Monkeypox in India: ಭಾರತಕ್ಕೂ ಕಾಲಿಟ್ಟೇ ಬಿಡ್ತಾ ಮಂಕಿಪಾಕ್ಸ್? 5 ವರ್ಷದ ಬಾಲಕಿ ಮೇಲೆ ತೀವ್ರ ನಿಗಾ! ಮಂಕಿಪಾಕ್ಸ್ ಮಾರಿ ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. 5 ವರ್ಷದ ಹುಡುಗಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ಇದೀಗ ಬಾಲಕಿಯ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಆಕೆ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.


  ಉತ್ತರ ಪ್ರದೇಶ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಯಿಲೆಯ (Monkeypox disease) ಅಬ್ಬರ ಮುಂದುವರೆದಿದೆ. ಒಂದೆಡೆ ಕರೋನಾ (Corona) ಆರ್ಭಟ ಜೋರಾಗಿದ್ದರೆ, ಮತ್ತೊಂದೆಡೆ ಮಂಕಿಪಾಕ್ಸ್ ಸೋಂಕು ಹೆಚ್ಚಾಗುತ್ತಿದೆ. ಆಫ್ರಿಕಾ (Africa), ಬ್ರಿಟನ್ (Britain) ಸೇರಿದಂತೆ ಹಲವೆಡೆ ಈಗಾಗಲೇ ಮಂಕಿಪಾಕ್ಸ್ ಸೋಂಕು ನಿಧಾನಕ್ಕೆ ಹೆಚ್ಚುತ್ತಿದೆ. ಈ ನಡುವೆಯೇ ಭಾರತೀಯರೂ (Indians) ಕೂಡ ಆತಂತಕ್ಕೆ ಒಳಗಾಗುವ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ಮಂಕಿಪಾಕ್ಸ್ ಮಾರಿ ಭಾರತಕ್ಕೂ (India) ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶ (Uttar Pradesh) ರಾಜ್ಯದ ಗಾಜಿಯಾಬಾದ್‌ನ (Ghaziabad) 5 ವರ್ಷದ ಹುಡುಗಿಯಲ್ಲಿ (Girl) ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ಇದೀಗ ಬಾಲಕಿಯ ರಕ್ತದ ಮಾದರಿಗಳನ್ನು (Blood Samples) ಪ್ರಯೋಗಾಲಯಕ್ಕೆ (Laboratory) ಕಳಿಸಲಾಗಿದ್ದು, ಆಕೆ ಮೇಲೆ ಆರೋಗ್ಯ ಇಲಾಖೆ (Health Department) ತೀವ್ರ ನಿಗಾ ಇರಿಸಿದೆ.



ಕಿವಿಯ ಚಿಕಿತ್ಸೆಗಾಗಿ ಬಂದಿದ್ದ ಬಾಲಕಿಯಲ್ಲಿ ಸೋಂಕಿರುವ ಶಂಕೆ

: ಮೇ 23ರಂದು ಗಾಜಿಯಾಬಾದ್‌ನಲ್ಲಿ ಕಿವಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ 5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್ ರೀತಿಯ ಲಕ್ಷಣಗಳು ಕಂಡುಬಂದಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಅಪ್ರಾಪ್ತ ವಯಸ್ಕನ ಚರ್ಮದ ಮೇಲೆ ವಿಪರೀತ ದದ್ದುಗಳು ಮತ್ತು ತುರಿಕೆ ಇದೆ ಎಂದು ಶೀಘ್ರದಲ್ಲೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ ಅದು ಮಂಕಿಪಾಕ್ಸ್ ಇರಬಹುದೇ ಎಂಬುದು ಖಚಿತವಾಗಿಲ್ಲ ಎಂದು ಇಎನ್ ಟಿ ತಜ್ಞ ಡಿ.ಬಿ.ಪಿ ತ್ಯಾಗಿ ಹೇಳಿದ್ದಾರೆ.



ಬಾಲಕಿಗೆ ಬೇರೆ ಯಾವುದೇ ಲಕ್ಷಣಗಳಿಲ್ಲ



ಪ್ರಾಥಮಿಕ ಪರೀಕ್ಷೆಯಲ್ಲಿ ಬಾಲಕಿಗೆ ಜ್ವರ ಅಥವಾ ತಲೆನೋವು ಇಲ್ಲ ಎಂದು ತಿಳಿದುಬಂದಿದೆ. ಮಗುವಿಗೆ ವಿದೇಶಿ ಪ್ರಯಾಣದ ಇತಿಹಾಸವಿಲ್ಲ ಅಥವಾ ಕಳೆದ ಒಂದು ತಿಂಗಳಲ್ಲಿ ವಿದೇಶಕ್ಕೆ ಪ್ರಯಾಣಿಸಿದ ಯಾವುದೇ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಇದನ್ನೂ ಓದಿ:  ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?



ಶಂಕಿತ ರೋಗಲಕ್ಷಣವುಳ್ಳ ಬಾಲಕಿಗೆ ಐಸೋಲೇಷನ್

Post a Comment

Previous Post Next Post