ಎಲ್‌ಕೆ ಅಡ್ವಾಣಿಬಿಜೆಪಿ ಹಿರಿಯ ನಾಯಕ (Senior BJP leader), ಮಾಜಿ ಉಪ ಪ್ರಧಾನಿ (former Deputy Prime Minister) ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಮತ್ತೊಮ್ಮೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ದೆಹಲಿ: ಬಿಜೆಪಿ ಹಿರಿಯ ನಾಯಕ (Senior BJP leader), ಮಾಜಿ ಉಪ ಪ್ರಧಾನಿ (former Deputy Prime Minister) ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಮತ್ತೊಮ್ಮೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. 97 ವರ್ಷದ ಎಲ್‌ಕೆ ಅಡ್ವಾಣಿ (LK Advani) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನವದೆಹಲಿಯ (New Delhi) ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಮಥುರಾ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ (Apollo Hospital) ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಅಡ್ವಾಣಿ ಅವರು ಡಾ ವಿನಿತ್ ಸೂರಿ ಅವರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಪೋಲೋ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.ಈಗ ಅಡ್ವಾಣಿ ಆರೋಗ್ಯ ಹೇಗಿದೆ?ಸಂಬಂಧಿತ ಸುದ್ದಿHiccups: ಏನು ಮಾಡಿದ್ರೂ ಬಿಕ್ಕಳಿಕೆ ನಿಲ್ತಾ ಇಲ್ವ? ಹಾಗಾದ್ರೆ ಹೀಗೆ ಮಾಡಿHealth Care: ವಯಸ್ಸಾಗಿದ್ರೂ ಮಾಡಬಹುದು ಈ ವ್ಯಾಯಾಮಗಳನ್ನ, ಆರೋಗ್ಯಕ್ಕೂ ಒಳ್ಳೆಯದುHealth Tips: ವೈದ್ಯರು ಕೊಡೋ ಈ ಕೆಲವು ಸಿಂಪಲ್ ಟಿಪ್ಸ್ನಿಂದ ಆರೋಗ್ಯ ಭಾಗ್ಯDont Do This: ಜೋಕೆ, ಪಪ್ಪಾಯಿ ಜೊತೆ ಎಂದಿಗೂ ಈ 8 ಆಹಾರಗಳನ್ನು ತಿನ್ಬೇಡಿ!ಇಂದು ರಾತ್ರಿ 9 ಗಂಟೆಗೆ ಡಾ ವಿನಿತ್ ಸೂರಿ ಅವರ ಮೇಲ್ವಿಚಾರಣೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. 97 ವರ್ಷದ ಎಲ್ ಕೆ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಎಲ್‌ಕೆ ಅಡ್ವಾಣಿ ವೈದ್ಯರ ತೀವ್ರ ನಿಗಾದಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಅಡ್ವಾಣಿಕಳೆದ ಕೆಲ ಸಮಯದಿಂದ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ 96 ವರ್ಷದ ಎಲ್‌ಕೆ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಜೂನ್ 26ರಂದು ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಜೆರಿಯಾಟ್ರಿಕ್ ವಿಭಾಗದ ತಜ್ಞ ವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು.ಇದನ್ನೂ ಓದಿ: Modi vs Rahul Gandhi: ‘ಬಾಲಕ ಬುದ್ಧಿ’, 99 ಸ್ಥಾನ ದಾಟದ ಕಾಂಗ್ರೆಸ್! ಲೋಕಸಭೆಯಲ್ಲಿ ‘ಕೈ’ಗೆ ಮೋದಿ ಟಾಂಗ್ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಅಡ್ವಾಣಿನವೆಂಬರ್ 8, 1927 ರಂದು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ ಅಡ್ವಾಣಿ 1942 ರಲ್ಲಿ ಸ್ವಯಂಸೇವಕರಾಗಿ ಆರ್‌ಎಸ್‌ಎಸ್‌ಗೆ ಸೇರಿದರು. ಅವರು 1986 ರಿಂದ 1990 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, ನಂತರ 1993 ರಿಂದ 1998 ರವರೆಗೆ ಮತ್ತು 2004 ರಿಂದ 2005 ರವರೆಗೆ ಸೇವೆ ಸಲ್ಲಿಸಿದರು. 1980 ರಲ್ಲಿ ಪ್ರಾರಂಭವಾದಾಗಿನಿಂದ ಸುದೀರ್ಘ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೇ ವರ್ಷದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ ಕೆ ಅಡ್ವಾಣಿ ಅವರ ನಿವಾಸದಲ್ಲಿ ಭಾರತ ರತ್ನ ನೀಡಿ ಗೌರವಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಕೂಡ ಉಪಸ್ಥಿತರಿದ್ದರು. ಅಡ್ವಾಣಿ ಅವರಿಗೆ ವಯೋಸಹಜ ಅನಾರೋಗ್ಯದ ಕಾರಣದಿಂದ ಅವರ ನಿವಾಸದಲ್ಲಿಯೇ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು.

Post a Comment