Earthquake: ಮ್ಯಾನ್ಮಾರ್‌ನಲ್ಲಿ ಏಕಕಾಲದಲ್ಲಿ 2 ಭೂಕಂಪನ! ಕಟ್ಟಡಗಳು ಅಲ್ಲೋಲ ಕಲ್ಲೋಲ! ಪ್ರಾಣಭೀತಿಯಿಂದ ಓಡಿದ ಜನರು


 ಬ್ಯಾಂಕಾಕ್‌ನ ದೊಡ್ಡ ಪ್ರದೇಶವು ಕೋಟ್ಯಂತರ ಜನರಿಗೆ ನೆಲೆಯಾಗಿದೆ, ಅವರಲ್ಲಿ ಹಲವರು ಬಹುಮಹಡಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇದೀಗ ಈ ಭೂಕಂಪನದಿಂದ ಅವರೆಲ್ಲರೂ ಪ್ರಾಣಭೀತಿಯಿಂದ ಇರಬೇಕಾದ ಪರಿಸ್ಥಿತಿ...ಇನ್ನಷ್ಟು ಸುದ್ದಿ

ನವದೆಹಲಿ: ಮ್ಯಾನ್ಮಾರ್‌ನಲ್ಲಿ 7.2 ತೀವ್ರತೆಯ ಭಾರಿ ಭೂಕಂಪ (Bangkok Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಭಾರೀ ಭೂಕಂಪನದ ಪರಿಣಾಮ ನೆರೆ ರಾಷ್ಟ್ರಗಳಲ್ಲಿಯೂ ಕಾಣಿಸಿಕೊಂಡಿದೆ.

ಶುಕ್ರವಾರ ಮ್ಯಾನ್ಮಾರ್‌ನಲ್ಲಿ 15 ನಿಮಿಷದ ಅಂತರದಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು, ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಭೂಕಂಪನದ ತೀವ್ರತೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಮ್ಯಾನ್ಮಾರ್‌ನ ಮಂಡಲೆಯಲ್ಲಿರುವ ಐಕಾನಿಕ್ ಅವಾ ಸೇತುವೆ ಇರಾವಡ್ಡಿ ನದಿಗೆ ಕುಸಿದಿದೆ ಮತ್ತು ಬೃಹತ್ ಭೂಕಂಪಗಳಿಂದಾಗಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ವರದಿಯಾಗಿದೆ. ಈ ಭೂಕಂಪನದ ಕೇಂದ್ರಬಿಂದು ಸಾಗೈಂಗ್ ಬಳಿ ಇದೆ ಎಂದು ತಿಳೊದು ಬಂದಿದೆ.

Post a Comment

Previous Post Next Post