಿ ಆತಂಕಕಾರಿ ಸ್ಥಿತಿ ಇತ್ತು. ಆದರೀಗ ಭಾರತ (India) ತನ್ನ ಸುರಕ್ಷತೆಗಾಗಿ ಏನಾದರೂ ಮಾಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು ಅಂತ ವಿಶ್ವಾಸದ ಮಾತುಗಳನ್ನಾಡಿದ್ದಾರೆ. 370 ಆರ್ಟಿಕಲ್ ರದ್ಧತಿ ಬಗ್ಗೆ ಮಾತನಾಡಿದ ಅವರು, ಭಾರತದ ಸಂವಿಧಾನ ಜಮ್ಮು ಕಾಶ್ಮೀರ ಗಡಿಗೆ ಪ್ರವೇಶ ಮಾಡೋಕೆ ಆಗ್ತಿರಲಿಲ್ಲ. ಆದ್ರೀಗ ಜಮ್ಮು ಕಾಶ್ಮೀರದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಅನ್ವಯವಾಗುತ್ತಿದೆ ಅಂತ ಹೆಮ್ಮೆಯಿಂದ ನುಡಿದಿದ್ದಾರೆ.ಉಗ್ರರ ಮನೆಗೆ ನುಗ್ಗಿ ಹೊಡೆಯಿತು2014ರ ಮೊದಲು ಇಡೀ ದೇಶದಲ್ಲಿ ಆತಂಕದ ಸ್ಥಿತಿ ಇತ್ತು. ಹಿಂದೂ ಸ್ಥಾನದ ಮೂಲೆ ಮೂಲೆಯನ್ನೂ ಟಾರ್ಗೆಟ್ ಮಾಡ್ತಿತ್ತು. ಆಗ ಸರ್ಕಾರ ಮೌನವಾಗಿ ಇರುತ್ತಿತ್ತು. ಆದರೆ 2014ರ ನಂತರ ಭಾರತ ಮನೆಗೆ ನುಗ್ಗಿ ಅವರನ್ನು ಹೊಡೆಯಿತು. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡ್ತು ಅಂತ ಮೋದಿ ಲೋಕಸಭೆಯಲ್ಲಿ ಹೆಮ್ಮೆಯಿಂದ ನುಡಿದಿದ್ದಾರೆ.ಭಾರತ ಏನಾದರೂ ಮಾಡುತ್ತದೆ ಆದಾದ ಬಳಿಕ ಉಗ್ರವಾದ ಕಡಿಮೆಯಾಗ್ತಾ ಬಂತು. ಭಾರತ ಏನಾದರೂ ಮಾಡುತ್ತದೆ ಅನ್ನೋದು ದೃಢವಾಯ್ತು. ದೇಶದ ಒಬ್ಬೊಬ್ಬ ನಾಗಕಿರಕರಿಗ ಗೊತ್ತು. ನಮ್ಮ ಸುರಕ್ಷತೆಗಾಗಿ ಭಾರತ ಏನಾದರೂ ಮಾಡುತ್ತದೆ ಅಂತ ಇಡೀ ವಿಶ್ವಕ್ಕೆ ತಿಳಿಯಿತು ಅಂತ ಮೋದಿ ಹೇಳಿದ್ದಾರೆ.

Post a Comment