ಸಾಂದರ್ಭಿಕ ಚಿತ್ರ
ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಭಾರತೀಯರು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲೇಟ್ ಅನ್ನು ಅಸಮರ್ಪಕ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಬಿಪಿ, ಶುಗರ್ ಇವುಗಳ ಬಗ್ಗೆ ತಲೆ ಕೆಡೆಸಿಕೊಂಡಷ್ಟು ಭಾರತದಲ್ಲಿ ವಿಟಮಿನ್ ಕೊರತೆಯ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುವುದಿಲ್ಲ. ಇದರಿಂದಲೇ ಭಾರತೀಯರು ಕೆಲ ವಿಟಮಿನ್ ಕೊರತೆಗಳನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಭಾರತೀಯ ಎಲ್ಲಾ ವಯೋಮಾನದವರಲ್ಲಿ, ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲೇಟ್‌ಗಳ ಕೊರತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ.
ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಭಾರತೀಯರು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲೇಟ್ ಅನ್ನು ಅಸಮರ್ಪಕ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಭಾರತೀಯರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫೋಲೇಟ್ ಕೊರತೆಯಿದೆ: ಅಧ್ಯಯನ
ಹಾರ್ವರ್ಡ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವು 185 ದೇಶಗಳ ಜನರ ಆಹಾರ ಸೇವನೆಯನ್ನು ಅಧ್ಯಯನ ಮಾಡಿದ್ದು, ಸಂಶೋಧಕರು ಯಾವುದೇ ಪೂರಕಗಳನ್ನು ತೆಗೆದುಕೊಳ್ಳದೆಯೇ ಜಗತ್ತಿನಾದ್ಯಂತ ಶತಕೋಟಿ ಜನರು 15 ಅಗತ್ಯ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಪ್ರಪಂಚದಾದ್ಯಂತ, ಐದು ಶತಕೋಟಿ ಜನರು ಅಯೋಡಿನ್, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಅನ್ನು ಸೇವಿಸೋದೆ ಇಲ್ಲ. ಅದರಲ್ಲಿ ಭಾರತೀಯರು ಸಹ ಒಂದಿಷ್ಟು ವಿಟಮಿನ್‌ಗಳ ಕೊರತೆ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಭಾರತದಲ್ಲಿ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಅಯೋಡಿನ್ ಅನ್ನು ಸೇವಿಸುತ್ತಾರೆ ಮತ್ತು ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಪುರುಷರು ಸತು ಮತ್ತು ಮೆಗ್ನೀಸಿಯಮ್ ಅನ್ನು ಅಸಮರ್ಪಕ ಪ್ರಮಾಣದಲ್ಲಿ ಸೇವಿಸುತ್ತಾರೆ ಎಂದು ತಂಡವು ಕಂಡುಹಿಡಿದಿದೆ. 10 ರಿಂದ 30 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಕಡಿಮೆ ಮಟ್ಟದಲ್ಲಿ ಕ್ಯಾಲ್ಸಿಯಂ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ಈ ಪ್ರವೃತ್ತಿ ಹೆಚ್ಚಿದೆ ಎಂದಿದ್ದಾರೆ.
“ವಿಟಮಿನ್ ಕೊರತೆಯ ಬಗ್ಗೆ ಅರಿವು ಮೂಡಿಸಬೇಕಿದೆ”
ಯುಸಿಎಸ್‌ಬಿಯ ಅಧ್ಯಯನದ ಸಹ-ಮುಖ್ಯ ಲೇಖಕ ಮತ್ತು ಸಂಶೋಧನಾ ಪ್ರಾಧ್ಯಾಪಕ ಕ್ರಿಸ್ ಫ್ರೀ, ಈ ಅಧ್ಯಯನವು ಒಂದು ದೊಡ್ಡ ಹೆಜ್ಜೆಯಾಗಿದೆ. ಪ್ರಪಂಚದಾದ್ಯಂತ ವಿಟಮಿನ್ ಕೊರತೆಯಾದಲ್ಲಿ ಸಂಭವಿಸಬಹುದಾದ ತೊಂದರೆಗಳ ಬಗ್ಗೆ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು. ಪ್ರಮುಖ ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ, ವಿಟಮಿನ್ ಡಿ, ಮತ್ತು ಕಬ್ಬಿಣ, ಕ್ಯಾಲ್ಸಿಯಂ, ಫೋಲೇಟ್, ಸೋಡಿಯಂ, ಸತು ಮತ್ತು ಇನ್ನೂ ಅನೇಕ ಖನಿಜಗಳು ನಮ್ಮ ಯೋಗಕ್ಷೇಮಕ್ಕೆ ಪ್ರಮುಖವಾಗಿವೆ ಎಂದು ಈ ಸಂಶೋಧನೆಯು ನಮಗೆ ತೋರಿಸುತ್ತದೆ ಎಂದು ಅವರು ಹೇಳಿದರು.
ವಿಶ್ವದ ಅರ್ಧಕ್ಕಿಂತ ಹೆಚ್ಚು ಜನರು ಅಸಮರ್ಪಕ ಮಟ್ಟದ ರೈಬೋಫ್ಲಾವಿನ್, ಫೋಲೇಟ್ ಮತ್ತು ವಿಟಮಿನ್ ಸಿ ಮತ್ತು ಬಿ 6 ಅನ್ನು ಸೇವಿಸುತ್ತಾರೆ. ನಿಯಾಸಿನ್ ಅನ್ನು 22% , ಥಯಾಮಿನ್ -30% ಮತ್ತು ಸೆಲೆನಿಯಮ್ ಅನ್ನು 37% ಜನ ಸೇವಿಸುತ್ತಿದ್ದಾರೆ ಎಂದು ವರದಿಯು ತಿಳಿಸಿದೆ. ಆದರೆ ಭಾರತದಲ್ಲಿ, ರೈಬೋಫ್ಲಾವಿನ್, ಫೋಲೇಟ್, ವಿಟಮಿನ್ B6 ಮತ್ತು ವಿಟಮಿನ್ B12 ನ ಅಸಮರ್ಪಕ ಸೇವನೆಯು ವಿಶೇಷವಾಗಿ ಅಧಿಕವಾಗಿದೆ.
ಇದನ್ನೂ ಓದಿ: Bank Jobs in Karnataka: ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ- ಆಸಕ್ತರು ಇವತ್ತೇ ಅಪ್ಲೈ ಮಾಡಿ
10-30 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ಕಡಿಮೆ ಕ್ಯಾಲ್ಸಿಯಂ ಸೇವನೆಯ ಅಪಾಯದಲ್ಲಿದ್ದಾರೆ ಎಂದು ಅವರು ಗಮನಿಸಿದರು. ಇದಲ್ಲದೆ, ಉತ್ತರ ಅಮೆರಿಕಾ, ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಕ್ಯಾಲ್ಸಿಯಂ ಸೇವನೆಯು ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ವಿಟಮಿನ್ ಹೆಚ್ಚಿಸಿಕೊಳ್ಳಲು ಬಲವರ್ಧಿತ ಆಹಾರಗಳು ಅಥವಾ ಪೂರಕಗಳನ್ನು ಜನರು ಗಣನೆಗೆ ತೆಗೆದುಕೊಂಡಿಲ್ಲ. ಕೆಲವರಿಗೆ ವಿಟಮಿನ್ ಪೂರಕಗಳ ಬಗ್ಗೆ ಗೊತ್ತೇ ಇಲ್ಲ ಎಂದು ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಬಲವರ್ಧಿತ ಆಹಾರಗಳು ಮತ್ತು ಪೂರಕಗಳನ್ನು ಸೇವಿಸುವ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ವಿಟಮಿನ್ ಸಮತೋಲಿತ ಮಟ್ಟದಲ್ಲಿರುವುದು ಕಂಡುಬಂದಿದೆ.

Post a Comment