ಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕುರಿತು ದೊಡ್ಡ ಚರ್ಚೆಗಳು ಏರ್ಪಟ್ಟಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳು ಮುಕ್ತವಾಗಿ ತಮ್ಮ ನಾಯಕನೇ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿ ಬದಲಾವಣೆ ಕೇವಲ ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರದೇ ಸ್ವಾಮೀಜಿಗಳೂ ಸಹ ಈ ಕುರಿತು ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ನಿಶ್ಚಲಾನಂದನಾಥ ಸ್ವಾಮೀಜಿ ಡಿಕೆ ಶಿವಕುಮಾರ್ ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದಿದ್ದರು.
ಈ ಹೇಳಿಕೆ ಬೆನ್ನಲ್ಲೇ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ ಸ್ವಾಮೀಜಿಗಳು ರಾಜಕೀಯದ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದಿದ್ದರು. ಕುಮಾರಸ್ವಾಮಿಯ ಈ ಹೇಳಿಕೆಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಸಮುದಾಯದ ವ್ಯಕ್ತಿಯೊಬ್ಬ ಪಕ್ಷಕ್ಕೆ ಕಷ್ಟಪಟ್ಟು ದುಡಿದಿದ್ದಾರೆ. ಆ ಕಷ್ಟಪಟ್ಟು ದುಡಿದ ವ್ಯಕ್ತಿಗೆ ಅವಕಾಶದಿಂದ ವಂಚನೆ ಆಗುತ್ತದೆ, ಹಾಗಾಗಿ ನೀವು ಮುಂದೆ ಬಂದು ಮಾತನಾಡಬೇಕು ಎಂದು ಭಕ್ತರು ಕೇಳಿಕೊಂಡಿದ್ದಕ್ಕೆ ನಾನು ಆ ರೀತಿ ಹೇಳಬೇಕಾಯಿತು ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಾನು ಯಾವ ಪಕ್ಷದ ವಿರುದ್ಧವಾಗಿಯೂ ಅಲ್ಲ, ಯಾವ ವ್ಯಕ್ತಿಯ ವಿರುದ್ಧವಾಗಿಯೂ ಅಲ್ಲ, ಡಿಕೆ ಶಿವಕುಮಾರ್ ಕಷ್ಟಪಟ್ಟು ದುಡಿದಿದ್ದಾರೆ, ಅವರಿಗೆ ಅವಕಾಶ ಸಿಗಬೇಕು ಎಂದು ಹೈಕಮಾಂಡ್‌ಗೆ ಮನವಿ ಅಷ್ಟೇ ಎಂದ ಸ್ವಾಮೀಜಿ ಹೈಕಮಾಂಡ್ ನಾಯಕರು ಡಿಕೆಶಿಯವರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ, ಅದಕ್ಕೆ ತಕ್ಕಹಾಗೆ ಅವಕಾಶ ಕೊಡಬೇಕು ಎಂದರು.
ಇನ್ನು ಡಿಕೆಶಿಗೆ ಅಧಿಕಾರ ಕೊಟ್ಟರೆ ಪ್ರಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಅಧಿಕಾರ ನಿರ್ವಹಿಸಲಿದ್ದಾರೆ ಎಂದು ಭರವಸೆ ಹೊರಹಾಕಿದ ಸ್ವಾಮೀಜಿ ಕೇವಲ ಒಕ್ಕಲಿಗರು ಮಾತ್ರವಲ್ಲ ಎಲ್ಲ ಕೆಳವರ್ಗದ ಜನರಿಗೂ ಸಹ ಅವರು ನೆರವಾಗುವ ಕೆಲಸ ಮಾಡಿ ಸಮತೋಲನವಾಗಿ ಅಭಿವೃದ್ಧಿ ಸಾಧಿಸಲಿದ್ದಾರೆ ಎಂದರು.

Post a Comment