[6/5, 9:58 PM] mannjunath: ಚಿಕ್ಕಮಗಳೂರು (ಜೂ 5) : RSS ಬಗ್ಗೆ ಸಿದ್ದರಾಮಯ್ಯ (Siddaramaiah) ಹಾಡಿದ ಮಾತು ಇದೀಗ ಭಾರೀ ಚರ್ಚೆಯಾಗ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು (BJP Leaders) ತಿರುಗಿಬಿದ್ದಿದ್ದಾರೆ. RSS ಬಗ್ಗೆ ಮಾತಾಡಿ ಸಿದ್ದು ವಿರುದ್ಧ ಒಬ್ಬರೇ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾಡಿದ ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, (C.T Ravi) ಅವರು ಚಡ್ಡಿ ಸುಟ್ಕಂಡೇ ಇರಲಿ. ನಮ್ಮ ಹಳೇ ಚಡ್ಡಿಗಳು ಇವೆ. ಅವನ್ನೂ ಕೊಡುತ್ತೇವೆ ಸುಟ್ಟುಕೊಂಡೇ ಇರಲಿ ಎಂದು ವ್ಯಂಗ್ಯವಾಡಿದ್ದಾರೆ.
ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕೋಮು ನಶೆ ಏರಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ. ಹೆಡ್ಗೆವಾರ್ ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನ ಕಲಿಸಿದ್ದರು. ಭಾರತಕ್ಕೆ ಬಾಂಬ್ ಹಾಕುವುದನ್ನಲ್ಲ ಎಂದರು. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಆದರೆ ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಯಾಕೆ ಸಿಟ್ಟು ಎಂದು ಪ್ರಶ್ನಿಸಿದ್ದಾರೆ.
ಇದನ್ನೆಲ್ಲಾ ಕೇಳೋಕೆ ಸಿದ್ದರಾಮಯ್ಯ ಯಾರು?
ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಸಿದ್ದರಾಮಯ್ಯ ಯಾರು. ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ. ಸರ್ಕಾರ ಅದನ್ನ ಒಪ್ಪಿದೆ. ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತ ಕೇಳೋಕೆ ಇವರ್ಯಾರು. ಇವರು ಹೇಳಿದಂತೆಲ್ಲಾ ಕೇಳೋಕೆ ಆಗುತ್ತಾ ಎಂದರು.
ಇದನ್ನೂ ಓದಿ: Siddaramaiah: ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿದೆ; ಹಳೇ ಸಮಿತಿ ತಯಾರಿಸಿದ ಪುಸ್ತಕವನ್ನೇ ಮಕ್ಕಳಿಗೆ ಕೊಡಿ
ಅಂಬೇಡ್ಕರ್ ಬಗ್ಗೆ ನಮಗೂ ಅಭಿಮಾನವಿದೆ: ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನ ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. ಒಂದಲ್ಲ ಎರಡು ಬಾರಿ ಅನಕ್ಷರಸ್ಥ ವ್ಯಕ್ತಿಯನ್ನ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್ ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಜವಾಹರಲಾಲ್ ನೆಹರು ಭಾರತ ರತ್ನವನ್ನ ತಮಗೆ ತಾವೇ ಕೊಟ್ಕೊಂಡ್ರು. ಆದರೆ, ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನ ಕೊಡಲಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಕಾಂಗ್ರೆಸ್ ಹೆಜ್ಜೆ-ಹೆಜ್ಜೆಗೂ ಅಂಬೇಡ್ಕರ್ ಅವರನ್ನು ತುಳಿಯುತ್ತಲೇ ಬಂದಿದೆ. ಇಂಥವರು ನಮಗೆ ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಮಾತಿನಲ್ಲೇ ಪಂಚ್ ಕೊಟ್ಟಿದ್ದಾರೆ.
ಸಿದ್ದು ಅಂಡ್ ಡಿಕೆಶಿ ಬ್ರದರ್ಸ್
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಡಿಪಾಜಿಟ್ ಕಳೆದುಕೊಂಡಿದೆ. ಕರ್ನಾಟಕದಲ್ಲೂ ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ದುರಾಂಕಾರ ಹಾಗೂ ಓಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲಾ "ದೆ ಆರ್ ಆಲ್ ಸಿದ್ದು ಅಂಡ್ ಡಿಕೆಶಿ ಬ್ರದರ್ಸ್" ಅದಕ್ಕೆ ಬಾಯಿ ಬಂದ್ ಆಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: RSS ಬಗ್ಗೆ ಮಾತಾಡಿದ್ರೆ ಬಂದ್ರೆ ಹುಷಾರ್; ನೀವೇ ಸುಟ್ಟು ಹೋಗ್ತೀರಾ, ಸಿದ್ದುಗೆ ಸಚಿವ ಅಶೋಕ್ ಟಾಂಗ್
ಡಿಜೆಹಳ್ಳಿ-ಕೆಜೆಹಳ್ಳಿಯಲ್ಲಿ ನಡೆಯಿತಲ್ಲಾ ಅದನ್ನ ಇಡೀ ರಾಜ್ಯದಲ್ಲಿ ಮಾಡಲು ಹೊರಟಿದ್ದಾರಾ. ಇವರಿಗೆ ಒಳ್ಳೆದು ಬೇಡ. ಮತಾಂದತೆಯನ್ನ ಬೆಳೆಸೋದು ಇವರ ಗುರಿಯಂತೆ ಕಾಣುತ್ತೆ ಎಂದರು. ಮತಾಂದತೆಗೆ ಕುಮ್ಮಕ್ಕು ಕೊಟ್ಟ ಪರಿಣಾಮ ದೇಶ ವಿಭಜನೆ ಆಯ್ತು. ಇವರು ಮತಾಂದತೆಗೆ ಮತ್ತೆ ಕುಮ್ಮಕ್ಕು ಕೊಡ್ತಿದ್ದಾರೆ. ಅವರ ಸರ್ವನಾಶವೂ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

Post a Comment