CM Siddaramaiah: ಸಿಎಂ ವ್ಯಾಸಂಗ ಮಾಡಿದ ಶಾಲೆಗೆ‌ 10 ಲಕ್ಷ ರೂಪಾಯಿ ದೇಣಿಗೆ


  ಸಿಎಂ ಸಿದ್ದರಾಮಯ್ಯ

ಸಿಎಂ ಓದಿದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ 10 ಲಕ್ಷ ದೇಣಿಗೆ, ಕುಪ್ಪೇಗಾಲ ಮತ್ತು ಕೆ.ಪಿ.ಎಸ್. ಸಿದ್ದರಾಮನಹುಂಡಿ ಇಲ್ಲಿಗೆ 10 ಲಕ್ಷ ರೂ. ಗಳ ದೇಣಿಗೆ ನೀಡುವ ಮೂಲಕ ಯೋಜನೆ ಉದ್ಘಾಟನೆ ಮಾಡಲಾಗಿದೆ.ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಗೆ (Govt School) 10 ಲಕ್ಷ ರೂಪಾಯಿ ದೇಣಿಗೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಇಂದು ಚಾಲನೆ ನೀಡಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ (CM Home Office Krishna) ನಡೆದ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಸರ್ಕಾರಿ. ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದರು.ಸಿಎಂ ಓದಿದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ 10 ಲಕ್ಷ ದೇಣಿಗೆ, ಕುಪ್ಪೇಗಾಲ ಮತ್ತು ಕೆ.ಪಿ.ಎಸ್. ಸಿದ್ದರಾಮನಹುಂಡಿ ಇಲ್ಲಿಗೆ 10 ಲಕ್ಷ ರೂ. ಗಳ ದೇಣಿಗೆ ನೀಡುವ ಮೂಲಕ ಯೋಜನೆ ಉದ್ಘಾಟನೆ ಮಾಡಲಾಗಿದೆ. ಈ ವೇಳೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ , ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ

ವಿಧಾನಸೌಧದ ಗೋಪುರವನ್ನ ಗುಂಬಜ್ ಮಾಡ್ಕೊಂಡು ಅಜಾನ್ ಕೂಗ್ತಾರೆ; ಪ್ರತಾಪ್ ಸಿಂಹ

Shivaratri: ಶಿವರಾತ್ರಿ ದಿನ ಈ ರೀತಿ ಪೂಜೆ ಮಾಡಿ, ನಿಮ್ಮ ಎಲ್ಲಾ ಕಷ್ಟಗಳಿಗೂ ಸಿಗುತ್ತೆ ಪರಿಹಾರ!

ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್​ ಬೆದರಿಕೆ; 2.5 ಮಿಲಿಯನ್ ಡಾಲರ್​ ಹಣಕ್ಕೆ ಡಿಮ್ಯಾಂಡ್

Bengaluru BMTC: ಶಿವಾಜಿನಗರ-ಶ್ರೀರಾಂಪುರ ಪ್ರಯಾಣಿಕರಿಗೆ ಸಿಹಿ ಸುದ್ದಿ; ಈ ರೂಟ್‌ನಲ್ಲಿ ಬಸ್‌ ಸಂಚಾರ!

ಉಪನ್ಯಾಸಕರಿಗೆ 5 ಲಕ್ಷದ ಆರೋಗ್ಯ ವಿಮೆ ನೀಡಲು ಸರ್ಕಾರ ಆದೇಶಉನ್ನತ ಶಿಕ್ಷಣ ಇಲಾಖೆಯೂ ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನುಹೆಚ್ಚಳ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಪಿ.ಹೆಚ್.ಡಿ ಮಾಡಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನ 11,500 ರಿಂದ 13,000 ಕ್ಕೆ ಏರಿಕೆ ಮಾಡಲಾಗಿದೆ. ಸ್ನಾತಕೋತ್ತರ ಪದವಿ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನ 9,500 ರಿಂದ 11,000 ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ, ಉಪನ್ಯಾಸಕರಿಗೆ 5 ಲಕ್ಷದ ಆರೋಗ್ಯ ವಿಮೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸೇವಾ ಅನುಭವ ಮತ್ತು ವಿದ್ಯಾರ್ಹತೆ ಪರಿಗಣಿಸಿ ಗೌರವಧನವನ್ನು 31 ಸಾವಿರದಿಂದ 40 ಸಾವಿರ ರೂಪಾಯಿ ವರೆಗೂ ಹೆಚ್ಚಳ ಮಾಡಲಾಗಿದೆ. ಇದರಂತೆ 5 ವರ್ಷಕ್ಕಿಂತ ಸೇವಾ ಅನುಭವ, ಯುಜಿವಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ಗೌರವಧನ ನೀಡಲಾಗುತ್ತದೆ, ವಿದ್ಯಾರ್ಹತೆ ಹೊಂದಿದ್ದವರಿಗೆ 35 ಸಾವಿರ ರೂಪಾಯಿ ಸಿಗಲಿದೆ.5 ವರ್ಷಕ್ಕಿಂತ ಹೆಚ್ಚು 10 ವರ್ಷದ ಒಳಗೆ ಸೇವಾನುಭ ಹೊಂದಿ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 34 ಸಾವಿರ ರೂಪಾಯಿ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 38 ಸಾವಿರ ರೂಪಾಯಿ ಗೌರವಧನ ಸಿಗಲಿದೆ.10 ವರ್ಷದಿಂದ 15 ಸಾವಿರ ಸೇವಾನುಭ ಹೊಂದಿದ್ದು, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 35 ಸಾವಿರ ರೂಪಾಯಿ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ್ದರೆ 39 ಸಾವಿರ ರೂಪಾಯಿ ಸಿಗಲಿದೆ.15 ವರ್ಷಕ್ಕಿಂತ ಹೆಚ್ಚಿನ ಸೇವಾ ಅನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದಿದ್ದರೆ 36 ಸಾವಿರ ರೂಪಾಯಿ, ಯುಜಿಸಿ ನಿಗದಿ ಪಡಿಸಿದ ವಿದ್ಯಾರ್ಯತೆ ಹೊಂದಿರುವವರಿಗೆ 40 ಸಾವಿರ ರೂಪಾಯಿ ಗೌರವಧನ ಸಿಗಲಿದೆ.ಸರ್ಕಾರಿ ಶಾಲೆಗಳ ಪ್ರಗತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದಾದ ಮಹತ್ವಾಕಾಂಕ್ಷಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ” - ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ನಾನು ಓದಿದ ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೆ.ಪಿ.ಎಸ್ ಸಿದ್ದರಾಮನಹುಂಡಿ ಶಾಲೆಗೆ 10 ಲಕ್ಷ ರೂ. ಗಳ ದೇಣಿಗೆ ನೀಡುವ ಮೂಲಕ ಚಾಲನೆ… pic.twitter.com/np24VnSG8Bವಿಮೆ ಯೋಜನೆಗೆ ಶಿಕ್ಷಕರ ವೇತನದಿಂದ ವಾರ್ಷಿಕವಾಗಿ 400 ರೂಪಾಯಿ ಪಾವತಿ ಆಗಲಿದ್ದು, ಉಳಿದ 400 ರೂಪಾಯಿಯನ್ನು ಬರಿಸಲಿದೆ. ಈ ಬಗ್ಗೆ ಇಡಿಗಂಟು ನೀಡಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇವೆ ಸಲ್ಲಿಸಲಿರುವ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50 ಸಾವಿರ ಇಡಿಗಂಟು ಸೌಲಭ್ಯವು ಲಭ್ಯವಾಗಲಿದೆ

Post a Comment

Previous Post Next Post