ಭೋಜಶಾಲಾ
ಉತ್ಖನನದಲ್ಲಿ ಲಭಿಸಿರುವ ವಿಗ್ರಹಗಳಲ್ಲಿ ವಾಗ್ದೇವಿ (ಸರಸ್ವತಿ), ಮಹಿಷಾಸುರ ಮರ್ದಿನಿ, ಗಣೇಶ, ಕೃಷ್ಣ, ಮಹಾದೇವ, ಬ್ರಹ್ಮ ಮತ್ತು ಹನುಮಾನ್ ವಿಗ್ರಹಗಳು ಸೇರಿವೆ ಎಂದು ಮೂಲಗಳು ಹೇಳಿವೆ.ವಿವಾದಿತ ಭೋಜಶಾಲಾ ಕಮಲ್ ಮೌಲಾ ಮಸೀದಿ ಪ್ರಾಂಗಣದಲ್ಲಿ 39 ಹಿಂದೂ ಭಗ್ನ ವಿಗ್ರಹಗಳು ಪತ್ತೆಯಾಗಿವೆ. ಹೌದು, ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ/ಕಮಲ್ ಮೌಲಾ ಮಸೀದಿಯ ಪ್ರಾಂಗಣದಲ್ಲಿ ಹೈಕೋರ್ಟ್‌ನ ಆದೇಶದಂತೆ ಕೈಗೊಳ್ಳಲಾಗಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ (ಎಎಸ್‌ಐ) ಉತ್ಖನನ ಮುಕ್ತಾಯಗೊಂಡಿದ್ದು, 39 ಭಗ್ನ ಹಿಂದೂ ವಿಗ್ರಹಗಳು ದೊರೆತಿವೆ.ಈವರೆಗೆ ಸಮೀಕ್ಷೆಯಲ್ಲಿ 39 ಮುರಿದ ವಿಗ್ರಹಗಳು ಸೇರಿದಂತೆ ಒಟ್ಟೂ 1,710 ಅವಶೇಷಗಳು ಪತ್ತೆಯಾಗಿವೆ.ಯಾವೆಲ್ಲಾ ವಿಗ್ರಹಗಳು ಪತ್ತೆಯಾಗಿವೆ?ಉತ್ಖನನದಲ್ಲಿ ಲಭಿಸಿರುವ ವಿಗ್ರಹಗಳಲ್ಲಿ ವಾಗ್ದೇವಿ (ಸರಸ್ವತಿ), ಮಹಿಷಾಸುರ ಮರ್ದಿನಿ, ಗಣೇಶ, ಕೃಷ್ಣ, ಮಹಾದೇವ, ಬ್ರಹ್ಮ ಮತ್ತು ಹನುಮಾನ್ ವಿಗ್ರಹಗಳು ಸೇರಿವೆ ಎಂದು ಮೂಲಗಳು ಹೇಳಿವೆ. ಆದರೆ ಈ ಸಮೀಕ್ಷೆ ಬಗ್ಗೆ ಮುಸ್ಲಿಂ ಸಮುದಾಯದವರು ಚಕಾರ ಎತ್ತಿದ್ದು, ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ʻಈ ವಿಗ್ರಹಗಳು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದ್ದಾರೆ.ಸಂಬಂಧಿತ ಸುದ್ದಿAncestors Rising: ಆಯಸ್ಕಾಂತದಂತೆ ಸೆಳೆಯುತ್ತಿದೆ ಯುದ್ಧದ ದೇವತೆಯ ಪ್ರಾಚೀನ ದೇಗುಲ!Ancestors Rising: ಕಡಬದಲ್ಲಿ 800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ, 'ತುಳು ರಾಜ್ಯ' ಪದದ ಉಲ್ಲೇಖ!Ancestors Rising: ಕಳೆದು ಹೋಗಿದ್ದ 4ನೇ ಶತಮಾನದ ಮುತ್ತಿನ ನಗರಿ ಪತ್ತೆ!ತಂದೆಗೆ ಲಿವರ್ ದಾನ ಮಾಡಲು ಅಪ್ರಾಪ್ತ ಮಗಳಿಗೆ ಹೈಕೋರ್ಟ್ ಅನುಮತಿ; ಅಪರೂಪದ ಕೇಸ್ಜುಲೈ 4ಕ್ಕೆ ವರದಿ ಸಲ್ಲಿಕೆ?ಬಹು-ಶಿಸ್ತಿನ ವೈಜ್ಞಾನಿಕ ಸಮೀಕ್ಷೆಯು ಮುಕ್ತಾಯಗೊಂಡಿದ್ದು, ಜುಲೈ 4 ರಂದು ನ್ಯಾಯಾಲಯದ ಮುಂದೆ ASI ತನ್ನ ಸಂಶೋಧನೆಗಳ ಕುರಿತು ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ‘ರಚನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು’ ಆಳವಾಗಿ ಉತ್ಖನನ ನಡೆಸಲು ASI ಎರಡನೇ ಬಾರಿ ಅವಕಾಶವನ್ನು ಕೇಳಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.ಸಮೀಕ್ಷೆಯ ಕೊನೆಯ ದಿನವಾದ ಜೂನ್ 27 ರಂದು, ಭೋಜಶಾಲಾ ಉತ್ತರ ಭಾಗದಲ್ಲಿ ಉತ್ಖನನ ಮಾಡುವಾಗ ಎಎಸ್ಐ ಕನಿಷ್ಠ ಏಳು ರಚನೆಗಳನ್ನು ಕಂಡುಹಿಡಿದಿದೆ ಎಂದು HFJ ಪ್ರತಿನಿಧಿ ಗೋಪಾಲ್ ಶರ್ಮಾ ಹೇಳಿದ್ದಾರೆ. “ಅವುಗಳಲ್ಲಿ ಒಂದು ಭಗ್ನಗೊಂಡ ದೇವಿಯ ವಿಗ್ರಹ, ಮತ್ತು ಉಳಿದವು ಸ್ತಂಭದ ಮುರಿದ ತುಣುಕುಗಳಾಗಿವೆ. ವಿಗ್ರಹದ ಕುತ್ತಿಗೆ ಮತ್ತು ಮುಖ ಮಾತ್ರ ಪತ್ತೆಯಾಗಿದೆ” ಎಂದು ಅವರು ಹೇಳಿದರು.ಈ ಪ್ರದೇಶದಲ್ಲಿ ಪರೀಕ್ಷಿಸಲು ಎಎಸ್‌ಐ ಭೂಮಿಯೊಳಗೆ ನುಗ್ಗುವ ರಾಡಾರ್‌ಗಳ ಬಳಕೆಯ ಮೂಲಕ ಉತ್ಖನನ ನಡೆಸಿದೆ. HFJ (ಹಿಂದೂ ಫ್ರಂಟ್ ಫಾರ್ ಜಸ್ಟಿಸ್ )ನ ಆಶಿಶ್ ಗೋಯಲ್ ಮಾತನಾಡಿ, “ASI ಉತ್ಖನನದ ಅಂತ್ಯವನ್ನು ಘೋಷಿಸಿದೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ ಮತ್ತು ಅವರು ಯಾವುದೇ ಹೆಚ್ಚಿನ ಉತ್ಖನನದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದುವರೆಗೆ ಸಿಕ್ಕಿರುವ ಎಲ್ಲ ಅವಶೇಷಗಳನ್ನು ಸ್ವಚ್ಛಗೊಳಿಸಿ, ನಂಬರ್ ಹಾಕಿ ಹಲವನ್ನು ಕಾರ್ಬನ್ ಡೇಟಿಂಗ್ ಗೆ ಕಳುಹಿಸಲಾಗಿದೆ” ಎಂದು ಸಮೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.ಜಾಹೀರಾತುಸಮೀಕ್ಷೆಯ ಬಗ್ಗೆಯೇ ಅನುಮಾನಇನ್ನೂ ಮುಸ್ಲಿಂ ಸಮುದಾಯದವರು ತಪಾಸಣೆಯ ಸಂದರ್ಭದಲ್ಲಿ ನ್ಯಾಯಾಲಯದ ನಿಯಮಗಳನ್ನು ಪಾಲಿಸಿಲ್ಲ, ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಸಮೀಕ್ಷೆ ನಡೆಸಿಲ್ಲ ಎಂಬುದು ನಮ್ಮ ಪ್ರಮುಖ ಆಕ್ಷೇಪ’ ಎಂದು ಧರ್ ಶಹರ್ ಖಾಜಿ ವಾಕರ್ ಸಾದಿಕ್ ಹೇಳಿದ್ದಾರೆ.ಏನಿದು ಭೋಜಶಾಲಾ ವಿವಾದ?ಹಿಂದೂಗಳು ಭೋಜಶಾಲವು ವಾಗ್ದೇವಿ (ಸರಸ್ವತಿ) ದೇವಿಯ ದೇವಸ್ಥಾನವಾಗಿತ್ತು ಎಂದು ನಂಬುತ್ತಾರೆ, ಆದರೆ ಮುಸ್ಲಿಮರು ಇದು ಆಗಿನಿಂದಲೂ ಮಸೀದಿಯೇ ಆಗಿತ್ತು ಎಂದು ವಾದ ಮಾಡುತ್ತಿದ್ದಾರೆ.ವಾಗ್ದೇವಿ ದೇಗುಲವಿದೆ ಎಂದು ಪ್ರತಿ ಮಂಗಳವಾರ ಪೂಜೆ ಸಲ್ಲಿಸಿದರೆ, ಇತ್ತ ಮುಸಲ್ಮಾನರು ಈ ಜಾಗವನ್ನು ಕಮಲ್ ಮೌಲಾ ಮಸೀದಿ ಎಂದು ಕರೆದು, ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಬ್ಬರ ನಡುವಿನಾ ಜಟಾಪಟಿ ಕೋರ್ಟ್‌ನ ಮೆಟ್ಟಿಲೇರಿದ್ದು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಈ ವರ್ಷದ ಮಾರ್ಚ್‌ನಲ್ಲಿ ಎಎಸ್‌ಐ ಸಮೀಕ್ಷೆಯನ್ನು ಕೋರಿ ಹೈಕೋರ್ಟ್‌ನ ಇಂದೋರ್ ಪೀಠಕ್ಕೆ ಮನವಿ ಸಲ್ಲಿಸಿತು. ಇದನ್ನೂ ಓದಿ: Ancestors Rising: ಆಯಸ್ಕಾಂತದಂತೆ ಸೆಳೆಯುತ್ತಿದೆ ಯುದ್ಧದ ದೇವತೆಯ ಪ್ರಾಚೀನ ದೇಗುಲ!ಮೂಲತಃ ಈ ಕಟ್ಟಡ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ಮಧ್ಯಪ್ರದೇಶದ ಹೈಕೋರ್ಟ್ ಈ ವರ್ಷಾರಂಭದಲ್ಲಿ ಆದೇಶಿಸಿತ್ತು. ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ಪ್ರತಿನಿಧಿಗಳು ಪ್ರತಿದಿನ ಸಮೀಕ್ಷೆಯ ಸಮಯದಲ್ಲಿ ASI ತಜ್ಞರ ಜೊತೆಯಲ್ಲಿ ಇರಲು ಅನುಮತಿಸಲಾಗಿತ್ತು.ಓದಿ, ಓದಿಸಿ!ಭಾರತ ಒಂದೇ ಅಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲಿ ಘಟಿಸುತ್ತಿರುವ ಇಂತಹ ವಿಶಿಷ್ಟ ವಿದ್ಯಮಾನಗಳನ್ನು ಹೊತ್ತು ನ್ಯೂಸ್18 ಕನ್ನಡ ಜಾಲತಾಣ ನಿಮ್ಮ ಮುಂದೆ ಬರುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ನಿಮ್ಮ ಮನಸ್ಸು ಒಂದಕ್ಕೊಂದು ಜೋಡಿಸಿಕೊಳ್ಳಬಹುದು, ಪ್ರತ್ಯೇಕವಾಗಿ ಗಮನಿಸಬಹುದು. ಆದರೆ ನಿರ್ಲಕ್ಷಿಸಲಂತೂ ಸಾಧ್ಯವಿಲ್ಲ! ಬೇರೆಲ್ಲೂ ಸಿಗದ ವಿಭಿನ್ನ ಪ್ರಯತ್ನವನ್ನು ನೀವೂ ಓದಿ, ಇತರರಿಗೂ ಓದಿಸಿ.: ಬದಲಾವಣೆ ಜಗದ ನಿಯಮ. ಈ ಬದಲಾವಣೆ ಹೀಗೆ ಆಗುತ್ತೆ..ಯಾವಾಗ ಆಗುತ್ತೆ? ಹೇಗಾಗುತ್ತೆ? ಇದಕ್ಕೆ ‘ಇದಂ ಇತ್ಥಂ’ ಎಂಬ ಉತ್ತರ ಇಲ್ಲ. ಇದು ಪ್ರಕೃತಿಯ ವಿವೇಚನೆಗೆ ಬಿಟ್ಟಿದ್ದು. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಅಚ್ಚರಿ, ಕೆಲವೊಮ್ಮೆ ಆಘಾತ, ಕೆಲವೊಮ್ಮೆ ನಿರ್ಲಿಪ್ತ, ಕೆಲವೊಮ್ಮೆ ಮಾತ್ರ ಸುಳಿವು ಸಿಗುವಂಥ ಬೆಳವಣಿಗೆ ಇದು. ಮೂಲದ ನಂಟಿನ ಒಗಟು ಬಿಚ್ಚಿಡುವ ಘಟ್ಟವಿದು. ಸೂಕ್ಷ್ಮವಾಗಿ ಗಮನಿಸಿದಾಗ ಜಗತ್ತಿನಾದ್ಯಂತ ಇಂಥದ್ದೊಂದು ಬದಲಾವಣೆ ಈಗ ಶುರುವಾಗಿದೆಯಾ? ಈಗ ನಡೆಯುತ್ತಿರುವ ಹಲವು ಘಟನೆಗಳು ಈಗಲೇ ನಡೆಯುತ್ತಿರೋದ್ಯಾಕೆ? ಈ ಘಟನೆಗಳಿಗೆ ಪೂರಕ ವಾತಾವರಣ ಮೂಡಿರೋದು ಈಗಲೇ ಯಾಕೆ? ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕುವ ಪಯಣದ ಚಾರಣಿಗರು ಎಲ್ಲ. ಇಂಥದ್ದೇ ಅಪರೂಪದ, ಅಕಲ್ಪನೀಯ, ಘಟನಾವಳಿಗಳ ಹೆಕ್ಕಿ ತೆಗೆದು ನಿಮ್ಮ ಮುಂದಿಡುವ ಪ್ರಯತ್ನವೇ ನಮ್ಮ ಈ ಪುರಾತನರ ಪುನರುತ್ಥಾನ ಅಂದ್ರೆ Ancestors Rising ಲೇಖನ ಮಾಲೆಯ ಮುಖ್ಯ ಉದ್ದೇಶ. ನೀವೂ ನಮ್ಮ ಈ ಪಯಣದ ಭಾಗವಾಗಬೇಕು ಅನ್ನೋದು ನಮ್ಮ ಆಶಯ -ರಾಘವೇಂದ್ರ ಗುಡಿ

Post a Comment