ಹೆಚ್ಡಿ ಕುಮಾರಸ್ವಾಮಿ ವರ್ಸಸ್ ಕಾಂಗ್ರೆಸ್
Congress Tweet: ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ.ಬೆಂಗಳೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು (Congress Activist) ಫೋಸ್ಟರ್ ವಾರ್ ಆರಂಭಿಸಿದ್ದಾರೆ. ಆರ್ಎಸ್ಎಸ್ (RSS) ಹಾಗೂ ಸಿ.ಟಿ ರವಿ (CT Ravi) ವಿರುದ್ಧ ವಾಗ್ದಾಳಿ ಮಾಡಿ ಎಕ್ಸ್ ಪೋಸ್ಟ್ ಮೂಲಕ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ. ಆರ್ಎಸ್ಎಸ್ ನ ಗೇಟ್ ಕೀಪರ್ ಆಗಿ, ವಿನಮ್ರ ಸೇವಕನಾಗಿ ಹಸಿರು ಶಾಲು ಕಿತ್ತೆಸೆದು ಕೇಸರಿ ಶಾಲು ಹಾಕೊಂಡಿದ್ದೀರಿ. ಇವಾಗ ಪಾಕಿಸ್ತಾನದ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ನಾಯಕರ (BJP leaders) ಜೊತೆ ಹೋರಾಟ ಮಾಡಿದ ಬೆನ್ನೆಲ್ಲೆ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ದಾಳಿ ಶುರುವಾಗಿದೆ. ಹೆಚ್ಡಿ ಕುಮಾರಸ್ವಾಮಿ ಅವರು ಬಿಜೆಪಿಯವರಿಗೆ ಕಾಂಪಿಟೇಷನ್ ಕೊಡುವಂತೆ ಬಿಜೆಪಿಯವರಿಗಿಂತ ದೊಡ್ಡ ಚಡ್ಡಿ ಹಾಕಿದ್ದಾರೆ. ಇದೇ ಕುಮಾರಸ್ವಾಮಿ ಕೆಲವೇ ತಿಂಗಳುಗಳ ಹಿಂದೆ RSS ಬಗ್ಗೆ ಯಾವ ರೀತಿ ಹೇಳಿದ್ದರು ಎಂಬುದನ್ನು ರಾಜ್ಯ ಕಂಡಿದೆ ಎಂದು ಕಾಂಗ್ರೆಸ್ ಹೇಳಿದೆ.ಸಂಬಂಧಿತ ಸುದ್ದಿLaxman Savadi ಮೇಲೆ ಯಾವುದೇ ಅಪನಂಬಿಕೆ ಇಲ್ಲ ಎಂದ ಹೆಚ್ಕೆ ಪಾಟೀಲ್ಯಾರು ಯಾರನ್ನ ನುಂಗ್ತಾರೆ ಅನ್ನೋದನ್ನ ನೋಡೋಣ; ಕೇಸರಿ ಶಾಲು ಹಾಕೊಂಡಿದ್ದ HDKಗೆ ತಿರುಗೇಟುKalaburgi: ಚಕ್ರವರ್ತಿ ಸೂಲಿಬೆಲೆಗೆ ಬಿಗ್ ರಿಲೀಫ್; ತಡೆಯಾಜ್ಞೆ ಬೆನ್ನಲ್ಲೇ ‘ಅಯೋಗ್ಯ’ ಎಂದು ಪೋಸ್ಟ್ಸುಮಲತಾ ಸೈಲೆಂಟ್, ಹೆಚ್ಡಿಕೆ ಆಕ್ಟಿವ್; ಮಂಡ್ಯದಲ್ಲಿ ‘ಕೈ’ ಶಕ್ತಿ ಕುಗ್ಗಿಸಲು ಬಿಜೆಪಿ ಮಹಾತಂತ್ರ!ಅತ್ಯಂತ ಕೊಳಕು ರಾಜಕಾರಣಈಗ ಅದೇ RSSನ ಸೇವಕನಾಗಿ, ಕಾಲಾಳಾಗಿ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಗುತ್ತಿಗೆ ಪಡೆದಿರುವುದು ಅತ್ಯಂತ ಕೊಳಕು ರಾಜಕಾರಣ. ಕುಮಾರಸ್ವಾಮಿಯವರೇ ನೀವೇ ಬರೆದದ್ದನ್ನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಹಳೆ ಹೇಳಿಕೆಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.ದುಸ್ಥಿತಿಯ ದ್ಯೋತಕವಲ್ಲವೇ?RSS ನಿಂದ ಸ್ವಾಗತ ಪಡೆಯುವ ದುಸ್ಥಿತಿ ನನಗೆ ಬಂದಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಈಗ ಅದೇ RSS ನ ಗೇಟ್ ಕೀಪರ್ ಆಗಿ, ವಿನಮ್ರ ಸೇವಕನಾಗಿ ಹಸಿರು ಶಾಲನ್ನು ಕಿತ್ತೆಸೆದು ಕೇಸರಿ ಶಾಲು ಹಾಕಿಕೊಂಡಿದ್ದೀರಿ. ಇದು ನಿಮಗೆ ದುಸ್ಥಿತಿ ಬಂದಿದ್ದರ ಸಂಕೇತವಲ್ಲವೇ? ವಯಸ್ಸಾದ ದೇವೇಗೌಡರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಅಲೆಯುತ್ತಿರುವುದು ನಿಮಗೊದಗಿದ ದುಸ್ಥಿತಿಯ ದ್ಯೋತಕವಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದನ್ನೂ ಓದಿ: Raichuru: ಆಂಧ್ರ ಪ್ರದೇಶ, ತಮಿಳುನಾಡಿಗೆ ನೋಡಿದ್ರೆ ನಮ್ಮದೇ ಬೆಸ್ಟ್ ಮದ್ಯ; ಸಚಿವ ಆರ್.ಬಿ ತಿಮ್ಮಾಪುರರಾಷ್ಟ್ರಧ್ವಜದ ಮೇಲೆ ದ್ವೇಷಸಂಘಿಗಳ ಕಣ್ಮಣಿಯಾಗಲು ಹೊರಟಿರುವ ಮಿಣಿ ಮಿಣಿ ಕುಮಾರಣ್ಣರಿಗೆ ಪಾಕಿಸ್ತಾನದ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ. ಈ ಪಾಕ್ ಜೀನ್ ನವರೊಂದಿಗಿನ ಪ್ರೇಮ ಮೂಡಿದ್ದರಿಂದಲೇ ಕುಮಾರಸ್ವಾಮಿಯವರಿಗೆ ರಾಷ್ಟ್ರಧ್ವಜದ ಮೇಲೆ ದ್ವೇಷ ಮೂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Post a Comment