ವಿಧಾನಸೌಧ
ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ 14 ಕೆಎಎಸ್ ಅಧಿಕಾರಿಗಳ (KAS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು: ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ 14 ಕೆಎಎಸ್ ಅಧಿಕಾರಿಗಳ (KAS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಗುರುವಾರ ಈ ಬಗ್ಗೆ ಅದಿಸೂಚನೆ ಬಿಡುಗಡೆ ಮಾಡಿದ್ದು, ತಕ್ಷಣವೇ ಜಾರಿ ಬರುವಂತೆ ವರ್ಗಾವಣೆ ಹಾಗೂ ನಿಯುಕ್ತಿಗೊಳಿಸಿ ಸರ್ಕಾರದ ಅದೀನ ಕಾರ್ಯದರ್ಶಿ ಉಮಾದೇವಿ (Umadevi) ಸೂಚನೆ ನೀಡಿದ್ದಾರೆ. ಯಾವ ಅಧಿಕಾರಿಗಳು ಯಾವ ಇಲಾಖೆಗೆ ವರ್ಗಾವಣೆಯಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.1. ವಿಶ್ವನಾಥ ಪಿ ಹಿರೇಮಠ್, ಮುಖ್ಯ ಆಡಳಿತಾಧಿಕಾರಿ ಕೊಪ್ಪಳ ವೈಧ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಕೆಪಿಸಿಎಲ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ಸಂಬಂಧಿತ ಸುದ್ದಿಅಬಕಾರಿ ಇಲಾಖೆಯಲ್ಲಿ ವರ್ಗಾವಣೆ 40 ಕೋಟಿ ರೂ ಆರೋಪ?ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ!ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!K.S Eshwarappa: ರಾಜೀನಾಮೆ ಗಡಿಬಿಡಿಯಲ್ಲೇ 29 ಅಧಿಕಾರಿಗಳ ವರ್ಗಾವಣೆ; ಈಶ್ವರಪ್ಪ ಮೇಲೆ ಮತ್ತೊಂದು ಆರೋಪ2. ರಮೇಶ್ ಕಳಸದ್, ವ್ಯವಸ್ಥಾಪಕರು ಕೃಷ್ಣಾ ಮೇಲ್ಮಂಡೆ ಯೋಜನೆ ಬಾಗಲಕೋಟೆ ಯಿಂದ ಕರ್ನಾಟಕ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿಗೆ ಮುಖ್ಯ ಆಡಳಿತಾಧಿಕಾರಿ ವರ್ಗಾವಣೆ3. ಶ್ರೀ ಹರ್ಷ ಎಸ್ ಶೆಟ್ಟಿ, ವಿಶೇಷ ಭೂಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಾಗಲಕೋಟೆಯಿಂದ ವಿಶೇಷ ಜಿಲ್ಲಾಧಿಕಾರಿಯಾಗಿ (ಭೂಸ್ವಾಧೀನ) ಬೆಂಗಳೂರಿಗೆ ವರ್ಗಾವಣೆ4. ಕೃಷ್ಣಮೂರ್ತಿ ಹೆಚ್, ಜಂಟಿ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯಿಂದ ಉಪ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ-2 ಸಚಿವಾಲಯ ಬೆಂಗಳೂರು ವರ್ಗಾವಣೆ5. ಹೆಚ್.ಎನ್.ಶಿವೇಗೌಡ, ವಿಶೇಷ ಭೂಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೈಸೂರು ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿಗೆ ವರ್ಗ6. ರವಿಚಂದ್ರನಾಯಕ್, ವಿಶೇಷ ಭೂಸ್ವಾಧೀನಾಧಿಕಾರಿ ತುಂಗಾ ಮೇಲ್ಕಂಡ ಯೋಜನೆ ಶಿವಮೊಗ್ಗ ಇಂದ ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗ7. ಪಾರ್ವತಿ, ವಿಶೇಷ ಭೂಸ್ವಾಧೀನ ಅಧಿಕಾರಿ ಕೆಐಎಡಿಬಿ ಕಲಬುರಗಿ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಗಳು, ಕಲಬುರಗಿಗೆ ವರ್ಗ8. ಸಿದ್ರಾಮೇಶ್ವರ, ವೈಧ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ ಇಂದ ಅಪರ ಜಿಲ್ಲಾಧಿಕಾರಿ ಮತ್ತು ಅವರ ಜಿಲ್ಲಾ, ದಂಡಾಧಿಕಾರಿಯಾಗಿ ನೇಮಕ9. ಡಾ ಭಾಸ್ಕರ್ ಎನ್, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಇಂದ ಅಪರ ಜಿಲ್ಲಾಧಿಕಾರಿ ಮತ್ತು ಅವರ ಜಿಲ್ಲಾ ದಂಡಾಧಿಕಾರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ10. ಪಿ.ಎನ್ ನಾಗಪ್ರಶಾಂತ್, ಸ್ಥಳ ನಿರೀಕ್ಷಣಾ ಅಧಿಕಾರಿ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಬೆಂಗಳೂರಿಗೆ ವರ್ಗ11. ವೆಂಕಟಲಕ್ಷ್ಮಿ ಹೆಚ್ ಎಸ್, ಸ್ಥಳ ನಿರೀಕ್ಷಣಾ ಅಧಿಕಾರಿ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಬೆಂಗಳೂರಿಗೆ ವರ್ಗ12. ಡಾ. ಬಿ ಶರಣಪ್ಪ, ಬಿಬಿಎಂಪಿ ಚುನಾವಣೆ ಸಹಾಯಕ ಆಯುಕ್ತರು ಇಂದ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ರಾಜ್ಯ ಪ್ರತಿನಿಧಿಯಾಗಿ ನೇಮಕ13. ಮಾರುತಿ ಬ್ಯಾಕೋಡ, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ ಇಂದ ವಿಶೇಷ ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಧಾರವಾಡಕ್ಕೆ ವರ್ಗ 14. ಕೆ ಚಂದ್ರಮೌಳಿ, ಪೌರಾಯುಕ್ತರು ನಗರ ಸಭೆ ಕಾರವಾರ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಹಿಡಕಲ್ ಡ್ಯಾಂ ಯೋಜನೆ ಬೆಳಗಾವಿಗೆ ವರ್ಗಾವಣೆ

Post a Comment