Dr CN Manjunath: ಮೈತ್ರಿ ಅಭ್ಯರ್ಥಿಯಾಗಿ ಡಾಕ್ಟರ್ ಮಂಜುನಾಥ್ ಬಹುತೇಕ ಫಿಕ್ಸ್! HDK ನಿವಾಸದಲ್ಲಿ ಮಹತ್ವದ ಸಭೆ


  ಚುನಾವಣೆ ಗೆಲ್ಲಲು ರಣತಂತ್ರ

Bengaluru Rural Loksabha Constituency: ಈ ಮೂಲಕ ಹಾಲಿ ಸಂಸದ ಡಿಕೆ ಸುರೇಶ್ ಅವರನ್ನು ಸೋಲಿಸಲು ಮತ್ತು ತಮ್ಮ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ರಣತಂತ್ರ ರಚಿಸಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರು: ಜಯದೇವ ಆಸ್ಪತ್ರೆಯ (Jayadeva Hospital) ಮಾಜಿ ನಿರ್ದೇಶಕ ಡಾ.ಸಿಎನ್ ಮಂಜುನಾಥ್ (CN Manjunath) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡದು ಬಹುತೇಕ ಖಚಿತವಾದಂತೆ ಕಾಣಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bengaluru Loksabha Constituency) ಕುರಿತು ಇಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (Former CM HD Kumaraswamy) ಅವರ ನಿವಾಸದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಭೆ (BJP-JDS Leaders Meeting) ನಡೆದಿದೆ. ಈ ಸಭೆಯಲ್ಲಿ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.ಸಭೆಯಲ್ಲಿ ಬಿಜೆಪಿ ನಾಯಕರೇ ಮಂಜುನಾಥ್ ಅವರ ಹೆಸರನ್ನು ಪ್ರಸ್ತಾಪ ಮಾಡಿದರಂತೆ. ಬೆಂಗಳೂರು ಗ್ರಾಮಾಂತರದಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರು ಎನ್​ಡಿಎ ಅಭ್ಯರ್ಥಿ ಆಗ್ತಾರೆ. ಅವರನ್ನು ಗೆಲ್ಲಿಸಲು ಪಣ ತೊಡೋಣ ಎಂದು ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.ಸಂಬಂಧಿತ ಸುದ್ದಿಕೋಲಾರ ಲೋಕ ಕಣದಲ್ಲಿ JDS-BJPನಲ್ಲಿ ಟಿಕೆಟ್ ಫೈಟ್; ರೇಸ್ ಎಂಟ್ರಿ ಕೊಟ್ಟ ಮಾಜಿ ಶಾಸಕರ ಪುತ್ರ!HD Devegowda: ಡಾಕ್ಟರ್ ಮಂಜುನಾಥ್ ಸ್ಪರ್ಧೆ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ್ರು ಮಾಜಿ ಪ್ರಧಾನಿಕರ್ನಾಟಕದ 17 ಕ್ಷೇತ್ರ ಸೇರಿದಂತೆ 160 BJP ಅಭ್ಯರ್ಥಿಗಳ ಪಟ್ಟಿ ಫೈನಲ್​; ಇಲ್ಲಿದೆ ಸಂಭಾವ್ಯ ಪಟ್ಟಿಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಇನ್ನು ಏನೇನು ಕಾದಿದೆಯೋ? ದೋಸ್ತಿಗೆ ಮಾಗಡಿ ಬಾಲಕೃಷ್ಣ ಟಾಂಗ್!ಚುನಾವಣೆ ಗೆಲ್ಲಲು ರಣತಂತ್ರಈ ಮೂಲಕ ಹಾಲಿ ಸಂಸದ ಡಿಕೆ ಸುರೇಶ್ ಅವರನ್ನು ಸೋಲಿಸಲು ಮತ್ತು ತಮ್ಮ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ರಣತಂತ್ರ ರಚಿಸಿದ್ದಾರೆ ಎಂದು ತಿಳಿದು ಬಂದಿದೆ.ಇದೇ ವೇಳೆ ಅಭ್ಯರ್ಥಿ ಘೋಷಣೆ ಬಗ್ಗೆ ವಿಳಂಬ ಬೇಡ ಎಂದು ಸ್ಥಳೀಯ ನಾಯಕರು ಸಲಹೆ ನೀಡಿದ್ದಾರಂತೆ. ಅಭ್ಯರ್ಥಿ ಇಟ್ಟುಕೊಂಡು ನಾವು ಜನರ ಮುಂದೆ ಹೋಗಬೇಕು. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿ ಆಯ್ಕೆಯಾಗಬೇಕು ಎಂದ ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.ಮತ್ತೊಮ್ಮೆ ಸಭೆಪ್ರಧಾನಿ ಮೋದಿ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಜತೆ ಚರ್ಚೆ ನಡೆಸಿದ ನಂತರ ಅಭ್ಯರ್ಥಿ ಆಯ್ಕೆ, ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: Anantkumar Hegde: ಧಮ್ ಇದ್ರೆ ಈಗಲೇ ಬಂದು ಇಲ್ಲಿ ಕೂತ್ಕೊಳ್ಳಿ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಸಂಸದರ ಸವಾಲುಸಭೆಯಲ್ಲಿ ಯಾರೆಲ್ಲಾ ಭಾಗಿ?ಮಾಜಿ ಸಚಿವರಾದ ಸಿಪಿ ಯೋಗೇಶ್ವರ್, ಮುನಿರತ್ನ, ಡಿ.ನಾಗರಾಜಯ್ಯ, ಮಾಜಿ ಸಂಸದ ಕುಪೇಂದ್ರರೆಡ್ಡಿ, ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಮಾಗಡಿ ಮಂಜುನಾಥ್, ಗೊಟ್ಟಿಗೆರೆ ಮಂಜುನಾಥ, ಕುಣಿಗಲ್ ಜಗದೀಶ್, ನಾಗರಾಜ್ ಕನಕಪುರ, ಸಿದ್ದಮರೀ ಗೌಡ ಕನಕಪುರ, ಜಯಮುತ್ತು, ಗೌತಮ್, ಪ್ರಸಾದ್ ಗೌಡ, ಕೃಷ್ಣಕುಮಾರ್, ಕೆ.ಪಿ.ರಾಜು, ಡಾ.ನಾರಾಯಣಸ್ವಾಮಿ ಮುಂತಾದವರು ಭಾಗಿಯಾಗಿದ್ದರು.ವರದಿ: ಹೆಬ್ಬಾಕ ತಿಮ್ಮೇಗೌಡ

Post a Comment

Previous Post Next Post