A Raja: ನಾವು ರಾಮನ ವೈರಿಗಳು, ಭಾರತ್​ ಮಾತಾ ಕಿ ಜೈ ಅನ್ನೋದನ್ನ ಒಪ್ಪೋದಿಲ್ಲ! ಮತ್ತೆ ನಾಲಿಗೆ ಹರಿಬಿಟ್ಟ ಡಿಎಂಕೆ ಸಂಸದ


 ಡಿಎಂಕೆ ಸಂಸದ ಎ ರಾಜಾ

ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ. ಹಾಗಾಗಿ ಭಾರತ ಎಂದಿಗೂ ಒಂದು ರಾಷ್ಟ್ರವಾಗುವುದಿಲ್ಲ ಎಂದು ಡಿಎಂಕೆ ಸಂಸದ ಹೇಳಿದ್ದಾರೆ.ಚೆನ್ನೈ: ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾಧ ಸೃಷ್ಟಿಸುವುದು ಡಿಎಂಕೆ ನಾಯಕರ (DMK Leaders) ಹುಟ್ಟುಗುಣವಾಗುತ್ತಿದೆ. ಕೆಲವು ತಿಂಗಳ ಹಿಂದೆ ಡಿಎಂಕೆ ಸಚಿವ ಉದಯನಿಧಿ (Udayanidhi) ಸನಾತನ ಧರ್ಮವನ್ನು (Sanatana Dharma) ಡೆಂಘಿ, ಮಲೇರಿಯಾಗೆ ಹೋಲಿಕೆ ಮಾಡಿ ಈಗಾಗಗಲೇ ಸುಪ್ರೀಂ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಡಿಎಂಕೆ ಸಂಸದ ಎ ರಾಜಾ (A Raja) ಮತ್ತೊಮ್ಮೆ ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ. ತಮಿಳುನಾಡು ಜೈ ಶ್ರೀರಾಮ್ ಮತ್ತು ಭಾರತ್ ಮಾತೆಯನ್ನ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ​ಭಾರತವು ಒಂದು ರಾಷ್ಟ್ರವಲ್ಲ, ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ, ಆದರೆ ಒಂದು ಉಪಖಂಡ ಎಂದು ಹೇಳಿದ್ದಾರೆ.ಮಾರ್ಚ್ 4 ರಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಸನಾತನ ವಿರೋಧಿ ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವ ಸಮಯದಲ್ಲಿ ರಾಜಾರಿಂದ ಈ ವಿವಾದಾದ್ಮತ ಹೇಳಿಕೆ ಬಂದಿದೆ.ಸಂಬಂಧಿತ ಸುದ್ದಿತಮಿಳುನಾಡು ವಿರುದ್ಧ ಮುಂಬೈಗೆ ಇನ್ನಿಂಗ್ಸ್​ ಜಯ! ದಾಖಲೆಯ 48ನೇ ಫೈನಲ್ ಪ್ರವೇಶಿಸಿದ ರಹಾನೆ ಪಡೆಭಾರತೀಯ ರಾಕೆಟ್​ನಲ್ಲಿ ಚೀನಾ ಬಾವುಟದ ಜಾಹೀರಾತು, ಸ್ಟಾಲಿನ್‌ಗೆ ಹುಟ್ಟುಹಬ್ಬದಂದೇ ತಿರುಗೇಟು ಕೊಟ್ಟ ಬಿಜೆಪಿಡಿಎಂಕೆ ಜಾಹೀರಾತಲ್ಲಿ ಪ್ರಧಾನಿ ಫೋಟೋ ಜೊತೆ ಚೀನಾ ಧ್ವಜ! ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶಹುಟ್ಟುಹಬ್ಬ ಆಚರಣೆಯಲ್ಲಿ ಜಯಲಲಿತಾ ಧ್ವನಿ! AI ವಾಯ್ಸ್​ನಲ್ಲಿ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಕಿಡಿರಾಮ ನಮ್ಮೆಲ್ಲರ ಶತೃ ಎಂದ ರಾಜಾಅಪರಾದ ಮಾಡಿ ಹೊರಬಂದ ಜನರು ಜೈ ಶ್ರೀರಾಮ್, ಭಾರತ್​ ಮಾತಾ ಕಿ ಜೈ ಎನ್ನುತ್ತಾರೆ. ಈ ರೀತಿ ಜೈ ಶ್ರೀರಾಮ್, ಜೈ ಭಾರತ್​ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರೆ, ನಾವು ಎಂದಿಗೂ ಒಪ್ಪೋದಿಲ್ಲ, ಅದನ್ನ ತಮಿಳುನಾಡು ಕೂಡ ಸ್ವೀಕರಿಸುವುದಿಲ್ಲ. ಬೇಕಾದರೆ ನೀವು ನಮ್ಮನ್ನ ರಾಮನ ಶತೃಗಳು ಎಂದುಕೊಳ್ಳಿ ಎಂದು ತಿಳಿಸಿದ್ದಾರೆ. ಮುಂದುವರಿದು, ರಾಮಾಯಣ ಮತ್ತು ರಾಮನಲ್ಲಿ ನನಗೆ ನಂಬಿಕೆ ಇಲ್ಲ, ರಾಮನನ್ನು ನಂಬುವುದಿಲ್ಲ, ರಾಮಾಯಣ ಸಹೋಧರತ್ವವನ್ನು ಕಲಿಸುತ್ತದೆ. ಕಂಬಾ ರಾಮಾಯಣ ಎಲ್ಲರನ್ನೂ ಒಂದೇ ಎಂದು ಹೇಳುತ್ತದೆ. ಹಂಟರ್​, ಕೋತಿ ಕೂಡ ನಮ್ಮ ಸಂಬಂಧಿಗಳಾಗಿರುತ್ತಾರೆ. ಆದರೆ ‘ಜೈ ಶ್ರೀ ರಾಮ್’ ಎಂದು ಕೂಗುವುದು ಅಸಹ್ಯಕರ ಎಂದಿದ್ದಾರೆ.ಇದನ್ನೂ ಓದಿ: Udhayanidhi: ಸನಾತನ ಧರ್ಮ ವಿವಾದ; ಸಚಿವ ಉದಯನಿಧಿಗೆ ಸುಪ್ರೀಂ ಕೋರ್ಟ್ ತರಾಟೆಭಾರತ ದೇಶವೇ ಅಲ್ಲಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ. ಆದರೆ ಭಾರತ ಒಂದು ರಾಷ್ಟ್ರವಲ್ಲ, ಒಂದು ಉಪಖಂಡ. ಇಲ್ಲಿ ತಮಿಳು ಒಂದು ಭಾಷೆ ಮತ್ತು ದೇಶವಾಗಿದೆ. ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ. ಒರಿಯಾ ಒಂದು ಭಾಷೆ ಮತ್ತು ರಾಷ್ಟ್ರ. ಇಂತಹ ಎಲ್ಲಾ ರಾಷ್ಟ್ರಗಳು ಸೇರಿ ಭಾರತವನ್ನು ಮಾಡಿದಾಗ ಅದು ದೇಶವಲ್ಲ. ಇದೊಂದು ಉಪಖಂಡ ಎಂದು ರಾಜಾ ತಿಳಿಸಿದ್ದಾರೆ.ಎಲ್ಲರ ಸಂಸ್ಕೃತಿಯನ್ನ ಒಪ್ಪಿಕೊಳ್ಳಬೇಕುತಮಿಳುನಾಡು, ಕೇರಳ ಮತ್ತು ದೆಹಲಿ ವಿಭಿನ್ನ ಸಂಸ್ಕೃತಿಗಳನ್ನು ಹೊಂದಿವೆ. ತಮಿಳುನಾಡಿಗೆ ಬಂದರೆ ಅಲ್ಲೊಂದು ಸಂಸ್ಕೃತಿ ಇದೆ. ಕೇರಳದಲ್ಲಿ ಇನ್ನೊಂದು ಸಂಸ್ಕೃತಿ ಇದೆ. ದೆಹಲಿಯಲ್ಲಿ ಇನ್ನೊಂದು ಸಂಸ್ಕೃತಿ ಇದೆ. ಒರಿಯಾದಲ್ಲಿ ಇನ್ನೊಂದು ಸಂಸ್ಕೃತಿ ಇದೆ. ಅದೇ ರೀತಿ ಕಾಶ್ಮೀರದಲ್ಲೂ ಸಂಸ್ಕೃತಿ ಇದೆ. ಮಣಿಪುರದ ಜನರು ನಾಯಿ ಮಾಂಸ ತಿನ್ನುತ್ತಾರೆ, ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ಅದು ಒಂದು ಸಂಸ್ಕೃತಿ. ಒಂದು ಸಮುದಾಯವು ಗೋಮಾಂಸ ತಿಂದರೆ ನಿಮಗೇನು ಸಮಸ್ಯೆ? ಅವರು ನಿಮ್ಮನ್ನು ತಿನ್ನಲು ಕೇಳಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: Sanatana Dharma: ಹಿಂದೂ ಧರ್ಮ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಮಾರಕ! ಮತ್ತೆ ನಾಲಿಗೆ ಹರಿಬಿಟ್ಟ ಡಿಎಂಕೆ ಸಂಸದ ಎ ರಾಜಾಮೈತ್ರಿ ಕೂಟ ಸೈಲೆಂಟ್ ಆಗಿರೋದಕ್ಕೆ ಬಿಜೆಪಿ ಖಂಡನೆರಾಜಾ ಕಾಮೆಂಟ್‌ಗೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. ಡಿಎಂಕೆಯಿಂದ ನಿರಂತರವಾಗಿ ದ್ವೇಷಪೂರಿತ ಭಾಷಣಗಳು ಬರುತ್ತಿವೆ . ಇತ್ತೀಚೆಗಷ್ಟೇ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದರು. ಇದೀಗ ಅದೇ ಪಕ್ಷದ ಸಂಸದ ಎ.ರಾಜಾ ಮತ್ತೊಂದು ವಿವಾದ ಎಬ್ಬಿಸಿದ್ದಾರೆ. ಡಿಎಂಕೆಯಿಂದ ನಿತ್ಯ ದ್ವೇಷಪೂರಿತ ಕಾಮೆಂಟ್‌ಗಳು ಬರುತ್ತಿದ್ದು, ಇವುಗಳ ಹೊಣೆ ಹೊರಬೇಕಾದ ಅಗತ್ಯವಿದೆ ಎಂದರು.ಭಗವಾನ್ ರಾಮರನ್ನು ಅಪಹಾಸ್ಯ ಮಾಡುತ್ತಾರೆ, ಮಣಿಪುರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಒಂದು ರಾಷ್ಟ್ರವಾಗಿ ಭಾರತದ ಕಲ್ಪನೆಯನ್ನು ಪ್ರಶ್ನಿಸುತ್ತಾರೆ. ಆದರೆ ಇದರ ಬಗ್ಗೆ ಕಾಂಗ್ರೆಸ್ ಮತ್ತು ಇತರ I.N.D.I ಒಕ್ಕೂಟ ಪಾಲುದಾರರು ಶಾಂತವಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Post a Comment

Previous Post Next Post