ರಾಜ್ಯದಲ್ಲಿ ಸ್ಟಾರ್ಟಪ್ ಹೂಡಿಕೆ 40 ಪರ್ಸೆಂಟ್ ಕುಸಿತ ಕಂಡಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ರಾಜಕೀಯ ಕುಚೋದ್ಯಮದಲ್ಲಿ ಭಾರಿ ಆಸಕ್ತಿ: ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ. ತಮಗೆ ಸಂಬಂಧಪಡದ ವಿಷಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು, ಆರ್ ಎಸ್‌ಎಸ್ ನಿಷೇಧದ ಹಠ, ಸಿಕ್ಕಸಿಕ್ಕವರ ಮೇಲೆ ರಾಜಕೀಯ ಕುಚೋದ್ಯ - ಇವುಗಳಲ್ಲೇ ಸದಾ ಕಾಲಹರಣ ಮಾಡುವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಕರ್ತವ್ಯದ ಅರಿವೂ ಇದ್ದಂತಿಲ್ಲ, ಆಸಕ್ತಿಯಂತೂ ಮೊದಲೇ ಇಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.
[ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಾಸಕ್ತಿ, ನಿಷ್ಕ್ರಿಯತೆ ಪರಿಣಾಮವಾಗಿ ಇಂದು ನಮ್ಮ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಭಾರಿ ಕುಸಿತ ಕಂಡಿದೆ. ನವೋದ್ಯಮಗಳ ರಾಜಧಾನಿ ಎಂದು ಖ್ಯಾತಿ ಪಡೆದಿದ್ದ ಕರ್ನಾಟಕ ಮತ್ತು ಬೆಂಗಳೂರು ಇಂದು ಅನ್ಯರಾಜ್ಯಗಳ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ನಾಡಿನ ಯುವ ನವೋದ್ಯಮಿಗಳಿಗೆ, ಹೂಡಿಕೆದಾರರಿಗೆ ಅವರ ಭವಿಷ್ಯದ ಬಗ್ಗೆ ಚಿಂತಿಸುವ, ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆ ಬೆಳೆಸುವ ಒಬ್ಬ ಕ್ರಿಯಾಶೀಲ ಐಟಿ ಸಚಿವ ಬೇಕೇ ಹೊರತು ಸದಾ ರಾಜಕೀಯ ಕುಚೋದ್ಯಮದಲ್ಲೇ ಟೈಂ ಪಾಸ್ ಮಾಡುವ Troll ಮಿನಿಸ್ಟರ್ ಅಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಹಿಡಿದಿರುವ ಈ ಕಾಂಗ್ರೆಸ್ ಎಂಬ ಗ್ರಹಣ ಬಿಡುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದಾರೆ ಆರ್.ಅಶೋಕ್.

Post a Comment