Metro Price Hike: ಬಸ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಶಾಕ್! ಶೀಘ್ರವೇ ಮೆಟ್ರೋ ಪ್ರಯಾಣ ದರ ಏರಿಕೆ ಸಾಧ್ಯತೆ!


 ಮೆಟ್ರೋ ಪ್ರಯಾಣಿಕರಿಗೆ ಶಾಕ್‌!

ಬಸ್‌ ದರ ಬೆನ್ನಲ್ಲೇ ಇದಿಗ ಮೆಟ್ರೋ ಪ್ರಯಾಣಿಕರಿಗೂ ಮತ್ತೊಂದು ಶಾಕ್‌ ಎದುರಾಗಲಿದೆ. ಈ ಮೂಲಕ ಶೀಘ್ರದಲ್ಲಿಯೇ ಮೆಟ್ರೋ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ (Congress Govt) ಶಾಕ್ ನೀಡಿದ್ದು, ಬಿಎಂಟಿಸಿ (BMTC), ಕೆಎಸ್‌‌ಆರ್‌ಟಿಸಿ (KSRTC) ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ದರ ಹೆಚ್ಚಳ ಮಾಡಿದೆ. ಅಲ್ಲದೇ ಬೆಂಗಳೂರು ಜನರಿಗೆ ನೀರಿನ ವಿಷಯದಲ್ಲೂ ಶಾಕ್ ನೀಡಿದ್ದು, ಮುಂದಿನ ದಿನಗಳಲ್ಲಿ ನೀರಿನ ದರದಲ್ಲೂ ಹೆಚ್ಚಳವಾಗಬಹುದು ಎನ್ನಲಾಗಿದೆ. ಇದೂ ಕೂಡ ಜನವರಿಯಲ್ಲೇ ನಿರ್ಧಾರವಾಗಲಿದ್ದು, ಇದೀಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್‌ (Metro) ಎದುರಾಗಿದೆ.

ಮೆಟ್ರೋ ಪ್ರಯಾಣಿಕರಿಗೆ ಶಾಕ್!

ಬಸ್‌ ದರ ಬೆನ್ನಲ್ಲೇ ಇದಿಗ ಮೆಟ್ರೋ ಪ್ರಯಾಣಿಕರಿಗೂ ಮತ್ತೊಂದು ಶಾಕ್‌ ಎದುರಾಗಲಿದೆ. ಈ ಮೂಲಕ ಶೀಘ್ರದಲ್ಲಿಯೇ ಮೆಟ್ರೋ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ದರ ಪರಿಷ್ಕರಣೆ ಸಂಬಂಧ ಜನವರಿ 2ನೇ ವಾರದಲ್ಲಿ ಮೀಟಿಂಗ್ ನಡೆಯಲಿದ್ದು, ಈ ಬೋರ್ಡ್ ಮೀಟಿಂಗ್ ಬಳಿಕ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ?

ಇನ್ನು ಮೆಟ್ರೊ ಟಿಕೆಟ್ ದರ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ, ಎಷ್ಟು ಮಾಡ್ಬೇಕು ಎಂಬುದನ್ನು ಮುಂದಿನ ಮೀಟಿಂಗ್‌ನಲ್ಲಿ ಚರ್ಚಿಸಿ ನಿರ್ಧಾರವಾಗುತ್ತದೆ. ಕಳೆದ ತಿಂಗಳು ಸಾರ್ವಜನಿಕರ ಸಭೆ ಕರೆದು ದರ ಪರಿಷ್ಕರಣೆಯನ್ನು ನಡೆಸಲಾಗಿತ್ತು, ಈ ಬೆನ್ನಲೇ ಇದೀಗ ಸರ್ಕಾರ ಮೆಟ್ರೋ ಟಿಕೆಟ್‌ ದರವನ್ನೂ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ವರ್ಷದ ಆರಂಭದಲ್ಲೇ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! 

ರಾಜ್ಯದ ಜನರು ಬೆಲೆ ಏರಿಕೆಯಿಂದ (Price Hike) ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಬಿಎಂಟಿಸಿ (BMTC), ಕೆಎಸ್‌‌ಆರ್‌ಟಿಸಿ (KSRTC) ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಶಾಕಿಂಗ್ ಮಾಹಿತಿ ಸಿಕ್ಕಿದೆ. ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ಸಾರಿಗೆ ಬಸ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಕುರಿತು ಅಧಿಕೃತ ಆದೇಶ ಹೊರಬರಬೇಕಿದೆ.

ದರ ಹೆಚ್ಚಳದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪ

ಕ್ಯಾಬಿನೆಟ್ ನಲ್ಲಿ ಬಸ್ ದರ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪಿಸಿದರು. ಬಸ್ ದರ ಏರಿಕೆಗೆ ಕಾರಣಗಳು, ಸಾರಿಗೆ ನಿಗಮಗಳ ಹಣಕಾಸು ಪರಿಸ್ಥಿತಿ ಬಗ್ಗೆ ಮಾಹಿತಿ ಸಭೆಗೆ ಮಾಹಿತಿ ನೀಡಿದರು. ಸಿಎಂ ಸಿದ್ದರಾಮಯ್ಯ, ಸಚಿವರ ಮುಂದೆ ಸಾರಿಗೆ ಇಲಾಖೆ ಸ್ಥಿತಿಗತಿ ವಿವರಿಸಿದ ಸಚಿವ ರಾಮಲಿಂಗಾರೆಡ್ಡಿ. ಶಕ್ತಿ ಯೋಜನೆ, ಅದರ ಹೊರೆ ಬಗ್ಗೆಯೂ ಸಚಿವರು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದರು. ಬಿಎಂಟಿಸಿ ಬಸ್ ದರ ಏರಿಕೆ ಆಗಿ 10 ವರ್ಷ ಆಗಿದೆ. ಮೂರು ನಿಗಮಗಳ ಬಸ್ ದರ ಏರಿಕೆ‌ ಆಗಿ 5 ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ದರ ಏರಿಕೆಗೆ ಅನುಮತಿ ನೀಡಲು ತಿಳಿಸಿದರು

ಶೇ. 15 ರಷ್ಟು ದರ ಏರಿಕೆ ಫಿಕ್ಸ್?

ಸಂಕಷ್ಟದಲ್ಲಿ ನಿಗಮಗಳು ಕಾರ್ಯನಿರ್ವಹಿಸುತ್ತಿವೆ, ಬಸ್ ದರ ಅನಿವಾರ್ಯ ಎಂದು ಕ್ಯಾಬಿನೆಟ್ ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ನೀಡಿದರು. ಮೂರು ನಿಗಮಗಳಿಗೆ ಒಂದು ದರ, ಬಿಎಂಟಿಸಿಗೆ ಒಂದು ದರ ಏರಿಕೆಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಸ್ತಾಪಿಸಿದರು. ಆರಂಭದಲ್ಲಿ 13 ರಿಂದ 18 ರಷ್ಟು ದರ ಏರಿಕೆಗೆ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಶೇ. 15 ರಷ್ಟು ಬಸ್ ದರ ಏರಿಕೆಗೆ ಸಂಪುಟ ಅನುಮತಿ ನೀಡಿದೆ.

2025ರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಶಾಕ್

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2025 ರ ಮೊದಲ ಕ್ಯಾಬಿನೆಟ್ ಮೀಟಿಂಗ್ ಇಂದು ಬೆಂಗಳೂರಿನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಕೆಎರ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ.

Post a Comment

Previous Post Next Post