India-Russia: ರಷ್ಯಾ-ಉಕ್ರೇನ್ ಶಾಂತಿ ಒಪ್ಪಂದಕ್ಕೆ ಭಾರತ ಮಧ್ಯಸ್ಥಿಕೆ? ಶೀಘ್ರವೇ ಮೋದಿ ಭೇಟಿಗೆ ಬರಲಿದ್ದಾರೆ ಪುಟಿನ್!


 ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ - ಭಾರತದ ಪ್ರಧಾನಿ ನರೇಂದ್ರ ಮೋದಿ

ಮಾಸ್ಕೋ: ಭಾರತ ಮತ್ತು ರಷ್ಯಾ (India-Russia) ನಡುವಿನ ಸ್ನೇಹ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಆದರಂತೆ, ಎರಡೂ ದೇಶಗಳು ಪ್ರತಿ ಹಂತದಲ್ಲೂ ಪರಸ್ಪರ ಬೆಂಬಲಿಸುತ್ತವೆ. ಇದರ ನಡುವೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಮಧ್ಯೆದಲ್ಲಿಯೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಹೌದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಆಹ್ವಾನವನ್ನು ಸ್ವೀಕರಿಸಿ, ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದಾರೆ. ಆದರೆ ಭೇಟಿಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಪುಟಿನ್ ಅವರ ಭಾರತ ಭೇಟಿಯ ಕಾರ್ಯಕ್ರಮವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಗುರುವಾರ ತಿಳಿಸಿದ್ದಾರೆ.

ರಷ್ಯಾದ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿ (RIAC) ಆಯೋಜಿಸಿದ ‘ರಷ್ಯಾ ಮತ್ತು ಭಾರತ: ಹೊಸ ದ್ವಿಪಕ್ಷೀಯ ಕಾರ್ಯಸೂಚಿಯ ಕಡೆಗೆ’ ಎಂಬ ಸಮ್ಮೇಳನದಲ್ಲಿ ಭಾಷಣ ಮಾಡಿದ ಲಾವ್ರೊವ್ ಅವರು, ಪುಟಿನ್ ಅವರು ಶಿಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ದೃಢಪಡಿಸಿದರು. ಜೊತೆಗೆ ಅವರ ಭೇಟಿಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಇನ್ನು ರಷ್ಯಾದ ಸುದ್ದಿ ಸಂಸ್ಥೆ TASS ವರದಿಯ ಪ್ರಕಾರ, ಪ್ರಧಾನ ಮಂತ್ರಿ ಮೋದಿ ಅವರ ಆಹ್ವಾನವನ್ನು ಪುಟಿನ್ ಸ್ವೀಕರಿಸಿದ್ದಾರೆ ಎಂದು ಲಾವ್ರೊವ್ ಹೇಳಿದ್ದಾರೆ. ಇನ್ನು ಈ ಭೇಟಿಯು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಶಾಂತಿ ಒಪ್ಪಂದ ಮದ್ದು ಎರೆಯಲು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ನಡೆಯಲಿದೆ

Post a Comment

Previous Post Next Post