ಮೋದಿ-ರಾಹುಲ್ ಗಾಂಧಿ (Image courtesy: Money Control)
ಕಾಂಗ್ರೆಸ್ 99 ಪಡೆದಿದೆ. ಆದರೆ ಅದು 100ಕ್ಕೆ 99 ಅಲ್ಲ, 543ಕ್ಕೆ 99 ಅಂತ ಮೋದಿ ಟೀಕಿಸಿದ್ರು. ಬಾಲಕ ಬುದ್ಧಿ ಅಂತ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಮೋದಿ ಟೀಕಿಸಿದ್ರು.ಲೋಕಸಭೆ: ರಾಹುಲ್ ಗಾಂಧಿ (Rahul Gandhi) ಹಾಗೂ ವಿಪಕ್ಷಗಳ (Opposition Party) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುಡುಗಿದ್ದಾರೆ. ಲೋಕಸಭೆಯಲ್ಲಿ (Lok Sabha) ಮಾತನಾಡಿದ ಅವರು ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ (Congress) ಕಳಪೆ ಸಾಧನೆ ಮುಂದುವರೆದಿದೆ ಅಂತ ಟೀಕಿಸಿದ್ರು. ಕಾಂಗ್ರೆಸ್ 99 ಪಡೆದಿದೆ. ಆದರೆ ಅದು 100ಕ್ಕೆ 99 ಅಲ್ಲ, 543ಕ್ಕೆ 99 ಅಂತ ಮೋದಿ ಟೀಕಿಸಿದ್ರು. ‘ಬಾಲಕ ಬುದ್ಧಿ’ (Balak Budhhi) ಅಂತ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಮೋದಿ ಟೀಕಿಸಿದ್ರು.ಬಾಲಕ ಬುದ್ಧಿ ಅಂತ ಮೋದಿ ಟೀಕೆಸಂಬಂಧಿತ ಸುದ್ದಿಹತ್ರಾಸ್ ಕಾಲ್ತುಳಿತಕ್ಕೆ ಸತ್ತವರ ಸಂಖ್ಯೆ 100ಕ್ಕೆ ಏರಿಕೆ; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆPM Modi Speech: ಹಿಂದುತ್ವ ತೆಗಳೋದು ಕಾಂಗ್ರೆಸ್‌ಗೆ ಫ್ಯಾಶನ್! ವಿಪಕ್ಷಗಳ ವಿರುದ್ಧ ಗುಡುಗಿದ ಮೋದಿ!ಉಗ್ರರನ್ನು ಅವರ ಮನೆಗೇ ನುಗ್ಗಿ ಭಾರತ ಹೊಡೆಯುತ್ತೆ! ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೋದಿ ಮಾತುPM Modi: ಆರ್ಟಿಕಲ್ 370 ಬಂದ್ಮೇಲೆ ಒಬ್ರು ಒಂದು ಸಣ್ಣ ಕಲ್ಲು ಕೂಡ ಎಸೆದಿಲ್ಲ! ಸದನದಲ್ಲಿ ಮೋದಿ ಘರ್ಜನೆ!ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ರು. ಬಾಲಕ ಬುದ್ಧಿ ಅಂತ ಪರೋಕ್ಷವಾಗಿ ಮೋದಿ ಟೀಕಿಸಿದ್ರು. ಕಾಂಗ್ರೆಸ್ ನಾಯಕರು ಸಹಾನುಭೂತಿ ಪಡೆಯಲು ನಾಟಕ ನಡೆಸಿದ್ದಾರೆ ಎಂದು ಆರೋಪಿಸಿದ್ರು.ಕಾಂಗ್ರೆಸ್ 99 ಸ್ಥಾನ ಪಡೆದಿದೆ!ಕಾಂಗ್ರೆಸ್ ಸೋಲಿನ ಸರಣಿ ಮುಂದುವರಿದಿದೆ ಅಂತ ಮೋದಿ ಟೀಕಿಸಿದ್ರು. ಕಾಂಗ್ರೆಸ್ 99 ಸ್ಥಾನ ಪಡೆದಿದೆ. ಆದರೆ 100ಕ್ಕೆ 99 ಅಲ್ಲ, 543ಕ್ಕೆ 99 ಅಂತ ಮೋದಿ ಟೀಕಿಸಿದ್ರು.ಇದನ್ನೂ ಓದಿ: Modi vs Rahul Gandhi: ನಮ್ಮದು ತುಷ್ಟೀಕರಣ ಅಲ್ಲ, ಸಂತುಷ್ಟೀಕರಣ! ಲೋಕಸಭೆಯಲ್ಲಿ ರಾಹುಲ್ ಗಾಂಧಿಗೆ ಮೋದಿ ಕೌಂಟರ್ಉಗ್ರರ ಮನೆಗೆ ನುಗ್ಗಿ ಹೊಡೆಯಿತು2014ರ ಮೊದಲು ಇಡೀ ದೇಶದಲ್ಲಿ ಆತಂಕದ ಸ್ಥಿತಿ ಇತ್ತು. ಹಿಂದೂ ಸ್ಥಾನದ ಮೂಲೆ ಮೂಲೆಯನ್ನೂ ಟಾರ್ಗೆಟ್ ಮಾಡ್ತಿತ್ತು. ಆಗ ಸರ್ಕಾರ ಮೌನವಾಗಿ ಇರುತ್ತಿತ್ತು. ಆದರೆ 2014ರ ನಂತರ ಭಾರತ ಮನೆಗೆ ನುಗ್ಗಿ ಅವರನ್ನು ಹೊಡೆಯಿತು. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡ್ತು ಅಂತ ಮೋದಿ ಲೋಕಸಭೆಯಲ್ಲಿ ಹೆಮ್ಮೆಯಿಂದ ನುಡಿದಿದ್ದಾರೆ. ಭಾರತ ಏನಾದರೂ ಮಾಡುತ್ತದೆಆದಾದ ಬಳಿಕ ಉಗ್ರವಾದ ಕಡಿಮೆಯಾಗ್ತಾ ಬಂತು. ಭಾರತ ಏನಾದರೂ ಮಾಡುತ್ತದೆ ಅನ್ನೋದು ದೃಢವಾಯ್ತು. ದೇಶದ ಒಬ್ಬೊಬ್ಬ ನಾಗಕಿರಕರಿಗ ಗೊತ್ತು. ನಮ್ಮ ಸುರಕ್ಷತೆಗಾಗಿ ಭಾರತ ಏನಾದರೂ ಮಾಡುತ್ತದೆ ಅಂತ ಇಡೀ ವಿಶ್ವಕ್ಕೆ ತಿಳಿಯಿತು ಅಂತ ಮೋದಿ ಹೇಳಿದ್ದಾರೆ.ನಾನು 24 ಗಂಟೆಯೂ ಕೆಲಸ ಮಾಡುತ್ತೇನೆದೇಶದ ಪರಿವರ್ತನೆಯ ಕಾಲ ಶುರುವಾಗಿದೆ, 10 ವರ್ಷಗಳ ನಮ್ಮ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಂಪರ್ಕ, ಪಡಿತರ ತಲುಪಿಸೋ ವ್ಯವಸ್ಥೆ ಆಗಿದೆ. ನಾನು ದಿನದ 24 ಗಂಟೆಯೂ ಶ್ರಮಿಸುತ್ತೇನೆ ಅಂತ ಮೋದಿ ಹೇಳಿದ್ರು. ಆರ್ಟಿಕಲ್ 370.. ಅದನ್ನು ಪೂಜೆ ಮಾಡೋ ಜನರು, ವೋಟ್ ಬ್ಯಾಂಕ್‌ಗೋಸ್ಕರ, ಭಾರತದ ಸಂವಿಧಾನ ಜಮ್ಮು ಕಾಶ್ಮೀರ ಗಡಿಗೆ ಪ್ರವೇಶ ಮಾಡೋಕೆ ಆಗ್ತಿರಲಿಲ್ಲ… ಆದ್ರೀಗ ಜಮ್ಮು ಕಾಶ್ಮೀರದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಅನ್ವಯವಾಗುತ್ತಿದೆ.ಸೇನೆ ಮೇಲೆ ಕಲ್ಲು ಹೊಡಿತಿದ್ರು, ನಾವು ನಿರಾಶೆಯಲ್ಲಿ ಹಿಂತಿರುಗಬೇಕಿತ್ತು. ಆದ್ರೆ ಈಗ ಆರ್ಟಿಕಲ್ 370 ದಿವಾನಗಿರಿ ಮುಗಿದಿದೆ, ಕಲ್ಲು ಹೊಡೆಯೋದು ನಿಂತಿದೆ. ಪ್ರಜಾತಂತ್ರ ಗೆದ್ದಿದೆ. ಭಾರತದ ತಿರಂಗಾ ಧ್ವಜದ ಮೇಲೆ ನಂಬಿಕೆ ಬಂದಿದೆ. ಪ್ರಜಾತಂತ್ರದ ಮೇಲೆ ನಂಬಿಕೆ ಬಂದಿದ. ಅದಕ್ಕಾಗೆ ಜಮ್ಮು ಕಾಶ್ಮೀರ ಜನ ಮನೆಯಿಂದ ಹೊರಬಂದು ವೋಟ್ ಮಾಡಿದ್ರು ಅಂತ ಮೋದಿ ಅಭಿಪ್ರಾಯಪಟ್ಟರು

Post a Comment