MUDA Case: ‘ಸತ್ಯ ಹೇಳಿದ್ದೀನಿ’; ಲೋಕಾಯುಕ್ತ ವಿಚಾರಣೆ ಬಳಿಕ ಸಿಎಂ ಫಸ್ಟ್ ರಿಯಾಕ್ಷನ್!


 ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರೇ ತನಿಖೆ ಮಾಡಿ ಅಂತ ಕೊಟ್ಟಿದ್ದಾರೆ, ಆದರೆ ಬಿಜೆಪಿ ಅವುರ ಗೋ ಬ್ಯಾಕ್ ಸಿದ್ದರಾಮಯ್ಯ ಅಂತ ಮಾಡ್ತಿದ್ದಾರೆ. ಇದರ ಅರ್ಥವೇನು? ಅಂದ್ರೆ ಅವರಿಗೆ ತನಿಖೆ ನಡೆಯುವುದು ಇಷ್ಟ ಇಲ್ಲ ಅಂತನಾ? ಹಾಗಾದರೆ ಇದು ಸುಳ್ಳು ಆರೋಪ ಅಂತ ಆಗುತ್ತೆ ಅಲ್ವಾ? ಎಂದು ಸಿಎಂ ಹೇಳಿದ್ದಾರೆ.

 ಬೆಂಗಳೂರು: ಮುಡಾ ಪ್ರಕರಣದಲ್ಲಿ (MUDA Case) ಸಿಎಂ ವಿಚಾರಣೆ ಅಂತ್ಯವಾಗಿದ್ದು, ಸುಮಾರು 2 ಗಂಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇಳಿದ 72 ಪ್ರಶ್ನೆಗೆ ಸಿಎಂ (CM Siddaramaiah) ಉತ್ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೆ ವಿಚಾರಣೆಗೆ ಕರೆದಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತ ವಿಚಾರಣೆ ಎದುರಿಸಿದ್ದೇನೆ. ಲೋಕಾಯುಕ್ತರು ಮತ್ತೆ ವಿಚಾರಣೆಗೆ ಕರೆದಿಲ್ಲ, ಬಿಜೆಪಿವರು ಸುಳ್ಳು ಆರೋಪ ಮಾಡಿದ್ದಾರೆ. ಸಿಬಿಐ ಯಾರ ಕೈಲಿದೆ ಹೇಳಿ ನೋಡೋಣ. ಬಿಜೆಪಿಯವರು ಯಾವ ಕೇಸನ್ನ ಸಿಬಿಐಗೆ ಕೊಟ್ಟಿದ್ದಾರೆ? ಲೋಕಾಯುಕ್ತರಿಂದ ವಿಚಾರಣೆ ನಡೆಯುತ್ತಿದೆ. ಲೋಕಾಯುಕ್ತ ಕೂಡಾ ಸ್ವತಂತ್ರ ಸಂಸ್ಥೆ, ಆದರೆ ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸುಳ್ಳು ಆರೋಪ ಮಾಡಿದ್ದಾರೆ, ಎದುರಿಸುತ್ತೇನೆ. ನನ್ನ ಮೇಲೆ ಕಪ್ಪು ಮಸಿ ಇಲ್ಲ ಎಂದ ಹೇಳಿದ್ದಾರೆ.

ರಾಜ್ಯಪಾಲರೇ ತನಿಖೆ ಮಾಡಿ ಅಂತ ಕೊಟ್ಟಿದ್ದಾರೆ, ಆದರೆ ಬಿಜೆಪಿ ಅವುರ ಗೋ ಬ್ಯಾಕ್ ಸಿದ್ದರಾಮಯ್ಯ ಅಂತ ಮಾಡ್ತಿದ್ದಾರೆ. ಇದರ ಅರ್ಥವೇನು? ಅಂದ್ರೆ ಅವರಿಗೆ ತನಿಖೆ ನಡೆಯುವುದು ಇಷ್ಟ ಇಲ್ಲ ಅಂತನಾ? ಹಾಗಾದರೆ ಇದು ಸುಳ್ಳು ಆರೋಪ ಅಂತ ಆಗುತ್ತೆ ಅಲ್ವಾ? ಲೋಕಾಯುಕ್ತ ಹಾಗೂ ಸಿಬಿಐ ಕೂಡ ಸ್ವತಂತ್ರ್ಯ ಸಂಸ್ಥೆಗಳು ಅವುಗಳು ತನಿಖೆ ಮಾಡುತ್ತೀವೆ. ಲೋಕಾಯುಕ್ತ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ ಅಂದಾಗ ಬಿಜೆಪಿ ಅವರು ಸಿಬಿಐಗೆ ಕೊಟ್ಟಿದ್ದಾರಾ? ರಾಜ್ಯಪಾಲರು ಆದೇಶ ಏನಿದೆ? ಸಿಬಿಐನಿಂದ ತನಿಖೆ ಮಾಡಿ ಅಂತ ಹೇಳಿಲ್ಲ. ನಾವು ಹೈಕೋರ್ಟ್​ ನಲ್ಲಿ ಅರ್ಜಿ ಸಲ್ಲಿಕೆ ಹಾಗಿದ್ದರೆ ವಿಚಾರಣೆ ಎದುರಿಸುತ್ತೇವೆ ಎಂದು ಹೇಳಿದರು.

 14 ನಿವೇಶನಗಳ ಹಂಚಿಕೆಯಲ್ಲಿ ಎಲ್ಲವೂ ಕಾನೂನು ಪ್ರಕಾರ ನಡೆದಿದೆ, ಆದರೆ ಬಿಜೆಪಿ-ಜೆಡಿಎಸ್ ಅವರು ಇಲ್ಲದ ಆರೋಪ ಮಾಡಿದ್ದಾರೆ. ಸುಳ್ಳು ಆರೋಪ ಮಾಡಿದ್ದಾರೆ ಅಂತ ನಿವೇಶಗಳನ್ನು ನನ್ನ ಪತ್ನಿ ವಾಪಸ್ ಕೊಟ್ಟಿದ್ದಾರೆ. ನನ್ನ ಬಳಿ ಯಾವುದೇ ದಾಖಲಾತಿ ಇಲ್ಲ, ನನಗೂ ಇದಕ್ಕೂ ಸಂಬಂಧವೇ ಇಲ್ಲ. ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೂ ಕಪ್ಪು ಮಾಸಿ ಅಂತ ಹೇಳಲು ಆಗೋದಿಲ್ಲ ಎಂದು ತಿಳಿಸಿದರು.

ಬೆಳಗ್ಗೆ ವಿಚಾರಣೆ, ಮಧ್ಯಾಹ್ನ ಪ್ರಚಾರ; ಮೊದಲೇ ಫಿಕ್ಸ್?

ಮುಡಾ ವಿಚಾರಣೆಗೆ ಸಿಎಂ ಹಾಜರಾಗಿರುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, 40 ವರ್ಷದ ರಾಜಕಾರಣ ಜೀವನ ತೆರೆದ ಪುಸ್ತಕ ಅಂದ ಸಿದ್ದರಾಮಯ್ಯನವರು ಇವತ್ತು ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಿಗ್ಗೆ ವಿಚಾರಣೆ ಅಂತೆ. ಮಧ್ಯಾಹ್ನ ಪ್ರಚಾರ ಅಂತೆ. ಇವರೇ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ಹೋಗಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ? ಅಂತ ಲೇವಡಿ ಮಾಡಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ಚನ್ನಬಸಪ್ಪ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಾಯುಕ್ತ ವಿಚಾರಣೆಗೆ ಸಿಎಂ ಹಾಜರು ವಿಚಾರದ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕಾನೂನು ಪ್ರಕಾರ ತನಿಖೆ ಆಗಲಿ. ಸಿಎಂ ಎಲ್ಲೂ ಅಧಿಕಾರ ದುರುಪಯೋಗ ಮಾಡಿಲ್ಲ. ಸಿಎಂ ತಮ್ಮ ಸ್ವಾರ್ಥಕ್ಕೆ ಏನು ಮಾಡಿಕೊಂಡಿಲ್ಲ. ವಿಪಕ್ಷಗಳು ಸಿಎಂ ಹೆಸರಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಸಿಎಂರನ್ನ ಭ್ರಷ್ಟ ಅಂತ ಬಿಂಬಿಸಬೇಕು. ಅದು ಪೇಪರ್​ನಲ್ಲಿ ಯಾವಾಗಲೂ ಸುದ್ದಿ ಆಗಬೇಕು ಅಂತ ಷಡ್ಯಂತ್ರ ಮಾಡ್ತಿದ್ದಾರೆ. ದೇಶಕ್ಕೋಸ್ಕರ ಇಡಿ, ಐಟಿ ಕೆಲಸ ಮಾಡ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು ಇದೇ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಎಂಬಿ ಪಾಟೀಲ್ ಕೂಡ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Post a Comment

Previous Post Next Post