ಸಾಣಿಕಟ್ಟಾ ಉಪ್ಪು
ಉಪ್ಪು ತಯಾರಿಕೆ ಆರಂಭವಾದ ಮೇಲೆ ಇದೇ ಮೊದಲು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಾಣಿಕಟ್ಟಾ ಉಪ್ಪಿಗೆ ಬರ ಬಂದಿದೆ. ಉಪ್ಪು ತಯಾರಿಕೆಯಲ್ಲಿ ತೀರಾ ಸಮಸ್ಯೆ ಆಗಿದೆ.
ಈ ಹಿಂದೆ ಕೊರೊನಾದಿಂದ (Corona) ದಿಕ್ಕೆಟ್ಟು ಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ (Gokarna, Uttara Kannada) ಸಾಣಿಕಟ್ಟಾ ಉಪ್ಪು (Sanikatta Salt) ಉದ್ಯಮ. ಈಗ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ (Heavy Rainfall) ಉಂಟಾದ ಪ್ರವಾಹಕ್ಕೆ (Flood) ದಿಕ್ಕೆಟ್ಟು ಹೋಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಉತ್ಪಾದನೆ ಮಾಡುವ ಸ್ಥಳೀಯ ಸಾಣಿಕಟ್ಟಾ ಉಪ್ಪು (Sanikatta Salt Shortage) ಯಾವುದೇ ಅಂಗಡಿಯಲ್ಲಿ ಸಿಗುತ್ತಿಲ್ಲ. ನೆರೆ ಹಾವಳಿಯಲ್ಲಿ ಸಾಣಿಕಟ್ಟಾ ಉಪ್ಪು ಹಾಳಾಗಿದೆ. ಪರಿಣಾಮ ಜಿಲ್ಲೆಯ ಜನರಿಗೆ ಉಪ್ಪಿನ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳಿಂದ ಕಾರವಾರ (Karwar) ಸೇರಿದಂತೆ ಇತರ ಕಡೆಗಳ ಯಾವುದೇ ಅಂಗಡಿ ಸುತ್ತಾಡಿದರು ಗೋಕರ್ಣ ಸಾಣಿಕಟ್ಟಾ ಉಪ್ಪು ಸಿಗುತ್ತಿಲ್ಲ. ಸಾಣಿಕಟ್ಟಾ ಉಪ್ಪಿಗೆ ಯಾಕಿಷ್ಟು ಬೇಡಿಕೆ ಎಂದು ಕೇಳಿದ್ರೆ ದೇಶದಲ್ಲಿ ಕರ್ನಾಟಕದ ಅಂಕೋಲಾ-ಕುಮಟಾದಲ್ಲಿ (Ankola-Kumta) ತಯಾರಿಸುವ ಹರಳುಪ್ಪು ಇದಾಗಿದೆ.
ಹೀಗಾಗಿ ಈ ಸಾಣಿಕಟ್ಟಾ ಉಪ್ಪಿಗೆ ಭಾರೀ ಬೇಡಿಕೆ ಮತ್ತು ಪ್ರಸಿದ್ಧಿ ಪಡೆದಿದೆ. ವಿವಿಧ ಬ್ರಾಂಡ್ ಕಂಪನಿಗಳ ಲೇಬಲ್ ಅಡಿ ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಉಪ್ಪಿನಂತೆ ಕಲ್ಲುಪ್ಪಿನಲ್ಲಿ ಹರಳುಪ್ಪಿನಲ್ಲಿ ರಾಸಾಯನಿಕ ಇರಲ್ಲ. ಜೊತೆಗೆ ಕಲ್ಲುಪ್ಪು ಆಗಲಿ ಅಥವಾ ಹರಳುಪ್ಪಿನಿಂದ ಯಾವ ದುಷ್ಪರಿಣಾಮವೂ ಇಲ್ಲ.
ಇಲ್ಲಿ ಮಾತ್ರ ಕಲ್ಲುಪ್ಪುನ ಉತ್ಪಾದನೆ
ಕಲ್ಲುಪ್ಪು, ಹರಳುಪ್ಪು ಪೌಡರ್ ಉಪ್ಪಿನಷ್ಟು ಕಟುವು ಅಲ್ಲ. ಕರ್ನಾಟಕದಲ್ಲಿ ಹರಳುಪ್ಪು ಅಥವಾ ಕಲ್ಲುಪ್ಪು ಉತ್ಪಾದನೆಯಾಗುವುದು ಅಂಕೋಲಾ-ಕುಮಟಾ ಪ್ರದೇಶಗಳಲ್ಲಿ ಮಾತ್ರ. ಇಲ್ಲಿಯ ಉಪ್ಪು ರಾಜ್ಯದ ಬಹುತೇಕ ಭಾಗಗಳಲ್ಲಿ ಮಾರುಕಟ್ಟೆ ಸ್ಥಾ
ಪಿಸಿದೆ.ಸಾಣಿಕಟ್ಟಾ ಉಪ್ಪು ತಯಾರಿಕೆ
ಅದರಲ್ಲೂ ಸಹಕಾರ ಪದ್ಧತಿಯಲ್ಲಿ ಬೆಳೆಯುವ ಸಾಣಿಕಟ್ಟಾ ಉಪ್ಪಿಗೆ ಹುಬ್ಬಳ್ಳಿ-ಧಾರವಾಡ, ಹಾವೇರಿ, ಹಾನಗಲ್ ಸೇರಿ ಉತ್ತರ ಕರ್ನಾಟಕದೆಲ್ಲೆಡೆ ಸರಬರಾಜಾಗುತ್ತದೆ. ಉಪ್ಪು ಉತ್ಪಾದನೆ ಎಷ್ಟೇ ಕುಸಿತವಾದರೂ ಸ್ವಂತ ಜಿಲ್ಲೆ ಉತ್ತರ ಕನ್ನಡಕ್ಕೇ ಮೊದಲ ಆದ್ಯತೆ ಮೇಲೆ ಉಪ್ಪು ಹಂಚಿಕೆ ಮಾಡಲಾಗುತ್ತಿದೆ. ಆದರೆ ಖರೀದಿಸಿದ ಉಪ್ಪನ್ನು ಹೆಚ್ಚಿನ ದರಕ್ಕೆ ಬೇರೆ ಜಿಲ್ಲೆಗೆ ಮಾರಾಟವಾಗುತ್ತಿದೆ. ಜತೆಗೆ ಉಪ್ಪಿನ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದ್ದು ಜಿಲ್ಲೆಯಲ್ಲಿ ಉಪ್ಪಿನ ಕೊರತೆ ಎದುರಾಗಿದೆ
.ಸಾಣಿಕಟ್ಟಾ ಉಪ್ಪು ತಯಾರಿಕೆ
ಭೋಜನ ತಯಾರಿಕೆಯಲ್ಲಿ ಲೆಕ್ಕಕ್ಕೆ ನಿಲುಕದ ಉಪ್ಪು, ಬಾಣಸಿಗರ ಸಮಸ್ಯೆ
ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಉಪ್ಪು ಸಿಗುತ್ತಿಲ್ಲ. ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡುಗೆ ತಯಾರಿ ಮಾಡುವವರು ಇದುವರಿಗೆ ಇದೇ ಸಾಣಿಕಟ್ಟಾ ಉಪ್ಪು ಬಳಕೆ ಮಾಡುತ್ತಿದ್ದರು. ಆದರೆ, ಈಗ ಈ ಉಪ್ಪು ಸಿಗದೇ ಪುಡಿ ಉಪ್ಪನ್ನು ಬಳಕೆ ಮಾಡುತ್ತಿದ್ದು, ಬಳಕೆಗೆ ಸರಿಯಾದ ಹಿಡಿತ ಸಿಗದೇ ಇರುವುದರಿಂದ ಅಡುಗೆಯಲ್ಲಿ ಉಪ್ಪಿನ ರುಚಿ ಏರುಪೇರಾಗುತ್ತಿದೆ ಎಂದು ಬಾಣಸಿಗರು ಹೋದ ಕಡೆಗಳಲ್ಲಿ ಇದೇ ಸಬೂಬು ಹೇಳುತ್ತಿದ್ದಾ
ರೆ.ಸಾಣಿಕಟ್ಟಾ ಉಪ್ಪು ತಯಾರಿಕೆ
ಇದನ್ನೂ ಓದಿ: Fact Check: ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಿಂದ ಬದುಕಿಸಲು ಸಾಧ್ಯವೇ?
ಜಿಲ್ಲೆಯಲ್ಲಿ 12 ಸಾವಿರ ಟನ್ ಉಪ್ಪು ಉತ್ಪಾದನೆ
ಜಿಲ್ಲೆಯಲ್ಲಿ 12,000 ಸಾವಿರ ಟನ್ ಉಪ್ಪು ತಯಾರಾಗುತ್ತಿತ್ತು. ಆದರೆ ಈಗ 3 ಸಾವಿರ ಟನ್ ಉಪ್ಪು ಉತ್ಪಾದನೆಗೆ ಕುಸಿದಿದೆ. ಗೋಕರ್ಣ ಸಾಣಿಕಟ್ಟಾ ಉಪ್ಪಿಗೆ ಕೇವಲ ರಾಜ್ಯದಲ್ಲಿ ಅಷ್ಟೆ ಅಲ್ಲದೆ ಹೊರ ರಾಜ್ಯದಲ್ಲೂ ಬೇಡಿಕೆ ಇದೆ.
ಈಗ ಉಪ್ಪಿನ ತಯಾರಿಕೆ ತೀರಾ ಕುಸಿತ ಕಂಡಿದೆ ಜತೆಗೆ ತಯಾರಿಸಿದ ಸಾವಿರಾರು ಟನ್ ಉಪ್ಪು ಪ್ರವಾಹದ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಸಂಗ್ರಹಿಸಿದ ಉಪ್ಪು ಕೂಡಾ ಈಗ ಇಲ್ಲ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಪ್ರತಿ ಅಂಗಡಿಯಲ್ಲೂ ಪ್ರತಿ ಮನೆ ಮನೆಯಲ್ಲೂ ಕಾಣುತ್ತಿದ್ದ ಗೋಕರ್ಣ ಸಾಣಿಕಟ್ಟಾ ಉಪ್ಪಿನ ಪ್ಯಾಕೆಟ್ ಈಗ ಕಾ
ಣುತ್ತಿಲ್ಲ.ಸಾಣಿಕಟ್ಟಾ ಉಪ್ಪು ತಯಾರಿಕೆ
ಇದನ್ನೂ ಓದಿ: Sanikatta Salt: ತಿನ್ನೋಕೆ ಉಪ್ಪೇ ಸಿಗಲ್ಲ ಜೋಕೆ! ಉಪ್ಪು ತಯಾರಾಗುವುದು ಹೇಗೆ? ಬೆಳೆಗಾರರ ಜೀವನ ಉಪ್ಪಾಗಿದ್ದೇಕೆ?
ಉಪ್ಪು ತಯಾರಿಕೆ ಆರಂಭವಾದ ಮೇಲೆ ಇದೇ ಮೊದಲು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಾಣಿಕಟ್ಟಾ ಉಪ್ಪಿಗೆ ಬರ ಬಂದಿದೆ. ಉಪ್ಪು ತಯಾರಿಕೆಯಲ್ಲಿ ತೀರಾ ಸಮಸ್ಯೆ ಆಗಿದೆ.





Post a Comment