IR : ಮಹಾರಾಷ್ಟ್ರ ಮಾಜಿ ಸಿಎಂ ಏಕನಾಥ್ ಶಿಂಧೆ ಬಗ್ಗೆ ಅಲ್ಲಿನ ಹಾಸ್ಯನಟ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಮಾಡಿದ ಅಪಾಹಾಸ್ಯ(ಆರೋಪ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿದ್ದು, ಶನಿವಾರ ಕಮ್ರಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ದೂರು ಜಲಗಾಂವ್ ನಗರದ ಮೇಯರ್ ಸಲ್ಲಿಸಿದ್ದರೆ, ಇನ್ನೆರಡು ದೂರುಗಳು ನಾಸಿಕ್‌ನ ಹೋಟೆಲ್ ಉದ್ಯಮಿ ಮತ್ತು ಉದ್ಯಮಿಯಿಂದ ಬಂದಿವೆ ಎಂದು ಮುಂಬೈ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪೊಲೀಸರು ಎರಡು ಬಾರಿ ವಿಚಾರಣೆಗೆ ಕರೆದಿದ್ದಾರೆ. ಆದರೆ, ಅವರು ಇನ್ನೂ ತನಿಖೆಗೆ ಹಾಜರಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಕುನಾಲ್ ಕಮ್ರಾ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ಸುಂದರ್ ಮೋಹನ್ ಷರತ್ತುಗಳೊಂದಿಗೆ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಇದರ ನಡುವೆ ಮತ್ತೆ ಮೂರು ಪ್ರಕರಣಗಳು ದಾಖಲಾಗಿದ್ದು, ಕಮ್ರಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ
: ಶಿವಸೇನಾ ನಾಯಕರು ನೀಡಿದ ದೂರಿನ ಮೇರೆಗೆ ಕುನಾಲ್ ಕಮ್ರಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ, ಸ್ಟ್ಯಾಂಡ್ಅಪ್ ಕಾರ್ಯಕ್ರಮದ ಸ್ಟೂಡಿಯೋವನ್ನು ಧ್ವಂಸಗೊಳಿಸಿದ್ದಕ್ಕಾಗಿ 40 ಜನರ ಶಿವಸೇನಾ ಕಾರ್ಯರ್ತರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಕಾಮಿಡಿಯನ್ ಕುನಾಲ್ ಕಮ್ರಾ ಹೇಳಿದ್ದೇನು..?
ಹಾಸ್ಯಮಯ ಮತ್ತು ತೀಕ್ಷಣವಾದ ಹೇಳಿಕೆಗಳಿಗೆ ಹೆಸರುವಾಸಿಯಾದ ಕುನಾಲ್ ಕಮ್ರಾ, ಇದೀಗ ತಮ್ಮ ಕಾರ್ಯಕ್ರಮವೊಂದರಲ್ಲಿ 'ಏಕನಾಥ್ ಶಿಂಧೆ ಬಿಜೆಪಿಯೊಂದಿಗೆ ಹೊಂದಣಿಕೆ ಮಾಡಿಕೊಂಡು ' ದೇಶದ್ರೋಹಿ' ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ' ಎಂದು ಹಾಸ್ಯ ಮಾಡಿರುವ ವಿಡಿಯೋದಿಂದ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೇ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.(ಏಜೆನ್ಸೀಸ್)

Post a Comment