Kitchen Hacks: ಹಣ್ಣುಗಳ ಹತ್ರ ನೊಣ ಬರ್ಬಾರ್ದು ಅಂದ್ರೆ ಇಷ್ಟು ಮಾಡಿ ಸಾಕು


 How to Get Rid of Fruit Flies: ಮನೆಯಲ್ಲಿ ಹಣ್ಣುಗಳನ್ನು ಅಥವಾ ತರಕಾರಿಯನ್ನು ತಂದು ಇಟ್ಟಾಗ ಅದರ ಹತ್ತಿರ ನೊಣಗಳು ಬರುವುದು ಸಾಮಾನ್ಯ. ಅವುಗಳು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅವುಗಳು ಬರದಂತೆ ತಡೆಯುವುದು ಬಹಳ ಮುಖ್ಯ. ಹಾಗಾದ್ರೆ ನೊಣಗಳು ಬರದಂತೆ ತಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.

ಹಣ್ಣು ಅಥವಾ ತರಕಾರಿಯನ್ನು ನೀವು ಮನೆಗೆ ತಂದಾಗ ಅದನ್ನು ತೊಳೆದು ಇಡುವುದು ಬಹಳ ಮುಖ್ಯ. ಅವುಗಳಲ್ಲಿ ರಾಸಾಯನಿಕಗಳು ನೊಣಗಳನ್ನು ಆಕರ್ಷಿಸಬಹುದು, ಹಾಗಾಗಿ ನೀರಿನಿಂದ ತೊಳೆದು ಇಟ್ಟರೆ ನೊಣಗಳು ಬರುವುದು ಕಡಿಮೆಯಾಗುತ್ತದೆ.


.ಮನೆಯಲ್ಲಿ ಪ್ರತಿದಿನ ಕರ್ಪೂರ ಹಚ್ಚುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಕೇವಲ ಸೊಳ್ಳೆಗಳನ್ನು ಮಾತ್ರವಲ್ಲದೇ, ನೊಣಗಳನ್ನು ಸಹ ದೂರವಿರಿಸುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಕರ್ಪೂರವನ್ನು ಹಚ್ಚಿ ಇಡಿ.
ಅಡುಗೆ ಮನೆಯ ಕಿಟಕಿಯಲ್ಲಿ ಒಂದು ಕವರ್ ಅಥವಾ ಬೌಲ್​ನಲ್ಲಿ ನೀರು ಹಾಗೂ ಆ್ಯಪರ್​ ಸೈಟರ್​ ವಿನೇಗರ್ ಹಾಕಿ ಕಟ್ಟಿ ಇಡಿ. ಇದು ನೊಣಗಳು ಮನೆಯನ್ನು ಪ್ರವೇಶಿಸದಂತೆ ತಡೆಯುತ್ತದೆ.
ಒಂದು ಸೇಬಿನ ತುಂಡನ್ನು ತೆಗೆದುಕೊಂಡು ಅದನ್ನು ಆ್ಯಪರ್ ಸೈಡರ್​ ವಿನೇಗರ್​ನಲ್ಲಿ ನೆನೆಸಿ ನಂತರ ಕವರ್ ಒಳಗೆ ಕಟ್ಟಿ ಇಡಿ. ಆ ಕವರ್​ಗೆ ಸಣ್ಣ ಸಣ್ಣ ತೂತುಗಳನ್ನು ಮಾಡಿ ಇಡಿ. ಆ ತೂತುಗಳ ಮೂಲಕ ನೊಣಗಳು ಒಳಗೆ ಹೋಗಿ ಸಾಯುತ್ತವೆ.
ಈ ಎಲ್ಲಾ ಟಿಪ್ಸ್​ ಫಾಲೋ ಮಾಡುವುದು ಎಷ್ಟು ಸೂಕ್ತವೋ ಹಾಗೆಯೇ ಹಣ್ಣುಗಳನ್ನು ಮೊದಲು ಮುಚ್ಚಿಡುವ ಅಭ್ಯಾಸ ಎಲ್ಲದಕ್ಕಿಂತ ಮುಖ್ಯ ಹಾಗೂ ಪ್ರಯೋಜನಕಾರಿ. ಹಾಗಾಗಿ ಹಣ್ಣುಗಳನ್ನು ತಂದು ಮುಚ್ಚಿಡಿ.
ಸಾಮಾನ್ಯವಾಗಿ ನಾವು ಅಡುಗೆ ಮನೆಯನ್ನು ಸ್ವಚ್ಛ ಮಾಡುತ್ತೇವೆ. ಆದರೆ ನಾವು ನೀರಿಗೆ ಸ್ವಲ್ಪ ವಿನೇಗರ್ ಸೇರಿಸಿ ಹಾಕಿ ಅಡುಗೆ ಮನೆಯನ್ನು ಕ್ಲೀನ್ ಮಾಡಿದರೆ ನೊಣಗಳ ಕಾಟಕ್ಕೆ ಮುಕ್ತಿ ಸಿಗುತ್ತದೆ.
ಪುದೀನ ಎಲೆಗಳ ಪರಿಮಳದ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಇವುಗಳು ನಿಮಗೆ ನೊಣದಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಅಡುಗೆ ಮನೆಯ ಮೂಲೆಗಳಲ್ಲಿ ಪುದೀನ ಸೊಪ್ಪುಗಳನ್ನು ಇಟ್ಟು ನೋಡಿ.
ಈ ಎಲ್ಲಾ ಟಿಪ್ಸ್ ನಿಮಗೆ ನೊಣ ಹಾಗೂ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಿಮ್ಮ ಆರೋಗ್ಯ ದೃಷ್ಟಿಯಿಂದ ಸಹ ಇದು ಪ್ರಯೋಜನಕಾರಿ.

Post a Comment

Previous Post Next Post