ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್
ಚನ್ನಪಟ್ಟಣ ರಾಮನಗರ ಜಿಲ್ಲೆ ಬಿಟ್ಟು ಬೆಂಗಳೂರು ಸೇರುತ್ತಾ? ಹೌದು ಅಂತಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್! ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ.ಚನ್ನಪಟ್ಟಣ, ರಾಮನಗರ: ಚನ್ನಪಟ್ಟಣ (Channapatna) ತಾಲೂಕು ರಾಮನಗರ (Ramanagar) ಜಿಲ್ಲೆ ಬಿಟ್ಟು ಬೆಂಗಳೂರು (Bengaluru) ಸೇರುತ್ತಾ? ಹೌದು ಅಂತಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)! ಚನ್ನಪಟ್ಟಣದಲ್ಲಿ ಜನಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ. ಇದು ರಾಮನಗರ ಡಿವಿಜನ್ ಅಂತಾನೆ ಇರುತ್ತೆ. ಆದರೆ ಎಲ್ಲಾ ಬೆಂಗಳೂರಿಗೆ ಸೇರುತ್ತೆ ಅಂತ ಡಿಕೆಶಿ ಹೇಳಿದ್ದಾರೆ.ಜಾಹೀರಾತುಬೆಂಗಳೂರಿಗೆ ಸೇರುತ್ತೆ ಚನ್ನಪಟ್ಟಣ!ಸಂಬಂಧಿತ ಸುದ್ದಿಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ, ಸ್ಥಳಕ್ಕಾಗಿ ಈ ತಾಲೂಕುಗಳಲ್ಲಿ ಸ್ಥಳ ಹುಡುಕಾಟ
ಸಂಚಾರಿ ನಿಯಮ ಉಲ್ಲಂಘಿಸಿದರೆ ತಕ್ಷಣ ಮೊಬೈಲ್‌ಗೆ ಮೆಸೇಜ್, ದಂಡ ಕಟ್ದೇ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ!
DK Shivakumar: ಚನ್ನಪಟ್ಟಣದಲ್ಲಿ ಡಿಕೆಶಿ ಮಿಂಚಿನ ಸಂಚಾರ; ಎಚ್‌ಡಿಕೆ ಕೋಟೆ ಗೆಲ್ಲಲು ಡಿಸಿಎಂ ರಣತಂತ್ರ
ಕರ್ನಾಟಕದ ಈ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ₹1.11 ಇಳಿಕೆ; ನಿಮ್ಮ ಊರಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಬೆಂಗಳೂರಿಗೆ ಸೇರುತ್ತಾ? ಇದಕ್ಕೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಉತ್ತರ ನೀಡಿದ್ದಾರೆ. ಚನ್ನಪಟ್ಟಣವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತೆ ಅಂತ ಹೇಳಿದ್ದಾರೆ.ರಾಮನಗರ ಡಿವಿಜನ್ ಅಂತಿದ್ರೂ ಬೆಂಗಳೂರಿಗೆ ಸೇರುತ್ತೆನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಮ್ಮ ಟೆಕ್ಸ್ಟ್ ಬುಕ್ ಗಳನ್ನ ತೆಗೆದುನೋಡಿ. ರಾಮನಗರ, ಮಾಗಡಿ, ಕನಕಪುರ ಎಲ್ಲಾ ಬೆಂಗಳೂರು ಗ್ರಾಮಾಂತರ ಅಂತ ಇದೆ. ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ. ಇದು ರಾಮನಗರ ಡಿವಿಜನ್ ಅಂತಾನೆ ಇರುತ್ತೆ. ಆದರೆ ಎಲ್ಲಾ ಬೆಂಗಳೂರಿಗೆ ಸೇರುತ್ತೆ ಅಂತ ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಡಿಕೆಶಿ ಪುನರುಚ್ಚರಿಸಿದ್ದಾರೆ.ದನ್ನೂ ಓದಿ: Satish Jarkiholi: ‘ಮುಂದಿನ ಸಿಎಂ ಸತೀಶ್ ಜಾರಕಿಹೊಳಿ’! ಘೋಷಣೆ ಕೂಗುತ್ತಲೇ ಕೈ ಕಾರ್ಯಕರ್ತರಿಂದ ಕಾರಿಗೆ ಮುತ್ತಿಗೆ!ಚನ್ನಪಟ್ಟಣ ಬದಲಾವಣೆ ಮಾಡ್ಬೇಕುಚನ್ನಪಟ್ಟಣವನ್ನ ಬದಲಾವಣೆ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಗಳಿವೆ. ಬಡವರಿಗೆ ಸೈಟ್ ಹಂಚಿಲ್ಲ, ಮನೆ ಕೊಟ್ಟಿಲ್ಲ, ರಸ್ತೆ ಸರಿ ಇಲ್ಲ. ನಗರಸಭೆ, ತಾಲೂಕು ಕಚೇರಿಗೆ ಒಳ್ಳೆಯ ಕಟ್ಟಡ ಇಲ್ಲ ಅಂತ ಡಿಕೆಶಿ ಇಲ್ಲಗಳ ಸರಮಾಲೆಯನ್ನೇ ಹೇಳಿದ್ರು.ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕುಇಡೀ ನಗರವನ್ನ ಸಂಪೂರ್ಣ ಅಭಿವೃದ್ಧಿ ಮಾಡಬೇಕು. ಕ್ಷೇತ್ರದ ಮತದಾರರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಸೇವೆ ಮಾಡಲು ಅವಕಾಶ ಕೊಡಬೇಕು ಅಂತ ಡಿಕೆಶಿ ಮನವಿ ಮಾಡಿದರು. ಸದ್ಯ ರಾಜ್ಯದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಜನರ ಸಮಸ್ಯೆ ಅರಿತು ಪರಿಹಾರ ನೀಡುವ ಹೊಸ ಪದ್ಧತಿ ತಂದಿದ್ದೇವೆ ಅಂತ ಡಿಕೆ ಶಿವಕುಮಾರ್ ಹೇಳಿದ್ರು.ಜಾಹೀರಾತುಕೆಆರ್‌ಎಸ್‌ನಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲ್ಲಕೆಆರ್‌ಎಸ್‌ನಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಆರ್‌ಎಸ್‌ನಲ್ಲಿ ಯಾರೂ ಟ್ರಯಲ್ ಬ್ಲಾಸ್ಟ್ ಮಾಡಲ್ಲ. ಡಿಸ್ಟೆನ್ಸ್‌ನಲ್ಲಿ ಸೇಫ್ಟಿ ಇಟ್ಟುಕೊಂಡು ಟ್ರಯಲ್ ಬ್ಲಾಸ್ಟ್ ಮಾಡ್ತಾರೆ. ಎಲ್ಲಾ ಟೆಕ್ನಿಕಲ್ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮಾಡ್ತಾರೆ ಅಂತ ಹೇಳಿದ್ರು.ಡಿಕೆಶಿ ಸಭೆ ಮಾಡಿದ್ರೆ ಒಳ್ಳೆಯದುಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿಕೆಯಿಂದ ಜನಸ್ಪಂದನಾ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಲಿ, ಒಳ್ಳೆಯ ಕೆಲಸ ಅಲ್ವಾ? ಜನರ ಸೇವೆ ಮಾಡೋದು, ಸಮಸ್ಯೆ ಆಲಿಸೋದು ಒಳ್ಳೆಯದು. ಸಭೆ ಮಾಡಿದ್ರೆ ಬಹಳ ಸಂತೋಷ ಅಂತ ಹೇಳಿದ್ರು. . ದೇವರಾಜೇಗೌಡಗೆ ಡಿಕೆಶಿ ಟಾಂಗ್ನನ್ನ ವಿರುದ್ಧ ಷಡ್ಯಂತ್ರ ಮಾಡಿ ಡಿಕೆಶಿ ಜೈಲಿಗೆ ಹಾಕ್ಸಿದ್ರು ಎಂಬ ದೇವರಾಜೇಗೌಡ ಹೇಳಿಕೆ ವಿಚಾರಕ್ಕೂ ಡಿಕೆಶಿ ಪ್ರತಿಕ್ರಿಯೆ ನೀಡಿದ್ರು. ಹೌದಾ? ಸಂತೋಷ, ಅವರಿಗೆ ಒಳ್ಳೆಯದಾಗಲಿ. ನನ್ನ ನೆನೆಸಿಕೊಳ್ತಾ ಇರಲಿ ಎಂದು ಡಿಕೆಶಿ ಟಾಂಗ್ ಕೊಟ್ರು.

Post a Comment