ಟಾಲಿವುಡ್‌ನ ಕಲ್ಕಿ ಚಿತ್ರದ 700 ಕೋಟಿ ಅಬ್ಬರ; 1000 ಕೋಟಿಯತ್ತ ಯಶಸ್ವಿ ಪಯಣ.! ಟಾಲಿವುಡ್‌ನ ಬಹು ಕೋಟಿಯ ಕಲ್ಕಿ 2898 AD ಚಿತ್ರದ ಕಲೆಕ್ಷನ್ ಭರ್ಜರಿ ಆಗಿದೆ. 700 ಕೋಟಿ ಕಲೆಕ್ಷನ್ ಮಾಡೋ ಮೂಲಕ ಮುನ್ನುಗ್ಗುತ್ತಿದೆ. 1000 ಕೋಟಿಯತ್ತ ಇದರ ಪಯಣ ಬಲು ಜೋರಾಗಿಯೇ ಸಾಗುತ್ತಿದೆ. ಇದರ ವಿವರ ಇಲ್ಲಿದೆ ಓದಿ.ಟಾಲಿವುಡ್‌ನ ಕಲ್ಕಿ 2898AD ಸಿನಿಮಾ (Kalki Movie) ಯಶಸ್ವಿ ಆಗಿದೆ. 600 ಕೋಟಿ ಬಜೆಟ್‌ನಲ್ಲಿ (Budget) ರೆಡಿ ಆದ ಈ ಚಿತ್ರ ಹೊಸ ಕ್ರೇಜ್ ಹುಟ್ಟಿಸಿದೆ. ಚಿತ್ರದ ಪ್ರತಿ ಪಾತ್ರಗಳೂ ಜನರಲ್ಲಿ ಕುತೂಹಲ ಮೂಡಿಸಿವೆ. ಸಿನಿಮಾದ ಬುಜ್ಜಿಯಂತೂ (Bujji) ಸಿನಿ ಪ್ರೇಕ್ಷಕರಲ್ಲಿ ವಿಶೇಷ ಸೆಳತವನ್ನೆ ಕ್ರಿಯೇಟ್ ಮಾಡಿದೆ. ಕನ್ನಡದ ರಿಷಬ್ ಶೆಟ್ರು ಕೂಡ ಈ ಬುಜ್ಜಿಯನ್ನ ಓಡಿಸಿ ಖುಷಿಪಟ್ಟಿದ್ದಾರೆ. ಸಿನಿಮಾ ಪ್ರಚಾರಕ್ಕೂ ಹೆಲ್ಪ್ ಆಗಿರೋ ಈ ಬುಜ್ಜಿಯ ಈ ಸಿನಿಮಾ, ಮೊನ್ನೆ ಜೂನ್ 27 ರಂದು ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಿದೆ. ನೂರಾರು ಕೋಟಿಗಳಷ್ಟು ಗಳಿಕೆ ಮಾಡುತ್ತಲೇ ಮುನ್ನುಗ್ಗುತ್ತಿರೋ ಈ ಚಿತ್ರದ (Box Office Collection) ಬಾಕ್ಸ್ ಆಫೀಸ್ ಕಲೆಕ್ಷನ್ ಇದೀಗ 700 ಕೋಟಿ ಆಗಿದೆ.ಜಾಹೀರಾತುಸಿನಿಮಾ ತಂಡವೇ ಇದನ್ನ ವಿಶೇಷ ಪೋಸ್ಟರ್ ಮೂಲಕ ಹೇಳಿಕೊಂಡಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.ಸಂಬಂಧಿತ ಸುದ್ದಿRanveer Singh: ಕಲ್ಕಿಯಲ್ಲಿ ದೀಪಿಕಾ ನಟನೆ ಕೊಂಡಾಡಿದ ಪತಿ ರಣವೀರ್ ಸಿಂಗ್! ಸೌತ್ ಮೂವಿ ಬಗ್ಗೆ ಏನಂದ್ರು?Salaar-2 Movie: ಸಲಾರ್ 2 ಶೂಟಿಂಗ್ ಶೀಘ್ರವೇ ಆರಂಭ! ಆ್ಯಕ್ಷನ್ ಕಟ್ ಹೇಳೋಕೆ ನೀಲ್ ರೆಡಿ500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾದ ಸೌತ್ ಸ್ಟಾರ್! ಇವರಲ್ವಾ ರಿಯಲ್ ಹೀರೋ ಎಂದ ನೆಟ್ಟಿಗರುವೀರ್ ಸಾವರ್ಕರ್ ಕಥೆಗೆ ದುಡ್ಡು ಹಾಕಿದ ರಾಮ್ ಚರಣ್; ಹಂಪಿಯಲ್ಲಿಯೇ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್!ಬಾಕ್ಸ್ ಆಫೀಸ್‌ನಲ್ಲಿ ಕಲ್ಕಿ ಅಬ್ಬರ; 1000 ಕೋಟಿಯತ್ತ ಪಯಣ.!ಡಾರ್ಲಿಂಗ್ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾ ಯಶಸ್ವಿ ಆಗಿಯೇ ಓಡುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗಿರೋ ಈ ಚಿತ್ರದ ಯಶಸ್ವಿ ಪಯಣದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಒಂದು ನೂರು ಅಲ್ಲ..ಎರಡು ನೂರು ಅಲ್ಲ. ಬರೋಬ್ಬರು 600 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು.ಆದರೆ, ಇದೀಗ ಆ ಕೋಟಿ ಲೆಕ್ಕ ಇನ್ನು ಜಾಸ್ತಿ ಆಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ತನ್ನ ಅಧಿಕೃತ ಪೇಜ್‌ನಲ್ಲಿಯೇ ಈ ಮ್ಯಾಟರ್ ಹಂಚಿಕೊಂಡಿದೆ. ಕನಸಿನ ಓಟ ಮುಂದುವರೆದಿದೆ ಅಂತಲೂ ಒಂದು ಪೋಸ್ಟರ್ ಹಂಚಿಕೊಂಡಿದೆ. ಇದರಲ್ಲಿ ಬಾಕ್ಸ್ ಆಫೀಸ್‌ನ700 ಕೋಟಿ ಕಲೆಕ್ಷನ್ ಮ್ಯಾಟರ್ ರಿವೀಲ್ ಆಗಿದೆ.ಇದನ್ನೂ ಓದಿ: Ranveer Singh: ಕಲ್ಕಿಯಲ್ಲಿ ದೀಪಿಕಾ ನಟನೆ ಕೊಂಡಾಡಿದ ಪತಿ ರಣವೀರ್ ಸಿಂಗ್! ಸೌತ್ ಮೂವಿ ಬಗ್ಗೆ ಏನಂದ್ರು?ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರೋ ಕಲ್ಕಿ ಸಿನಿಮಾ.! ಕಲ್ಕಿ ಸಿನಿಮಾದ ಓಟ ಯಶಸ್ವಿ ಆಗಿಯೇ ಇದೆ. ಇದೀಗ ಈ ಚಿತ್ರದ ಕಲೆಕ್ಷನ್ ಗುರಿ ಬೇರೆ ಆಗಿದೆ. ಒಂದು ರೀತಿ1000 ಕೋಟಿಯತ್ತ ಇದರ ಗುರಿ ನೆಟ್ಟಿದೆ ಅಂತ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಪಯಣದಲ್ಲಿ ಯಶಸ್ಸಿನ ರುಚಿ ಆರಂಭದಲ್ಲಿಯೇ ಆಗಿದೆ. ಕಾರಣ, ಚಿತ್ರಕ್ಕೆ ಮೊದಲ ದಿನವೇ ಒಳ್ಳೆ ಓಪನಿಂಗ್ ಸಿಕ್ಕಿದೆ. ಜೊತೆಗೆ ಒಳ್ಳೆ ರಿವ್ಯೂ ಕೂಡ ಬಂದಿದೆ.ಕಲ್ಕಿ ಸಿನಿಮಾವನ್ನ 600 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿದೆ. ಡೈರೆಕ್ಟರ್ ನಾಗ್ ಅಶ್ವಿನ್ ಇದನ್ನ ಅದ್ಭುತವಾಗಿಯೇ ತೆಗೆದಿದ್ದಾರೆ. ಹಾಲಿವುಡ್ ಮಟ್ಟದಲ್ಲಿಯೇ ಸಿನಿಮಾ ರೆಡಿ ಆಗಿದೆ. ಕನ್ನಡಿಗರು ಸೇರಿದಂತೆ ಎಲ್ಲರೂ ಈ ಚಿತ್ರವನ್ನ ಮೆಚ್ಚಿಕೊಳ್ಳುತ್ತಿದ್ದಾರೆ.ಕಲ್ಕಿ ಚಿತ್ರದ ಮೆಚ್ಚಿದ ಬಾಲಿವುಡ್ ನಟ ರಣವೀರ್ ಸಿಂಗ್.!ಕಲ್ಕಿ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಸುಮತಿ ಅನ್ನೊ ಪಾತ್ರ ಮಾಡಿದ್ದಾರೆ. ಇದನ್ನ ಕಂಡ ನಟ ರಣವೀರ್ ಸಿಂಗ್ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಹೋಲಿಕೆಗೂ ನಿಲುಕದಂತ ಅಭಿನಯ ಅಂತ ದೀಪಿಕಾ ಪಾತ್ರವನ್ನ ಕೊಂಡಾಡಿದ್ದಾರೆ.ಅಮಿತಾಭ್ ಬಚ್ಚನ್ ಪಾತ್ರ ಇಡೀ ಸಿನಿಮಾದಲ್ಲಿ ತನ್ನದೇ ಖದರ್ ಕ್ರಿಯೇಟ್ ಮಾಡಿದೆ. ಅಶ್ವತ್ಥಾಮ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಣವೀರ್ ಸಿಂಗ್ ಈ ಪಾತ್ರ ಕಂಡು ಮೆಚ್ಚಿಕೊಂಡಿದ್ದಾರೆ. ಮನಸಾರೆ ಹೊಗಳಿದ್ದಾರೆ.ಇದೇ ರೀತಿ ಚಿತ್ರದ ಇತರ ಪಾತ್ರಗಳನ್ನು ಕೂಡ ರಣವೀರ್ ಸಿಂಗ್ ಇಷ್ಟಪಟ್ಟಿದ್ದಾರೆ. ಕಲ್ಕಿ ಸಿನಿಮಾವನ್ನ ಅನೇಕರು ಇನ್ನು ನೋಡಿಲ್ಲ. ಆದರೆ, ನೋಡುವ ಇರಾದೆ ಕೂಡ ಹೊಂದಿದ್ದಾರೆ. ಜೊತೆಗೆ ಈ ಸಿನಿಮಾ ಚೆನ್ನಾಗಿದೆ ಅನ್ನೋ ನಂಬಿಕೆ ಕೂಡ ಇವರಿಗೆ ಮೂಡಿದೆ ಅಂತಲೇ ಹೇಳಬಹುದು.

Post a Comment