ಇಡಿ ನೋಟಿಸ್‌ ನೀಡಿದ್ದು ಅಚ್ಚರಿ ಮೂಡಿಸಿತ್ತು : ಸಚಿವ ಬೈರತಿ ಸುರೇಶ್‌

 ಅದಾದ ನಂತರ ನಾನು ಯಾರಿಗೂ ಸೈಟು ಕೊಟ್ಟಿಲ್ಲ, ತೆಗೆದುಕೊಂಡೂ ಇಲ್ಲ. ಹಾಗಿದ್ದರೂ ನನಗೇಕೆ ನೋಟೀಸ್‌‍ ಕೊಟ್ಟರು ಎಂದು ಅಚ್ಚರಿಯಾಗಿತ್ತು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ನಿವೇಶನ ನೀಡಿದ್ದು ನ್ಯಾಯಯುತವಾಗಿತ್ತು. ನ್ಯಾಯಾಲಯ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ನಿವೇಶನವನ್ನು ವಾಪಸ್‌‍ ಮಾಡಲಾಗಿದೆ. ಅದರ ನಂತರವೂ ಇ.ಡಿ ತನಿಖೆ, ನೋಟಿಸ್‌‍ ಇದೆಲ್ಲಾ ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು. ಜಾರಿ ನಿರ್ದೇಶನಾಲಯದ ನೋಟಿಸ್‌‍ ಸೂಕ್ತ ಅಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಮನವರಿಕೆಯಾಗಿದೆ. ಅದಕ್ಕಾಗಿಯೇ ನೋಟಿಸ್‌‍ಗೆ ತಡೆ ನೀಡಿದ್ದಾರೆ. ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದಾಗಲೀ, ಅವರ ಪತ್ನಿ ಪಾರ್ವತಿಯವರದಾಗಲೀ ಪಾತ್ರ ಇಲ್ಲ. ಪಾತ್ರ ಇದ್ದಿದ್ದರೆ ನ್ಯಾಯಾಲಯ ನೋಟಿಸ್‌‍ಗೆ ತಡೆ ನೀಡುತ್ತಿರಲಿಲ್ಲ ಎಂದು ಹೇಳಿದರು.

ನನ್ನನ್ನೂ ಸೇರಿದಂತೆ ಕಾಂಗ್ರೆಸ್‌‍ನ ಎಲ್ಲರೂ ನ್ಯಾಯಾಲಯ ಮತ್ತು ಸಂವಿಧಾನದ ಮೇಲೆ ಪೂರ್ಣ ಪ್ರಮಾಣದ ನಂಬಿಕೆ ಇಟ್ಟುಕೊಂಡಿದ್ದೇವೆ. ನ್ಯಾಯಮೂರ್ತಿಗಳು ಏನು ಹೇಳುತ್ತಾರೊ ಅದನ್ನು ಪಾಲನೆ ಮಾಡುತ್ತೇವೆ. ಜಾರಿ ನಿರ್ದೇಶನಾಲಯದ ಹಿಂದೆ ರಾಜಕೀಯ ಇದೆ ಎಂದು ನಾನು ಹೇಳಲು ಬಯಸುವುದಿಲ್ಲ. ಜನರಿಗೆ ಅರ್ಥವಾಗುತ್ತದೆ ಎಂದರು.

Post a Comment

Previous Post Next Post