ಬೇಸಿಗೆಯಲ್ಲಿ ಗಟ ಗಟ ನೀರು ಕುಡಿಯುವ ಮುನ್ನ ಎಚ್ಚರ ಎಚ್ಚರ.. ಕುಡಿಯೋ ನೀರಿನಲ್ಲೂ ಹಾನಿಕಾರಕ ಅಂಶ ಪತ್ತೆ


 ಗಳೂರು ಮಾರ್ಚ್ 28: ಪನ್ನೀರ್, ಗೋಬಿ, ಕಬಾಬ್, ಕಲ್ಲಂಗಡಿ ಬಳಿಕ ಈಗ ಕುಡಿಯುವ ನೀರಿಗೂ ಕಂಟಕ ಶುರುವಾಗಿದೆ. ಬೇಸಿಗೆ ಶುರುವಾಯ್ತು ನೀರಿನ ಸಮಸ್ಯೆ ಸಾಮಾನ್ಯ ಬಿಡಿ ಅಂತ ಮುಂದೆ ಓದದೆ ಸುಮ್ಮನಾಗಬೇಡಿ. ಇದು ಕುಡಿಯೋ ನೀರಿನ ಅಭಾವದ ಸಮಸ್ಯೆ ಅಲ್ಲ ಬದಲಿಗೆ ಮಿನರಲ್ ವಾಟರ್ ಬಾಟಲಿಯಲ್ಲಿನ ನೀರಿನ ಗುಣಮಟ್ಟದ ಸಮಸ್ಯೆ.

 ಹೌದು.. ಮಿನರಲ್ ವಾಟರ್ ಬಾಟಲಿಯಲ್ಲಿ ಸಿಗುವ ನೀರಿನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಈ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಎಚ್ಚರಿಕೆ ನೀಡಿದೆ. ತುಂಬಾ ದಿನಗಳವರೆಗೆ ಶೇಖರಣೆ ಮಾಡಿದ, ಅವಧಿ ಮುಗಿದ ಮತ್ತು ಕೆಲ ನೀರಿನ ಬಾಟಲಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ ಮಾಡಲಾಗಿದೆ.

[ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ನೀರು ಬೇಕೇಬೇಕು. ಆದರೆ ಈ ನೀರು ಕುಡಿಯುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎನ್ನುವ ವರದಿ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗುವ ಮಿನರಲ್ ವಾಟರ್ ಬಾಟಲ್ ಯಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ವರದಿಯಿಂದ ತಿಳಿದು ಬಂದಿದೆ.


ಮಿನರಲ್ ವಾಟರ್ ಬಾಟಲಿಯಲ್ಲಿ ಹಾನಿಕಾರಕ ಅಂಶ


ಇತ್ತೀಚೆಗೆ ಬೆಂಗಳೂರಿನ ಹಲವೆಡೆ ದಾಳಿ ಮಾಡಿದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಬೇಕರಿ ಹಾಗೂ ಇನ್ನಿತರ ಅಂಗಡಿಗಳಲ್ಲಿ ಸಿಗುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಸುಮಾರು 160 ಮಿನರಲ್ ವಾಟರ್ ಬಾಟಲ್‌ಗಳ ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಲಾಗಿತ್ತು.

Post a Comment

Previous Post Next Post