Rahul Gandhi: ಬದಲಾಗುತ್ತಾ INDIA ಬಣದ ನಾಯಕತ್ವ?​ ಈ ವರ್ಷವೂ ರಾಹುಲ್​ ಗಾಂಧಿಗೆ ಇದೆ ಅಗ್ನಿ ಪರೀಕ್ಷೆ!


 ಕಾಂಗ್ರೆಸ್ ಮುಖ್ಯಸ್ಥ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
 ಕುಸಿಯುತ್ತಿರುವ ಇಂಡಿಯಾ ಬಣದ ಒಗ್ಗಟ್ಟು ಹಾಗೂ ಅದರ ನಾಯಕತ್ವದ ಕುರಿತು ಎದ್ದಿರುವ ಪ್ರಶ್ನೆಗಳು ಮತ್ತು ರಾಹುಲ್ ಗಾಂಧಿಯವರ ಸಾಮರ್ಥ್ಯದ ಮೇಲೆ ಇಂಡಿಯಾ ಬಣದ ನಾಯಕರಲ್ಲಿ ಮೂಡಿರುವ ಅನುಮಾನಗಳು ಕಾಂಗ್ರೆಸ್​ ಪಕ್ಷಕ್ಕೆ ತಲೆ ನೋವಾಗಿದ್ದು, ಇದನ್ನು ಕಾಂಗ್ರೆಸ್​ ಹೇಗೆ ನಿಭಾಯಿಸುತ್ತದೆ ಎನ್ನುವದು ದೊಡ್ಡ ಪ್ರಶ್ನೆಯಾಗಿದೆ.
ನವದೆಹಲಿ: ಯಾವುದು ಚೆನ್ನಾಗಿ ಶುರುವಾಗುತ್ತದೆಯೋ ಕೊನೆಗೆ ಅದು ಚೆನ್ನಾಗಿ ಕೊನೆಗೊಳ್ಳದಿರಬಹುದು. ಆದರೆ ಅದು ಸರಿಯಾಗಿದ್ದರೆ ಒಂದಲ್ಲಾ ಒಂದು ದಿನ ಯಶಸ್ವಿಯಾಗದೆ ಇರಬಹುದು ಅಕಸ್ಮಾತ್ ಗುರಿ ಸರಿಯಲ್ಲದಿದ್ದರೆ ಎಷ್ಟೇ ಪ್ರಯತ್ನಿಸಿದರು ಸಹ ತಮ್ಮ ಪ್ರಯತ್ನದಲ್ಲಿ ಸಫಲರಾಗಲು ಸಾಧ್ಯವಿಲ್ಲ. ಅದಕ್ಕೆ ಉತ್ತಮ ಉದಾಹರಣೆ 2024ರಲ್ಲಿ ಕಾಂಗ್ರೆಸ್​ ಪಕ್ಷ ಹಾಗೂ ಅದರ ಚಟುವಟಿಕೆಗಳು! ಕಳೆದ ಲೋಕಸಭಾ ಚುನಾವಣಾಯಲ್ಲಿ (Lok Sabha Elections) ಉತ್ತಮ ಸಾಧನೆಯ ಹೊರತು, ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಹೊರಗಿಡುವಲ್ಲಿ ವಿಫಲವಾದ ನಂತರ, ಕಾಂಗ್ರೆಸ್ (Congress) ತನ್ನ ಭರವಸೆ ಹೆಚ್ಚಿರುವ ಹರಿಯಾಣ (Haryana) ಮತ್ತು ಮಹಾರಾಷ್ಟ್ರ (Maharashtra) ರಾಜ್ಯಗಳಲ್ಲಿಯೂ ಸೋತಿದೆ. ಆದ್ದರಿಂದ ಚುನಾವಣೆಯಲ್ಲಿನ ಸೋಲಿನ ಪಾಠಗಳು ಪ್ರಸಕ್ತ ನೂತನ ವರ್ಷದಲ್ಲಿನ ಕಾಂಗ್ರೆಸ್ ಚಟುವಟಿಕೆಯ ಮೇಲೆ ಯಾವ ರೀತಿ ಪರಿಣಾಮ ಭೀರುತ್ತದೆ ಎನ್ನುವದರ ಮೇಲೆ, 2025ರಲ್ಲಿ ಕಾಂಗ್ರೆಸ್ ಯಶಸ್ಸು ನಿರ್ಧಾರವಾಗುತ್ತದೆ. ಯಾಕೆಂದರೆ ಕುಸಿಯುತ್ತಿರುವ ಇಂಡಿಯಾ ಬಣದ ಒಗ್ಗಟ್ಟು ಹಾಗೂ ಅದರ ನಾಯಕತ್ವದ ಕುರಿತು ಎದ್ದಿರುವ ಪ್ರಶ್ನೆಗಳು ಮತ್ತು ರಾಹುಲ್ ಗಾಂಧಿಯವರ (Rahul Gandhi) ಸಾಮರ್ಥ್ಯದ ಮೇಲೆ ಇಂಡಿಯಾ ಬಣದ (India Bana) ನಾಯಕರಲ್ಲಿ ಮೂಡಿರುವ ಅನುಮಾನಗಳು ಕಾಂಗ್ರೆಸ್​ ಪಕ್ಷಕ್ಕೆ ತಲೆ ನೋವಾಗಿದ್ದು, ಇದನ್ನು ಕಾಂಗ್ರೆಸ್​ ಹೇಗೆ ನಿಭಾಯಿಸುತ್ತದೆ ಎನ್ನುವದರ ಮೇಲೆ ನಿಂತಿದೆ.
 ಲೋಕಸಭೆ ಚುನಾವಣೆಯಿಂದ ರಾಹುಲ್ ಗಾಂಧಿ ಅವರ ಇಮೇಜ್ ಹೆಚ್ಚಳ
ಯಶಸ್ವಿ ಭಾರತ್ ಜೋಡೋ ಯಾತ್ರೆಗಳು ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿಯವರ ಇಮೇಜ್​ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಭೀರಿದೆ. ಯಾತ್ರಗಳಿಗೂ ಮುನ್ನ ರಾಹುಲ್​ ಗಾಂಧಿಯವರ ನಾಯಕತ್ವದ ಕುರಿತು ಹಲವು ಪ್ರಶ್ನೆಗಳಿದ್ದವು! ಜೊತೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅಥವಾ ಅರವಿಂದ್ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿಯಂತಹ ಅನೇಕ ಘಟಾನುಘಟಿ ನಾಯಕರಿಗೆ ಸರಿಸಾಟಿಯಾಗಬಲ್ಲರಾ ಎಂಬ ಪ್ರಶ್ನೆಗಳು ಮೂಡಿದ್ದವು. ಕೆಲವು ಸಂದರ್ಭದಲ್ಲಿ ಅವರನ್ನು ವೈಟ್​ ಕಾಲರ್ ರಾಜಕಾರಣಿ ಎಂದು ಕರೆಯಲಾಗುತ್ತಿತ್ತು. ಆದರೆ ಈ ಯಾತ್ರಗಳು ಅವರನ್ನು ಬಿಜೆಪಿಯ ನರೇಂದ್ರ ಮೋದಿ ಅವರಿಗೆ ಪರ್ಯಾಯ ಶಕ್ತಿ ಎಂದು ಬಿಂಬಿಸಿದವು. ಆದರೆ ಅವರ ಕೆಲವು ನಿರ್ಣಯಗಳು ಅವರ ನಾಯಕತ್ವದ ಮೇಲೆ ಮತ್ತೊಮ್ಮೆ ಪ್ರಶ್ನೆ ಎತ್ತುತ್ತಿವೆ!
 ಯಾಕೆಂದರೆ ನಂತರ ರಾಹುಲ್ ಗಾಂಧಿ ಅವರ ಆಕ್ರಮಣಶೀಲತೆ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ನಿರೂಪಣೆಯಿಂದ ಬೆಂಬಲಿತವಾಗಿತ್ತು. ಮತ್ತೆ ಅದು ಅವರತ್ತ ಜನಾಕರ್ಷಣೆಯನ್ನು ಪಡೆದು, ಲೋಕಸಭೆ ಚುನಾವಣೆಗೆ ವೇದಿಕೆಯನ್ನು ಸಿದ್ಧಪಡಿಸಿತು. ಇದರ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತವನ್ನು ಪಡೆಯದಿರುವುದು ಆಶ್ಚರ್ಯಕರ ಸಂಗತಿಯೇನಲ್ಲ! ಇದರ ನಡುವೆ ಬಿಜೆಪಿಯ ನಷ್ಟವನ್ನು ಲೆಕ್ಕ ಹಾಕಿದ ಪ್ರತಿಪಕ್ಷಗಳು ರಾಹುಲ್​ ಅವರನ್ನು ಪ್ರಧಾನಿಯಾಗಲು ಯಾವುದೇ ಜನಾದೇಶವಿಲ್ಲದವರು ಎಂದು ತಳ್ಳಿಹಾಕಿದವು.
ಎರಡೂ ರಾಜ್ಯಗಳ ಚುನಾವಣೆಯಲ್ಲಿ: ಊಟದೊಂದಿಗೆ ಉಪ್ಪಿನಕಾಯಿಯಂತ ಪರಿಸ್ಥಿತಿ

ಮತ್ತೊಂದೆಡೆ ಲೋಕಸಭಾ ಚುನಾವಣೆಯ ನಂತರ ಆತ್ಮ ವಿಶ್ವಾಸ ಮತ್ತು ನಿರೂಪಣೆಯೊಂದಿಗೆ ಶಸ್ತ್ರಸಜ್ಜಿತವಾದ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹರಿಯಾಣ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸವ್ಯಕ್ತ ಪಡಿಸಿತ್ತು, ಆದರೆ ಆಘಾತಕಾರಿಯಾಗಿ, ಅಲ್ಲೂ ಅವರು ಅನಿರೀಕ್ಷಿತ ಸೋಲು ಅನಿಭವಿಸಿದರು. ಇದು ಮತ್ತೊಮ್ಮೆ ರಾಹುಲ್ ಗಾಂಧಿಯವರತ್ತ ಜನರ ಮತಗಳನ್ನು ಸೆಳೆಯುವ ಸಾಮರ್ಥ್ಯದ ಮೇಲೆ ಪ್ರಶ್ನೆಗಳನ್ನು ಎತ್ತಿದೆ. ಯಾಕೆಂದರೆ ವಿಶ್ವಾಸ ನಡುವೆಯೂ ಅವರು ಪಕ್ಷದೊಳಗಿನ ಭಿನ್ನಮತವನ್ನು ನಿಭಾಯಿಸಲಾಗಲಿಲ್ಲ.   ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಡುತ್ತಿದ್ದ ಕಾಂಗ್ರೆಸ್ ನಾಯಕರು: ಹೂಡಾ ವರ್ಸಸ್ ಸೆಲ್ಜಾ ಫೈಟ್, ಹಾಗೂ ಬಿಜೆಪಿಯ ಆಕ್ರಮಣಕಾರಿ ರಾಜಕೀಯದಾಟಗಳು ರಾಹುಲ್​ ಅವರನ್ನು ಸೋಲಿಸಿದವು.
ಮತ್ತೊಂದೆಡೆ ಮಹಾರಾಷ್ಟ್ರದಲ್ಲಿಯೂ ರಾಹುಲ್ ಗಾಂಧಿಯವರ ನಾಯಕತ್ವ ವರ್ಕೌಟ್​ ಹಾಗಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗಿಂತ ಹೆಚ್ಚಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದ ರಾಹುಲ್​ ಅವರು ತಮ್ಮ ವಿಫಲವಾದ ತಂತ್ರಗಳಿಂದ ಮಹಾರಾಷ್ಟ್ರದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು. ಇದರೊಂದಿಗೆ ಜಾರ್ಖಂಡ್​ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್​ನ ಮೈತ್ರಿಗಳೇ ಅಧಿಕಾರಕ್ಕೆ ಬಂದರೂ ಸಹ ಗೆಲುವಿನ ಕ್ರೇಡಿಟ್​ ಸ್ಥಳೀಯ ನಾಯಕರಿಗೆ ಸಂದಿತೇ ಹೊರತು ರಾಹುಲ್​ಗೆ ಆದರ ಗಾಳಿಯೂ ಸೋಕಿಲಿಲ್ಲ.
ರಾಹುಲ್ ಗಾಂಧಿ ಆದ:ಪತನ

ಎರಡೂ ರಾಜ್ಯಗಳ ಫಲಿತಾಂಶಗಳು ಲೋಕಸಭೆಯ ವಿರೋಧ ಪಕ್ಷದ ನಾಯಕನ ಇಮೇಜ್ ಅನ್ನು ಕೆಡಿಸಿತು ಎನ್ನಬಹುದು! ಇದರ ಪರಿಣಾಮ ಈಗ ಇಂಡಿ ಮೈತ್ರಿಕೂಟದಲ್ಲಿಯೇ ರಾಹುಲ್​ ನಾಯಕತ್ವದ ವಿರುದ್ದ ಪರೊಕ್ಷವಾಗಿ ಅಪಸ್ವರಗಳು ಕೇಳಲಾರಂಭಿಸಿವೆ. ನಾಯಕತ್ವದಿಂದ ರಾಹುಲ್​ ಬದಲು ಮಮತಾ ಅವರೇ ಒಕ್ಕೂಟದ ನಾಯಕತ್ವವನ್ನು ಮುನ್ನೆಡಸಲು ಸೂಕ್ತವೆಂದು ಶರದ್​​ ಪವಾರ್​​, ಲಾಲು ಪ್ರಸಾದ್​​ ಯಾದವ್ ಹಾಗೂ ಅಖಿಲೇಶ್ ಯಾದವ್​ ಹೇಳುತ್ತಿದ್ದರೆ ಮತ್ತೊಂದೆಡೆ ಮೈತ್ರಿಕೂಟದಿಂದ ಕಾಂಗ್ರೆಸ್​ ಪಕ್ಷವನ್ನೇ ಹೊರಗಿಡ ಬೇಕೆಂದು ಅಪ್​ ಆಗ್ರಹಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಅವರು ಖರ್ಗೆ ನಂತರ ಮೈತ್ರಿಕೂಟದ ಸಂಚಾಲಕರಾಗಿ ಮಾಡಬೇಕೆಂಬ ಕಾಂಗ್ರೆಸ್​ ಪ್ರಯತ್ನ ಸಿದ್ದಿಸುವುದೆ ಎನ್ನುವುದು ಎಲ್ಲರನ್ನು ಕಾಡುತ್ತಿದೆ. ಆದ್ದರಿಂದ ಕಾಂಗ್ರೆಸ್​ ಈ ಸಮಸ್ಯೆಗಳನ್ನು ವೇಗವಾಗಿ ಇತ್ಯರ್ಥ ಪಡಿಸಬೇಕಾಗಿದೆ.
ಆದ್ದರಿಂದ ಮುಂಬರುವ ದೆಹಲಿ ಹಾಗೂ ಬಿಹಾರ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಪಕ್ಷಕ್ಕೆ ಆದರಲ್ಲೂ ರಾಹುಲ್​ ನಾಯಕತ್ವಕ್ಕೆ ಅತಿ ದೊಡ್ಡ ಅಗ್ನಿಪರಿಕ್ಷೇಯಾಗಿದೆ. ಯಾಕೆಂದರೆ ಈಗಾಗಲೆ ದೆಹಲಿಯಲ್ಲಿ ಕಾಂಗ್ರೆಸ್​ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿಯೂ ಕಾಂಗ್ರೆಸ್​​ಗಿಂತ ಅದರ ಮೈತ್ರಿ ಪಕ್ಷ ಆರ್​ಜೆಡಿ ನಡೆ ಮೇಲೆ ಚುನಾವಣೆ ನಡೆಯುತ್ತದೆ. ಅದು ಕೊಟ್ಟಷ್ಟು ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್​ ನಿಲ್ಲಬೇಕು! ಇಂತಹ ಸಂದರ್ಭದಲ್ಲಿ ರಾಹುಲ್​ ತಮ್ಮ ನಾಯಕತ್ವವನ್ನು ಸಾಭೀತು ಪಡಿಸಬೇಕಾದ ಅವಶ್ಯಕತೆ ಇದೆ.

Post a Comment

Previous Post Next Post