ಮಯನ್ಮಾರ್, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲಿ ಭೂಕಂಪನ ಸಂಭವಿಸಿ ದುರಂತಗಳು ನಡೆಯುತ್ತಿದ್ದಂತೆ ಇತ್ತ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಬಲವಾದ ಕಂಪನದ ಅನುಭವವಾಗಿದೆ.
ಮ್ಯಾನ್ಮಾರ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.2 ರಿಂದ 7.7 ರ ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಮ್ಯಾನ್ಮಾರ್‌ನ ಸಾಗೈಂಗ್ ಬಳಿ ಬೆಳಿಗ್ಗೆ 11:50 ಕ್ಕೆ (IST) 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಭೂಕಂಪದ ಪರಿಣಾಮವು ಸುಮಾರು 900 ಕಿಲೋಮೀಟರ್ ದೂರದಲ್ಲಿರುವ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಹಾಗೂ ದೆಹಲಿ-ಎನ್‌ಸಿಆರ್, ಈಶಾನ್ಯ ರಾಜ್ಯಗಳು ಮತ್ತು ಭಾರತದ ಉತ್ತರ ಭಾರತದ ಹಲವು ಭಾಗಗಳಲ್ಲಿ ಬಲವಾಗಿ ಅನುಭವಿಸಿತು. ಇನ್ನು ಸತತ ಎರಡು ಬಾರಿ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ಈ ಪರಿಣಾಮವಾಗಿ ಮಾಂಡಲೆ ಬಳಿಯ ಪ್ರಾಚೀನ ಆವಾ ಸೇತುವೆ ಕುಸಿದು ಬಿದ್ದಿದೆ. ಅನೇಕ ಕಟ್ಟಡಗಳು ನಾಶವಾಗಿವೆ, ಅಲ್ಲದೇ ಮಸೀದಿಯೊಂದು ಕುಸಿದು ಬಿದ್ದು ಬರೋಬ್ಬರಿ 20ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅತ್ತ ಥೈಲ್ಯಾಂಡ್, ಮಯನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ ಭಾರತದ ಕೆಲವು ಭಾಗಗಳಲ್ಲೂ ಗೋಚರಿಸಿದೆ.
ಮಯನ್ಮಾರ್, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲಿ ಭೂಕಂಪನ ಸಂಭವಿಸಿ ದುರಂತಗಳು ನಡೆಯುತ್ತಿದ್ದಂತೆ ಇತ್ತ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಬಲವಾದ ಕಂಪನದ ಅನುಭವವಾಗಿದೆ. ಕಂಪನದಿಂದ ಸದ್ಯ ರಾಜಧಾನಿ ದೆಹಲಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಈ ಭೂಕಂಪದ ಪರಿಣಾಮಗಳು ಈಶಾನ್ಯ ರಾಜ್ಯಗಳಾದ ಮೇಘಾಲಯ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ಗಳಿಗೂ ತಟ್ಟಿದೆ.

Post a Comment