MLA HC Balakrishna: ಲೋಕಸಭೆಯಲ್ಲಿ ಹಿನ್ನಡೆಯಾದ್ರೆ? ಗ್ಯಾರಂಟಿ ಯೋಜನೆ ಬಂದ್ ಹೇಳಿಕೆ ಉಲ್ಟಾ ಹೊಡೆದ ಕಾಂಗ್ರೆಸ್​ ಶಾಸಕ


  ಎಚ್​ಸಿ ಬಾಲಕೃಷ್ಣ, ಮಾಗಡಿ ಶಾಸಕ

 ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರೆಂಟಿಗಳನ್ನ ಜಾರಿ ಮಾಡಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ ನೀಡಿ ಅಂತ ಹೇಳಿದ್ದೇನೆ ಎಂದು ಶಾಸಕ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರು: ಸಂಸತ್ ಚುನಾವಣೆಯಲ್ಲಿ (Lok sabha Election) ಹಿನ್ನಡೆಯಾದರೆ ಗ್ಯಾರೆಂಟಿ ಸ್ಥಗಿತ ಎಂಬ ವಿವಾದಾತ್ಮಕ ತಮ್ಮ ಹೇಳಿಕೆಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ (HC Balakrishna) ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯಲ್ಲಿ ತಪ್ಪೇನಿದೆ, ಯಾಕೆ ವಿವಾದ ಮಾಡ್ತೀರಿ. ಯಾವುದೇ ಕಾರ್ಯಕ್ರಮಗಳನ್ನ ಕೊಟ್ಟರೆ ಪ್ರತಿಫಲ ಅದೇ ಪಕ್ಷಕ್ಕೆ ಸಿಗಬೇಕಲ್ವಾ? ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ (Development) ನೀಡಿ ಅಂತ ಹೇಳಿದ್ದೇನೆ ಅಷ್ಟೇ ಎಂದಿದ್ದಾರೆ ನ್ಯೂಸ್​18 ಕನ್ನಡಕ್ಕೆ ತಿಳಿಸಿದ್ದಾರೆ.ಪ್ರತಿಫಲ ಪಕ್ಷಕ್ಕೆ ಸಿಗಬೇಕಲ್ವಾ?ಗ್ಯಾರಂಟಿ ಯೋಜನೆ ಬಂದ್​​ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿ ಮಾತನಾಡಿದ ಕಾಂಗ್ರೆಸ್​ ಶಾಸಕರು, ನನ್ನ ಹೇಳಿಕೆಯಲ್ಲಿ ತಪ್ಪೇನಿದೆ, ಯಾಕೆ ವಿವಾದ ಮಾಡ್ತೀರಿ. ಯಾವುದೇ ಕಾರ್ಯಕ್ರಮಗಳನ್ನ ಕೊಟ್ಟರೆ ಪ್ರತಿಫಲ ಅದೇ ಪಕ್ಷಕ್ಕೆ ಸಿಗಬೇಕಲ್ವಾ? ನಾವು ಗ್ಯಾರೆಂಟಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇವು ಅಂತ ಇವರು ಈಗ ಅಕ್ಷತೆ ಕೊಟ್ಟು ಲೋಕಸಭೆಗೆ ವೋಟ್​ ಹಾಕಿಸಿಕೊಳ್ಳಲು ಹೊರಟಿದ್ದಾರೆ.ಸಂಬಂಧಿತ ಸುದ್ದಿಕೆರಗೋಡು ಕಲಹ: ಫೆಬ್ರವರಿ 7ಕ್ಕೆ ಮಂಡ್ಯ ಬಂದ್​ಗೆ ಕರೆ, ಬೆಂಗಳೂರಲ್ಲೂ ಜೋರಾಯ್ತು ಧ್ವಜ ದಂಗಲ್​!ಲೋಕಸಭೆಯಲ್ಲಿ ಕೈಗೆ ವೋಟ್ ಹಾಕಿದಿದ್ರೆ ರದ್ದಾಗುತ್ತಾ ಗ್ಯಾರಂಟಿ ಯೋಜನೆ? ಕೈ ಶಾಸಕನ ಸ್ಪೋಟಕ ಹೇಳಿಕೆRaichuru: ಆಂಧ್ರ ಪ್ರದೇಶ, ತಮಿಳುನಾಡಿಗೆ ನೋಡಿದ್ರೆ ನಮ್ಮದೇ ಬೆಸ್ಟ್​ ಮದ್ಯ; ಸಚಿವ ಆರ್​.ಬಿ ತಿಮ್ಮಾಪುರಕೆರಗೋಡು ಹನುಮ ಧ್ವಜ ತೆರವು ವಿವಾದ; ಕೊನೆಗೂ ಮೌನ ಮುರಿದ ಸಂಸದೆ ಸುಮಲತಾ, ಹೇಳಿದ್ದೇನು? ಇದನ್ನೂ ಓದಿ: Basanagouda Patil Yatnal: ಕೇಸರಿ ಪಡಸಾಲೆಯಲ್ಲಿ ಯತ್ನಾಳ್ ಬಗ್ಗೆ ಹೀಗೊಂದು ಚರ್ಚೆ?ಐದಲ್ಲ ಹತ್ತು ವರ್ಷ ಮುಂದುವರೆಸುತ್ತೇವೆಆದರೆ, ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರೆಂಟಿಗಳನ್ನ ಜಾರಿ ಮಾಡಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ ನೀಡಿ ಅಂತ ಹೇಳಿದ್ದೇನೆ. ಗ್ಯಾರೆಂಟಿಗಳನ್ನ ಐದಲ್ಲ ಹತ್ತು ವರ್ಷ ಮುಂದುವರೆಸುತ್ತೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನ ಶಕ್ತಿ ತುಂಬಬೇಕಲ್ವಾ? ಮಂತ್ರಾಕ್ಷತೆಗೆ ಮತ ಹಾಕ್ತಿರೋ, ಗ್ಯಾರೆಂಟಿಗಳಿಗೆ ಹಾಕ್ತಿರೋ ನೀವೆ ತೀರ್ಮಾನ ಅಂತ ಹೇಳಿದ್ದೇನೆ ತಪ್ಪೇನಿದೆ ಎಂದು ಪ್ರಶ್ನಿಸಿದರು.ಕೇಸರಿ ಶಾಲು ಹಾಕಿ ನಾಟಕ ಆಡ್ತರಲ್ಲಇದೇ ವೇಳೆ ಮಾಜಿ ಸಿಎಂ ಎಚ್​ಡಿಕೆ, ಕೇಸರಿ ಶಾಲು ಧರಿಸಿ ಪ್ರತಿಭಟನೆ ವಿಚಾರವಾಗಿ ಕಿಡಿಕಾರಿದ ಶಾಸಕ, ಮೋದಿ ಪ್ರಧಾನಿಯಾದರೆ ಸೂಸೈಡ್ ಮಾಡ್ಕೊಳ್ತೀನಿ ಅಂತ ಎಚ್​ಡಿಡಿ ಹೇಳಿದ್ರು. ಮೋದಿಗೆ ಅದೆಷ್ಟು ದಿನ ವೋಟ್ ಹಾಕ್ತೀರಾ ಅಂದೋರು, ಇವತ್ತು ಕೇಸರಿ ಶಾಲು ಹಾಕಿ ನಾಟಕ ಆಡ್ತರಲ್ಲ. ಜೆಡಿಎಸ್‌ದು ಮುಗಿದ ಅಧ್ಯಾಯ, ಬಿಜೆಪಿಯ ಊರುಗೋಲು ಬೇಕು, ಅದಕ್ಕೆ ಇಡ್ಕೊಂಡಿದ್ದಾರೆ.ಮಠ ಮಂದಿರ, ಮಂತ್ರಾಕ್ಷತೆ ಬಿಟ್ಟು ಅಭಿವೃದ್ದಿ ವಿಚಾರಕ್ಕೆ ಬನ್ನಿ. ನಾನೊಬ್ಬ ಹಿಂದೂ, ಕಾಲಭೈರವನ‌ ತಿಲಕ ಇಟ್ಟು ಹೊರಬರೋದು. ಇದೆಲ್ಲಾ ಬಿಟ್ಟು ಜನರ ಬದುಕನ್ನ ಕಟ್ಟಿಕೊಡುವ ಕೆಲಸ ಮಾಡೋಣಾ ಎಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲಮಾಗಡಿ ಬಾಲಕೃಷ್ಣ ಗ್ಯಾರಂಟಿ ಹೇಳಿಕೆಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದು, ಗ್ಯಾರಂಟಿ ಯೋಜನೆ ಐದು ವರ್ಷಗಳ ಕಾಲ ಮುಂದುವರೆಯಲಿದೆ ಎಂದಿದ್ದಾರೆ. ಮಾಗಡಿ ಬಾಲಕೃಷ್ಣ ಹೇಳಿದ್ದು, ಬಿಜೆಪಿಯವರು ಆ ರೀತಿಯ ಹೇಳ್ತಿದ್ದಾರೆ ಎಚ್ಚರಿಕೆಯಿಂದ ಇರಿ ಎಂದಷ್ಟೇ ಹೇಳಿದ್ದಾರೆ ಅಂತ ಹೇಳಿದರು.ಮಾಗಡಿ ಬಾಲಕೃಷ್ಣ ಗ್ಯಾರಂಟಿ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿದ್ದು, ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಅವು ಬಡವರ ಕಾರ್ಯಕ್ರಮಗಳು, ಪರಿಣಾಮಕಾರಿ ನಾವು ಅನುಷ್ಠನ‌ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಬಡವರ ಕಾರ್ಯಕ್ರಮ ಮುಂದುವರೆಯತ್ತವೆ ಎಂದು ಸ್ಪಷ್ಟಪಡಿಸಿದರು.

Post a Comment

Previous Post Next Post