ಚಲುವರಾಯಸ್ವಾಮಿ
ಬಸ್ ಟಿಕೆಟ್ ದರ ಏರಿಕೆ ಮಾಡಿರುವ ಕುರಿತು ಜನರು ಹಾಗೂ ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕುತ್ತಿದೆ. ಈ ಕುರಿತು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು: ನಿನ್ನೆ (ಜನವರಿ 2) ನಡೆದ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ಎಲ್ಲಾ ಸರ್ಕಾರಿ ಬಸ್ ಟಿಕೆಟ್ (Govt Bus Ticket Price) ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ (BJP Protest) ನಡೆಸುತ್ತಿದೆ. ಜನರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಬಸ್ ದರ ಏರಿಕೆ ಮಾಡಿರುವ ಕುರಿತು ಸಚಿವ ಚಲುವರಾಯಸ್ವಾಮಿ (Minister Cheluvarayaswamy) ಪ್ರತಿಕ್ರಿಯೆ ನೀಡಿದ್ದಾರೆ.
ಒಗ್ಗಲಿಗರ ನಾಯಕರ ಸಭೆ ಕುರಿತು ಹೇಳಿಕೆ
ಹಳೇ ಮೈಸೂರು ಭಾಗದ ಒಕ್ಕಲಿಗ ಶಾಸಕರು ಹಾಗೂ ಮಾಜಿ ಶಾಸಕರ ಜೊತೆಗೆ ಲಂಚ್ ಹೆಸರಿನಲ್ಲಿ ಸಭೆ ನಡೆಸಿದ ಚಲುವರಾಯಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಎಸ್‌ಎಂ ಸಚಿವರ ಸಿಎಂ ಡಿನ್ನರ್ ಸಭೆ ವಿಚಾರವಾಗಿ ಮಂಡ್ಯದ ಶಾಸಕರು, ನಾಯಕರು ಸಭೆಯಲ್ಲಿ ಭಾಗಿಯಾಗಿದ್ದೆವು. ಎಸ್ ಎಂ ಕೃಷ್ಣರವರು ನಮ್ಮ ಹೆಮ್ಮೆ, ಅವರು ಇತ್ತೀಚೆಗೆ ಅಗಲಿದರು. ವಿಶ್ವಮಟ್ಟಕ್ಕೆ ರಾಜ್ಯವನ್ನು ಗುರುತಿವಂತೆ ಮಾಡಿದವರು. ಅವರ ನೆನಪಿಗೆ ಕಾರ್ಯಕ್ರಮ ಮಾಡ್ತೇವೆ, ಹಾಗಾಗಿ ಇದರ ಬಗ್ಗೆ ಸಭೆ ನಡೆಸಿದ್ದೇವೆ ಎಂದರು.
: ಮಟನ್ ದರ ಏರಿಕೆಯಾದ್ರೆ ತೆಗೆದುಕೊಳ್ಳಲ್ವಾ?
ಇನ್ನೂ ಬಸ್ ದರ ಏರಿಕೆಗೆ ಸಂಬಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾವು ಶಕ್ತಿ ಯೋಜನೆ ಕೊಟ್ಟಿದ್ದೇವೆ. ಶಕ್ತಿ ಯೋಜನೆಯಲ್ಲಿ ನಮಗೆ ಬರ್ಡನ್ ಅಂತಾರೆ, ಬಸ್ ರೇಟ್ ಹೆಚ್ಚಳ ಮಾಡಿ 10 ವರ್ಷ ಆಗಿದೆ. ಮಟನ್, ಬೇಳೆ ರೇಟ್ ಹೆಚ್ಚಾದ್ರೆ ತೆಗೆದುಕೊಳ್ತೀರ, ಬೇರೆಯದು ಹೆಚ್ಚಾದ್ರೂ ತೆಗೆದುಕೊಳ್ತೀರ ಆದ್ರೆ ಬಸ್ ಟಿಕೆಟ್ ತಗೊಳ್ಳೋಕೆ ಆಗಲ್ವಾ ಎಂಬಂತೆ ಮಾತನಾಡಿದರು. ಆಂಧ್ರ, ಕೇರಳ, ತಮಿಳುನಾಡಿನಲ್ಲಿ ಹೆಚ್ಚಿದೆ ಎಂದರು.
ಸಂಸ್ಥೆಗಳು ಸರಿಯಾಗಿ ನಡೆಯಬೇಕಲ್ವಾ?
ನಮ್ಮ ರಾಜ್ಯದಲ್ಲಿ 10-15 ವರ್ಷದಿಂದ ಪರಿಷ್ಕರಣೆ ಆಗಿಲ್ಲ, ಸೆವೆನ್ ಪೇ ಕಮೀಷನ್ ಆಗಿದೆ. ನೌಕರರಿಗೆ ವೇತನ ಹೆಚ್ಚಾಗಿದೆ. ಸಂಸ್ಥೆಗಳು ಚೆನ್ನಾಗಿ ನಡೆಯಬೇಕಲ್ವಾ? ಎರಡು ಮೂರು ವರ್ಷಕ್ಕೆ ಹೆಚ್ಚಳ ಮಾಡಬೇಕು ಇದರಿಂದ ಸಮಸ್ಯೆಯೇನಾಗಲ್ಲ, ಅಂಗವಿಕಲರು, ವಿದ್ಯಾರ್ಥಿಗಳಿಗೆ ಎಲ್ಲರಿಗೆ ಆಗಿದೆ. ಬೇರೆ ರಾಜ್ಯದನ್ನೂನೀವು ಹಾಕಿ. ಇಲ್ಲೇ ಹೆಚ್ಚು ಅಂತ ಯಾಕೆ ಹಾಕ್ತೀರ ಎಂದು ಮಾಧ್ಯಮದವರಿಗೇ ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು.

Post a Comment