ನ್ನೆಯಷ್ಟೇ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಹಾರು ದರ ಏರಿಕೆಗೆ ಅಸ್ತು ಎಂದಿದೆ. ನಂದಿನಿ ಹಾಲಿನ ಪ್ರತಿ ಲೀಟರ್‌ಗೆ 4 ರೂಪಾಯಿಗಳನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಇನ್ನು ಹಾಲು ಒಕ್ಕೂಟ ಹಾಗೂ ರೈತರಿಂದ ಹಲವು ದಿನಗಳಿಂದ ಹಾಲು ದರ ಏರಿಕೆಗೆ ಸತತವಾಗಿ ಮನವಿ ಬಂದಿತ್ತು.
ರೈತರು ಲೀಟರ್‌ಗೆ ಐದು ರೂಪಾಯಿಗಳನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ 4 ರೂಪಾಯಿಗಳನ್ನು ಲೀಟರ್‌ಗೆ ಹೆಚ್ಚಿಸಿದೆ.
ಹೀಗೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ ಬೆನ್ನಲ್ಲೇ ಸಾಲು ಸಾಲು ಟೀಕೆಗಳು ವ್ಯಕ್ತವಾಗಿವೆ. ಬಸ್, ಮೆಟ್ರೊ ಬಳಿಕ ಇದೀಗ ಹಾಲಿನ ದರ ಏರಿಕೆ ಮಾಡಿದ್ದರ ವಿರುದ್ಧ ಜನರು ಕಿಡಿಕಾರಿದರು ಹಾಗೂ ವಿರೋಧ ಪಕ್ಷಗಳು ಸಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು.
ಹೀಗೆ ಹಾಲಿನ ದರ ಏರಿಸಿದ್ದಕ್ಕಾಗಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿಯೇ ಹಾಲಿನ ದರ ಕಡಿಮೆ ಇದೆ ಎಂದು ಟ್ವೀಟ್ ಒಂದನ್ನು ಮಾಡುವ ಮೂಲಕ ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಲೀಟರ್ ಹಾಲಿಗೆ ಕೇರಳದಲ್ಲಿ 52 ರೂ, ಗುಜರಾತ್ 53 ರೂ, ದೆಹಲಿ 55, ಮಹಾರಾಷ್ಟ್ರ 52 ಹಾಗೂ ತೆಲಂಗಾಣದಲ್ಲಿ 58 ರೂಪಾಯಿಗಳಿದ್ದು, ನಮ್ಮ ರಾಜ್ಯದಲ್ಲಿ ಕೇವಲ 46 ರೂಪಾಯಿ ಇದೆ ಎಂದು ಸಿದ್ದರಾಮಯ್ಯ ಎಕ್ಸ್ ಖಾತೆಯ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Post a Comment