BBMP Budget: ತೆರಿಗೆದಾರರಿಗೆ ಸಿಕ್ತು ಗುಡ್ ನ್ಯೂಸ್! ಮತ್ತೊಂದೆಡೆ ಬೆಂಗಳೂರಿಗೆ 'ಕಸದ' ಶಾಕ್​!


 ದು ಬಹುನಿರೀಕ್ಷಿತ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಮಂಡನೆಯಾಗಿದೆ. ಬಿಬಿಎಂಪಿಯಿಂದ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎರಡನೇ ಬಾರಿಗೆ ಬಜೆಟ್ ಮಂಡಿಸಾಗಿದೆ. ನಗರದ ಟೌನ್ ಹಾಲ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ (Harish Kumar) ಅವರು ಬಜೆಟ್ ಮಂಡಿಸಿದ್ರು.

ಪಾಲಿಕೆ ಇತಿಹಾಸದಲ್ಲೇ ಇದಿ ಅತ್ಯಂತ ಬೃಹತ್ ಗಾತ್ರದ ಬಜೆಟ್ ಇದಾಗಿದೆ. ಈ ಬಾರಿ 19,900 ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಈ ಬಜೆಟ್​ನಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾಗಿ ಬಜೆಟ್ ಮಂಡನೆಯಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

19,92,708 ಕೋಟಿ ಗಾತ್ರದ ಬಜೆಟ್

ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಿದ್ದು, ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಿದೆ. 19,92,708 ಕೋಟಿ ಗಾತ್ರದ ಬಜೆಟ್ ಗೆ ಆಡಳಿತಗಾರ ಉಮಾಶಂಕರ್ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಶೇಕಡಾ 62 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ.

ತೆರಿಗೆದಾರರಿಗೆ ಗುಡ್ ನ್ಯೂಸ್

ಬಜೆಟ್ ನಲ್ಲಿ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಾರಿ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಕೈ ಬಿಟ್ಟಿದೆ. 2025-26ನೇ ಸಾಲಿನಲ್ಲಿ ಬೆಂಗಳೂರು ಜನರಿಗೆ ಆಸ್ತಿ ತೆರಿಗೆ ಹೊರೆ ಇಲ್ಲ. ಆದ್ರೂ ಈ ಸಾಲಿನಲ್ಲಿ 5,700 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದು, ಈ ಬಾರಿ ಬಿಬಿಎಂಪಿ 4,900 ಕೋಟಿ ಆದಾಯಗಳಿಸಿದೆ.


ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ


ಆಸ್ತಿ ತೆರಿಗೆ ಹೊರೆ ಇಲ್ಲ. ಆದ್ರೆ ಕಸಕ್ಕೆ ಸೆಸ್ ವಸೂಲಿ ಮಾಡಲು ಪಾಲಿಕೆ ನಿರ್ಧರಿಸಿದೆ. ಆಸ್ತಿ ತೆರಿಗೆಯಲ್ಲೇ ಕಸದ ಸೆಸ್ ಸಂಗ್ರಹ ಮಾಡಲಿದ್ದಾರೆ. ಕಸದ ಸೆಸ್ ನಿಂದ ವಾರ್ಷಿಕವಾಗಿ 618 ಕೋಟಿ ಆದಾಯ ಹೆಚ್ಚಳವಾಗಿದೆ. ಇದೇ ಕಾರಣಕ್ಕೆ ಆಸ್ತಿ ತೆರಿಗೆ ಹೆಚ್ಚಳ ಬಿಬಿಎಂಪಿ ಕೈ ಬಿಟ್ಟಿದೆ.


'ಬ್ರ್ಯಾಂಡ್ ಬೆಂಗಳೂರಿಗೆ' ಪೂರಕ ಬಜೆಟ್​!


ಡಿಸಿಎಂ ಡಿಕೆಶಿವಕುಮಾರ್ ಕನಸಿನ ಯೋಜನೆ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾದ ಬಿಬಿಎಂಪಿ ಬಜೆಟ್ ಮಂಡಿಸಿದೆ ಎನ್ನುವ ಮಾತು ಕೇಳಿ ಬಂದಿದೆ. ಬಿಬಿಎಂಪಿ ಬಜೆಟ್​ನ ಶೇಕಡಾ 65% ರಷ್ಟು ಹಣವನ್ನ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮೀಸಲಿರಿಸಿದ್ದಾರೆ. ಪಾಲಿಕೆ ಬಜೆಟ್ ಅನ್ವಯ ಬರೋಬ್ಬರಿ 12,952 ಕೋಟಿ ಮೊತ್ತ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಸೀಮಿತವಾಗಿದೆ.


4,900 ಕೋಟಿ ಆಸ್ತಿ ತೆರಿಗೆ ಸಂಗ್ರಹ


ಈ ಬಾರಿ 4,900 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ ಹೆಗ್ಗಳಿಕೆ ಬಿಬಿಎಂಪಿ ಪಾತ್ರವಾಗಿದೆ. ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ತೃತೀಯ ಲಿಂಗಿ ಸಮುದಾಯಕ್ಕೆ ಎಲೆಕ್ಟ್ರಾನಿಕ್ ವಾಹನ ಖರೀದಿಗೆ ಪಾಲಿಕೆ ಧನಸಹಾಯ ನೀಡಲಿದ್ದು. ಇದಕ್ಕೆ ಪಾಲಿಕೆ ಬಜೆಟ್ ನಲ್ಲಿ 10 ಕೋಟಿ ಮೀಸಲಿಸಿದೆ.


ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ


ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ, ಸುರಂಗ ಮಾರ್ಗಕ್ಕೆ 42 ಸಾವಿರ ಕೋಟಿ. ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಡ ಸಪರೇಟರ್ ಗಳ ನಿರ್ಮಾಣಕ್ಕೆ 13,200 ಕೋಟಿ ಹಾಗೂ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ 9 ಸಾವಿರ ಕೋಟಿ, ರಾಜಕಾಲುವೆ ಹಾಗೂ ಸಂಪರ್ಕ ರಸ್ತೆಗೆ 3 ಸಾವಿರ ಕೋಟಿ, ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ 6 ಸಾವಿರ ಕೋಟಿ, ಸ್ಕೈಡೆಕ್ ನಿರ್ಮಾಣ 400 ಕೋಟಿ ಮೀಸಲಿಡಲಾಗಿದೆ.


ತಾಯಿ, ಮಗು ಆರೈಕೆ ಹಾಗೂ ರಕ್ಷಣೆಗೆ ಬಿಬಿಎಂಪಿಯಿಂದ Save Mom ಯೋಜನೆ ಜಾರಿ. ಪ್ರಾಯೋಗಿಕವಾಗಿ ಎರಡು ಆಸ್ಪತ್ರೆಯಲ್ಲಿ 200 ತಾಯಂದಿರ ಆರೈಕೆ, 24*7 ಗರ್ಭಿಣಿ ಆರೈಕೆಗೆ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ‌ ವ್ಯವಸ್ಥೆ ಬೀದಿ ನಾಯಿಗಳ ಆರೈಕೆ ಹಾಗೂ ಚಿಕಿತ್ಸೆಗೆ ಈ ಸಾಲಿನಲ್ಲಿ 60 ಕೋಟಿ ಮೀಸಲಿಡಲಾಗಿದೆ.


16 ಶಾಲೆಗಳ ಕಟ್ಟಡ ಮರು ನಿರ್ಮಾಣ


ನಗರದ ಆಯ್ದ 16 ಶಾಲೆಗಳ ಕಟ್ಟಡ ಮರು ನಿರ್ಮಾಣ 60 ಶಾಲೆಗಳ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂ ಆಗಿ ಪರಿವರ್ತನೆ ಮಾಡಲಿದ್ದಾರೆ. ಮಳೆ ಅವಾಂತರ ತಡೆಯಲು ರಾಜಕಾಲುವೆ, ಕೆರೆ ಬದಿಯ ಪ್ರದೇಶದಲ್ಲಿ ನೆರೆ ತಡೆಗೆ ಕ್ರಮ. ಈ ಕಾಮಗಾರಿಗೆ 247 ಕೋಟಿ ಮೀಸಲು. ಬೆಂಗಳೂರಿನ ಸೌಂದರ್ಯೀಕರಣಕ್ಕೆ ಕೋಟಿ ಕೋಟಿ ಮೀಸಲಿಡಲಾಗಿದೆ.


ಆಲಂಕಾರಿಕ ದೀಪಗಳ ಅಳವಡಿಕೆಗೆ 50 ಕೋಟಿ, ಜಂಕ್ಷನ್ ಸುಧಾರಣೆಗೆ 25 ಕೋಟಿ, ಸ್ಕೈಡೆಕ್ ನಿರ್ಮಾಣಕ್ಕೆ ಆರಂಭಿಕವಾಗಿ 50 ಕೋಟಿ. ಸಾರ್ವಜನಿಕ ಸ್ಥಳಗಳ ಸೌಂದರ್ಯೀಕರಣಕ್ಕೆ 25 ಕೋಟಿ ಮೀಸಲಿಡಲಾಗಿದೆ. ಬೆಂಗಳೂರನ್ನು ಅಂದಗಾಣಿಸಲು ಬರೋಬ್ಬರಿ 200 ಕೋಟಿ ನಿಗದಿ ಮಾಡಿದ್ದಾರೆ. 2025-26ನೇ ಸಾಲಿನಲ್ಲಿ ಬೆಂಗಳೂರಿನ ಕಸ ತ್ಯಾಜ್ಯ ನಿರ್ವಹಣೆಗೆ 1,400 ಕೋಟಿ ಮೀಸಲಿಟ್ಟಿದೆ.

Post a Comment

Previous Post Next Post