ಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳ ತಡೆಗೆ ಕಾರಾಗೃಹ ಇಲಾಖೆ ಮುಖ್ಯಸ್ಥ ಬಿ.ದಯಾನಂದ್ ಪ್ರಯೋಗಕ್ಕೆ ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ನಗರದ ಪ್ರತಿಯೊಬ್ಬ ಸಿಬ್ಬಂದಿಯೂ ಬಾಡಿವೋರ್ನ್ ಕ್ಯಾಮೆರಾ ಬಳಸಿ ಕರ್ತವ್ಯ ನಿರ್ವಹಿಸಬೇಕೆಂದು ಆದೇಶ ನೀಡಿದ್ದು ಮಾತ್ರವಲ್ಲದೆ, ಖುದ್ದು ಬಾಡಿವೋರ್ನ್ ಕ್ಯಾಮೆರಾ ಧರಿಸುತ್ತಿದ್ದರು.
ಅದೇ ಮಾದರಿಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿ-ಸಿಬ್ಬಂದಿ(ಪ್ರಮುಖವಾಗಿ ಭದ್ರತಾ ಸಿಬ್ಬಂದಿ, ಬ್ಯಾರಕ್‌ಗಳ ತಪಾಸಣೆ ಸಿಬ್ಬಂದಿ) ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಬಳಸಬೇಕು ಎಂದು ಆದೇಶಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ದರ್ಶನ್ ಬ್ಯಾರಕ್‌ನಲ್ಲಿ ಸಿಸಿ ಕ್ಯಾಮೆರಾ ಹಾಗೂ ಅಲ್ಲಿನ ಭದ್ರತಾ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಬಳಸುವಂತೆ ಸೂಚಿಸಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಎಲ್ಲಾ ಬ್ಯಾರಕ್‌ಗಳಲ್ಲೂ ಕಟ್ಟೆಚ್ಚರ ವಹಿಸಲು ದಯಾನಂದ್ ಮುಂದಾಗಿದ್ದಾರೆ. ಅದರಂತೆ ಪ್ರತಿ ನಿತ್ಯ ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು 3-4 ಬಾರಿ ತಪಾಸಣೆ ನಡೆಸಬೇಕು. ಈ ವೇಳೆ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಬಳಸಬೇಕು. ಅಲ್ಲದೆ, ಕೈದಿಗಳ ಜತೆ ಮಾತನಾಡುವಾಗ, ಅವರಿಗೆ ಜೈಲಿನ ಕೈಪಿಡಿಯಲ್ಲಿರುವ ಸೌಲಭ್ಯ ಕಲ್ಪಿಸುವಾಗ ಹಾಗೂ ಇತರೆ ಸಂದರ್ಭದಲ್ಲಿ ಬಾಡಿವೋರ್ನ್ ಕ್ಯಾಮೆರಾ ಬಳಕೆ ಮಾಡಬೇಕು. ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ ಸಂಬಂಧಿತ ಅಧಿಕಾರಿ-ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಧರಿಸಬೇಕು. ಸಿಬ್ಬಂದಿ ತಪಾಸಣೆ ಬಳಿಕವೂ ಅಧಿಕಾರಿಗಳ ಪರಿಶೀಲನೆ ವೇಳೆ ಕೈದಿಗಳ ಬಳಿ ಯಾವುದಾದರೂ ನಿಷೇಧಿತ ವಸ್ತುಗಳು ಕಂಡು ಬಂದರೆ, ಕೂಡಲೇ ಆಯಾ ಬ್ಯಾರಕ್‌ನ ಸಿಬ್ಬಂದಿಯೇ ಹೊಣೆ ಮಾಡಲಾಗುತ್ತದೆ. ಈ ಮೂಲಕ ಕಳ್ಳಾಟ ಆಡುತ್ತಿದ್ದ ಸಿಬ್ಬಂದಿಗೆ ಲಗಾಮು ಹಾಕಲು ದಯಾನಂದ್ ಮುಂದಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕಾರಾಗೃಹ ಇಲಾಖೆಯ ಎಡಿಜಿಪಿ ಬಿ.ದಯಾನಂದ್, ಕೈದಿಗಳು ಮತ್ತು ಬ್ಯಾರಕ್ ತಪಾಸಣೆ ವೇಳೆ ಅಧಿಕಾರಿ-ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಬಳಸಬೇಕೆಂದು ಸೂಚಿಸಲಾಗಿದೆ. ಅದರಿಂದ ಕೆಲವೊಂದು ಅಕ್ರಮಗಳ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾರಾಗೃಹ ಇಲಾಖೆಯ ಎಡಿಜಿಪಿ ಬಿ.ದಯಾನಂದ್, ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳು ಮತ್ತು ಬ್ಯಾರಕ್ ತಪಾಸಣೆ ವೇಳೆ ಅಧಿಕಾರಿ-ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಬಳಸಬೇಕೆಂದು ಸೂಚಿಸಲಾಗಿದೆ. ಅದರಿಂದ ಕೆಲವೊಂದು ಅಕ್ರಮಗಳ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಕೆಲ ದಿನಗಳ ಹಿಂದೆ ಉಗ್ರ ಜುಹಾದ್ ಹಮೀದ್ ಶಕೀಲ್, ಸರಣಿ ಹಂತಕ ಉಮೇಶ್ ರೆಡ್ಡಿ ಮೊಬೈಲ್ ಬಳಕೆ ಮಾಡಿದ್ದರು. ಅಲ್ಲದೆ, ಕೈದಿಗಳು ಕೈದಿಗಳ ಬ್ಯಾರಕ್‌ನಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

Post a Comment