Janardhan Reddy: ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಕ್ಲಿಕ್ ಆಗಿಲ್ಲ; ರೆಡ್ಡಿ ಹೊಸ ಪಕ್ಷಕ್ಕೆ ಜೋಶಿ ಪ್ರತಿಕ್ರಿಯೆ


 ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು

 ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಷ್ಟಾಗಿ ಕ್ಲಿಕ್ ಆಗಿಲ್ಲ ಅನ್ನೋ ಮೂಲಕ, ಜನಾರ್ದನ್ ರೆಡ್ಡಿಯವರ ಹೊಸ ಪಕ್ಷ ಸ್ಥಾಪನೆ ವರ್ಕ್ ಔಟ್ ಆಗಲ್ಲ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ

ಹುಬ್ಬಳ್ಳಿ: ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು (Regional Political Party) ಕ್ಲಿಕ್ ಆಗಿಲ್ಲ ಅಂತ ಅಭಿಪ್ರಾಯಪಟ್ಟಿರುವ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi), ಹೊಸ ಪಕ್ಷದಿಂದ ಏನೂ ಬದಲಾವಣೆಯಾಗಲ್ಲ ಅಂತ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ್ ರೆಡ್ಡಿ (Former Minister Janardhan Reddy) ಹೊಸ ಪಕ್ಷ ಘೋಷಣೆ ಮಾಡಿದ್ದಾರೆ ಅನ್ನೋದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಕರ್ನಾಟಕದಲ್ಲಿ (Karnataka Politics) ಯಾವುದೇ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಯಶಸ್ಸು ಕಂಡಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು

ಜನಾರ್ದನ್ ರೆಡ್ಡಿ ಪಕ್ಷ ಕಟ್ಟಿರುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಯಾವ ಪಕ್ಷ ಕಟ್ಟಿದ್ದಾರೆ, ಏನು ಮಾಡಿದ್ದಾರೆ ಅಂತ ಗೊತ್ತಿಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಜನಾರ್ದನ್ ರೆಡ್ಡಿ ಅವರ ಮನವೊಲಿಕೆ ಬಿಜೆಪಿ ವಿಫಲವಾಯಿತಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಲು ಜೋಶಿ ನಿರಾಕರಿಸಿದ

ನಾನು ಎಲ್ಲವನ್ನೂ ತಿಳಿದುಕೊಂಡೇ ಮಾತನಾಡುತ್ತೇನೆ. ಸದ್ಯಕ್ಕೆ ಏನೂ ಹೇಳಲ್ಲ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಯಶಸ್ಸು ಕಂಡಿಲ್ಲ ಅಂತಷ್ಟೇ ಹೇಳ್ತೇನೆ ಎಂದು ಜೋಶಿ ಅಭಿಪ್ರಾಯಪಟ್ಟರು.


ರು...ಟ್ಟರು ಜನಾರ್ದನ್ ರೆಡ್ಡಿ, ಮಾಜಿ ಸಚಿವ

ದರ್ಗಾ ತೆರವು ಮಾಡುವಂತೆ ಸೂಚಿಸಿದ್ದು ನಾನೇ ಎಂದ ಜೋಶಿ

ಹುಬ್ಬಳ್ಳಿಯ ಬೈರಿದೇವರಕೊಪ್ಪ ದರ್ಗಾ ತೆರವು ಮಾಡುವಂತೆ ಸೂಚಿಸಿದ್ದು ನಾನೇ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಧೈರ್ಯವಾಗಿಯೇ ಹೇಳ್ತೇನೆ, ಇದರಲ್ಲಿ ಮುಚ್ಚು ಮರೆಯೇನಿಲ್ಲ. ಇದರಲ್ಲಿ ರಾಜಕೀಯ ಷಡ್ಯಂತ್ರ ಅನ್ನೋದು ಬಹಳ ಹಾಸ್ಯಾಸ್ಪದ.

13 ದೇವಸ್ಥಾನ ತಗೆದಾಗ ನಿಮಗೆ ನೋವು ಆಗಲಿಲ್ಲವೇ?

ಯಾರು ಯಾರು ವಿಧಾನಸೌಧದಲ್ಲಿ ಉದ್ದುದ್ದ ಭಾಷಣ ಮಾಡಿದ್ದಾರೆ ಅವರಿಗೆ ಹೇಳ್ತೀನಿ. ಬಿಆರ್​​ಟಿಎಸ್ ಡಿಸೈನ್ ಫಿಕ್ಸ್ ಆಗಿದ್ದು ಸಿದ್ದರಾಮಯ್ಯ ಕಾಲದಲ್ಲಿ. ನಾನು ಸಿದ್ದರಾಮಯ್ಯರನ್ನ ಕೇಳ್ತೀನಿ, 13 ದೇವಸ್ಥಾನ ತಗೆದಾಗ ನಿಮಗೆ ಏನೂ ಅನ್ನಿಸಲಿಲ್ಲವೇ? ದರ್ಗಾ ತೆರವು ಮಾಡಿದ ಕೂಡಲೇ ನಿಮಗೆ ನೋವಾಗುತ್ತದೆಯೇ ಎಂದು ಕೇಳಿದರು.

ತುಷ್ಟೀಕರಣ ನೀತಿಯಿಂದ ಕಾಂಗ್ರೆಸ್ ವಿರೋಧ ಪಕ್ಷ ಆಗೋ ಯೋಗ್ಯತೆಯನ್ನು ಕಳೆದುಕೊಂಡಿದೆ. ದೇವಸ್ಥಾನ ತಗೆದಾಗ ನೀವ್ಯಾಕೆ ವಿಧಾನಸೌಧದಲ್ಲಿ ಪ್ರಸ್ತಾಪ ಮಾಡಲಿಲ್ಲ. ಇವಾಗ ಯಾಕೆ ನೆನಪಾಯ್ತು. ನಾನು ಮುಸ್ಲಿಮರಿಗೆ ಹೇಳ್ತೀನಿ, ನಾವೆಲ್ಲ ಅಣ್ಣ ತಮ್ಮಂದಿರು. ನಿಮಗೆ ಇವರು ಮಿಸ್ ಗೈಡ್ ಮಾಡ್ತಿದಾರೆ. ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ ಎಂದು ಜೋಶಿ ಕಿಡಿಕಾರಿದರು.

ಕಾಂಗ್ರೆಸ್ ನಾಯಕರದ್ದು ಇಬ್ಬಗೆಯ ನೀತ

‌ನಾನು ಆನ್ ರೆಕಾರ್ಡ್ ಹೇಳ್ತೀನಿ, ಯಾರೂ ವಿಧಾನಸೌಧದಲ್ಲಿ ಭಾಷಣ ಮಾಡಿದಾರೋ ಅವರೇ ನಮಗೆ ಮಸೀದಿ ತಗೆಯೋಕೆ ಹೇಳಿದ್ದಾರೆ. ನಾವು ವಿರೋಧ ಮಾಡ್ತೀವಿ, ನೀವು ರಾತ್ರೋ ರಾತ್ರೀ ತಗೀರಿ ಎಂದು ಕಾಂಗ್ರೆಸ್ ನಾಯಕರೇ ನಮಗೆ ಹೇಳಿದ್ದಾರೆ. ಇದು ಕಾಂಗ್ರೆಸ್ ಇಬ್ಬಗೆಯ ನೀತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Janardhan Reddy: 2013ರ ರಾಜಕೀಯ ಸನ್ನಿವೇಶ ಸೃಷ್ಟಿಯಾಗುತ್ತಾ? ಡಿಸಿಎಂ ಆಗ್ತಾರಾ ಶ್ರೀರಾಮುಲು?

ದರ್ಗಾ ತೆರವು ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಇತ್ತು. ದೇವಸ್ಥಾನ ತೆರವು‌ ಮಾಡೋವಾಗ ಜನ ನನ್ನ ಹತ್ತಿರ ಬಂದಿದ್ದರು/ ನಾನು ಅವರನ್ನು ಮನವೊಲಿಸಿ ತೆರವು ಮಾಡಿಸಿದೆ. ಆದ್ರೆ ಕಾಂಗ್ರೆಸ್​​ನವರು ನಮ್ಮ‌ ಹತ್ತಿರ ದರ್ಗಾ ತೆರವು ಮಾಡಿ ಅಂತಾರೆ. ಅವರ ಹತ್ರ ಹೋಗಿ ವಿರೋಧ ಮಾಡಿ ಅಂತಾರೆ ಎಂದರು.

 ಜನಾರ್ದನ್ ರೆಡ್ಡಿ, ಮಾಜಿ ಸಚಿವ

ಒಳ್ಳೆ ಮುಸಲ್ಮಾನರು ಸಹಕಾರ ಕೊಟ್ಟಿದ್ದಾರೆ

ಮಸೀದಿ ತೆರವು ಮಾಡಿರೋದಕ್ಕೆ ವಿಜಯೋತ್ಸವ ಆಚರಣೆ ಮಾಡೋ ಪೃವತ್ತಿ ಇರಬಾರದು. ಒಳ್ಳೆ ಮುಸಲ್ಮಾನರು ಸಹಕಾರ ಕೊಟ್ಟಿದ್ದಾರೆ. ಆದರೆ ಅವರು ಕೋರ್ಟ್​​ಗೆ ಹೋಗಬಾರದಿತ್ತು ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ

Post a Comment

Previous Post Next Post