Salman Khan: ಬಾಲಿವುಡ್​ನ ನಟ​ ಸಲ್ಮಾನ್​ ಖಾನ್​, ತಂದೆ ಸಲೀಂ ಖಾನ್​ಗೆ ಜೀವ ಬೆದರಿಕೆ; ಪ್ರಕರಣ ದಾಖಲು ಬಾಲಿವುಡ್ ನ ಬ್ಯಾಡ್​ ಬಾಯ್ ಸಲ್ಮಾನ್ ಖಾನ್ (Salman Khan) ಗೆ ಜೀವ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.


 ಹೌದು, ಪಂಜಾಬ್​ ನ ರಾಫ್ ಸಿಂಗರ್ ಸಿಧು ಮುಸೇವಾಲಾ ಸಾವಿನ ಬೆನ್ನಲ್ಲೇ, ಇದೀಗ ಬಾಲಿವುಡ್​ನ ಸಲ್ಮಾನ್ ಖಾನ್​ ಹಾಗೂ ಸಲೀಂ ಖಾನ್ ಗೆ ಜೀವ ಬೆದರಿಕೆ ಪತ್ರವೊಂದು ಬಂದಿದೆ. ಬೆದರಿಕೆ ಪ್ರಕರಣದ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಆರೋಪಿಗಳ ಪತ್ತೆಗೆ ಬ್ಯಾಂಡ್ ಸ್ಟ್ಯಾಂಡ್ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

 ಬಾಲಿವುಡ್‌ ವಲಯದಲ್ಲಿ ದೊಡ್ಡ ಸುದ್ದಿಯೊಂದು ಕೇಳಿಬಂದಿದೆ. ಹೌದು, ಬಾಲಿವುಡ್ ನ ಬ್ಯಾಡ್​ ಬಾಯ್ ಸಲ್ಮಾನ್ ಖಾನ್ (Salman Khan) ಮತ್ತು ಅವರ ತಂದೆ ಸಲೀಂ ಖಾನ್ ಗೆ ಜೀವ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಪತ್ರವನ್ನು ಸ್ವೀಕರಿಸಿದ್ದಾರೆ. ಸಲ್ಮಾನ್ ಖಾನ್ ಪ್ರತಿದಿನ ವಾಕಿಂಗ್ ಹೋಗುತ್ತಾರೆ. ಈ ನಡುವೆ ಅವರು ವಿಶ್ರಾಂತಿ ಪಡೆಯುತ್ತಿರುವ ಸ್ಥಳದಲ್ಲಿ ಸಲ್ಲು ತಂದೆ ಈ ಪತ್ರವನ್ನು ಸ್ವೀಕರಿಸಿದ್ದಾರೆ. ಈ ನಡುವೆ ಸಲ್ಮಾನ್ ಗೆ ಮತ್ತೆ ಬೆದರಿಕೆ ಪತ್ರ ಬಂದಿದ್ದು ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಪತ್ರವು ಅನಾಮಧೇಯವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.



ಸಲ್ಲುಗೆ ಹಾಗೂ ಸಲೀಂ ಖಾನ್​ಗೆ ಜೀವ ಬೆದರಿಕೆ: ಪೊಲೀಸರ ಪ್ರಕಾರ, ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿಯೊಬ್ಬರು ಬೆದರಿಕೆ ಪತ್ರವನ್ನು ಕಂಡುಕೊಂಡಿದ್ದಾರೆ. ಸಲೀಂ ಖಾನ್ ಪ್ರತಿದಿನ ವಾಕಿಂಗ್ ಹೋಗಿ ವಿಶ್ರಾಂತಿ ಪಡೆಯುವ ಬೆಂಚಿನ ಮೇಲೆ ಈ ಪತ್ರ ಪತ್ತೆಯಾಗಿದೆ. ಪತ್ರದಲ್ಲಿ ಸಲ್ಮಾನ್ ಮತ್ತು ಸಲೀಂ ಖಾನ್ ಇಬ್ಬರಿಗೂ ಗಂಭೀರ ಬೆದರಿಕೆ ಇತ್ತು. "ಮುಸಾವಲಾ ಜೈಸಾ ಕರ್ ದುಂಗಾ" (ಮುಸಾವಾಲಾ ರೀತಿಯಲ್ಲಿಯೇ ನಿಮ್ಮನ್ನು ಕೊಲೆ ಮಾಡಲಾಗುತ್ತದೆ) ಎಂದು ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಳೀಸ್ ಮೂಲಗಳು ತಿಳಿಸಿವೆ. ಹೀಗಾಗಿ ಸಲ್ಲು ಬಾಯ್​ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.



ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯ್, ಕಾರಣ ಕೇಳದ್ರೆ ಶಾಕ್ ಆಗ್ತಿರಾ



ಸಿಧು ಮುಸೇವಾಲಾ ಕೊಲೆ:



ಕಳೆದ ವಾರ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆಯನ್ನು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನಡೆಸಿದ್ದಾನೆ ಎಂದು ಹೇಳಲಾಗಿದೆ. ಸಿಧು ಮುಸೇವಾಲಾ ಹತ್ಯೆಯ ನಂತರ ನಟ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

Post a Comment

Previous Post Next Post