2014 ರಿಂದ 2,639 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಪಾಕಿಸ್ತಾನದಿಂದ ಪುನಃ ಭಾರತಕ್ಕೆ ವಾಪಸ್ಸ್ ಕರೆತರಲಾಗಿದೆ.
2014 ರಿಂದ 2,639 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಪಾಕಿಸ್ತಾನದಿಂದ ಪುನಃ ಭಾರತದ ಭೂಮಿಗೆ ಕರೆತರಲಾಗಿದ್ದು, ಬಹು ಮುಖ್ಯವಾಗಿ 2023 ರಿಂದ ಈಚೇಗೆ 478 ಭಾರತೀಯ ಮೀನುಗಾರರು ಮತ್ತು 13 ಭಾರತೀಯ ನಾಗರಿಕ ಕೈದಿಗಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನವದೆಹಲಿ (New Delhi): ಭಾರತ (India) ಮತ್ತು ಪಾಕಿಸ್ತಾನ (Pakistan) ಎರಡು ರಾಷ್ಟ್ರಗಳು ಬದ್ದ ವೈರಿಗಳು. ಅದು ಎಷ್ಟರ ಮಟ್ಟಕ್ಕೆಂದರೆ ಎರಡು ರಾಷ್ಟ್ರಗಳು ಸೌಹಾರ್ದ್ಯ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಷ್ಟು. ಅದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವಂತಹದ್ದೆ, ಯಾವಾಗಲೂ ಭಾರತದ ವಿರುದ್ದ ಕತ್ತಿ ಮಸಿಯುವ ಪಾಕಿಸ್ತಾನ, ಸಮಯ ಸಿಕ್ಕಾಗೆಲ್ಲ ಭಾರತದ ನೆಮ್ಮದಿ ಕಡಿಸಿಲು ಉಗ್ರರನ್ನು (Extremists) ರವಾನೆ ಮಾಡಲು ಹಾತೊರೆಯುತ್ತಿರುತ್ತದೆ. ಆದರೆ ಮಹತ್ವದ ಬೆಳವಣಿಗೆಯಲ್ಲಿ ಭಾರತ ನೆನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನಗಳ ಸಭೆಯಲ್ಲಿ ನಮ್ಮ ನಾಗರೀಕರನ್ನು ಕಳಹಿಸುವಂತೆ ಹಾಗೂ ತನ್ನ ನಾಗರೀಕರೆಂದು ನಂಬಲಾಗಿರುವವವರ ಮಾಹಿತಿಗಳನ್ನು ತಿಳಿಸುವಂತೆ ಒತ್ತಾಯಿಸಿದೆ.
ಭಾರತದ ಗುಜರಾತ್ ಕರಾವಳಿ ತೀರವು ಯಾವಾಗಲೂ ಸುದ್ದಿಯಾಗುವುದು ಅಕ್ರಮ ಮೀನುಗಾರರ ವಿಷಯಕ್ಕೆ. ಜಲ ಗಡಿ ರೇಖೆ ತಿಳಿಯದೆ ಎರಡು ರಾಷ್ಟ್ರಗಳ ಮೀನುಗಾರರೂ (Fisherman) ಇನ್ನೊಂದು ರಾಷ್ಟ್ರವನ್ನು ಪ್ರವೇಶಿಸುತ್ತಾರೆ. ಆ ಸಂದರ್ಭದಲ್ಲಿ ಅವರು ವಿರೋಧಿ ರಾಷ್ಟ್ರದ ವಶಕ್ಕೆ ಸಿಕ್ಕಿ ಬೀಳುತ್ತಾರೆ. ಆದರಂತೆ ಸಿಕ್ಕಿ ಬಿದ್ದ ಮೀನುಗಾರರ ಮಾಹಿತಿಗಳನ್ನು 2008 ಒಪ್ಪಂದ್ದದ ಪ್ರಕಾರ ಪ್ರತಿ ವರ್ಷ ಜನವರಿ 1 ಹಾಗೂ ಜುಲೈ 1 ರಂದು ಎರಡು ರಾಷ್ಟ್ರಗಳು ಹಂಚಿಕೊಳ್ಳುತ್ತಾರೆ. ಅದರಂತೆ ನಿನ್ನೆ ಅಂದರೆ ಜನವರಿ ಒಂದರಂದು ಎರಡು ರಾಷ್ಟ್ರಗಳು ಮಾಹಿತಿ ಹಂಚಿಕೊಂಡಿದ್ದು: ಭಾರತವು ಪಾಕಿಸ್ತಾನಿ ಹಾಗೂ ಪಾಕಿಸ್ತಾನಿ ಎಂದು ನಂಬಲಾಗಿರುವ 381 ಸಾರ್ವಜನಿಕರು ಹಾಗೂ 81 ಮೀನುಗಾರರ ಮಾಹಿತಿಗಳನ್ನು ರವಾನಿಸಿದ್ದು, ಪಾಕಿಸ್ತಾನವು ಭಾರತೀಯ ಅಥವಾ ಭಾರತೀಯ ಎಂದು ನಂಬಲಾಗಿರುವ 49 ಸಾರ್ವಜನಿಕರು ಹಾಗೂ 217 ಮೀನುಗಾರರ ಮಾಹಿತಿಗಳನ್ನು ಹಂಚಿಕೊಂಡಿದೆ.
ಏತನ್ಮಧ್ಯೆ ಭಾರತ ಸರ್ಕಾರವು, ಅಕ್ರಮವಾಗಿ ಗಡಿ ದಾಟಿ ಬಂಧನಕ್ಕೆ ಹೊಳಗಾಗಿ, ತಮ್ಮ ಬಂಧನದ ಅವಧಿಯನ್ನು ಮುಗಿಸಿರುವ 183 ಜನರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಮನವಿ ಮಾಡಿದ್ದು, ಬಹಳ ಮುಖ್ಯವಾಗಿ 18 ಜನರ ವಾಪಸಾತಿಯನ್ನು ವೇಗವಾಗಿ ಪೂರ್ಣಗೊಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಾಯಿಸಿದೆ.
“ನಾಗರಿಕ ಕೈದಿಗಳು, ಮೀನುಗಾರರು ಮತ್ತು ಅವರ ದೋಣಿಗಳು ಮತ್ತು ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಪಾಕಿಸ್ತಾನದ ವಶದಿಂದ ಶೀಘ್ರ ಬಿಡುಗಡೆ ಮತ್ತು ವಾಪಸಾತಿಗೆ ಭಾರತ ಸರ್ಕಾರ ಒತ್ತಾಯ ಮಾಡಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಇದೇ ಸಂದರ್ಭದಲ್ಲಿ ಭಾರತದ ವಶದಲ್ಲಿರುವ 76 ಪಾಕಿಸ್ತಾನಿ ನಾಗರಿಕ ಕೈದಿಗಳೆಂದು ನಂಬಲಾಗಿರುವ ಮೀನುಗಾರರ ರಾಷ್ಟ್ರೀಯತೆ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತವಾಘಿ ಮುಗಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.
ಏತನ್ಮಧ್ಯೆ, 2014 ರಿಂದ 2,639 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಪಾಕಿಸ್ತಾನದಿಂದ ಪುನಃ ಭಾರತದ ಭೂಮಿಗೆ ಕರೆತರಲಾಗಿದ್ದು, ಬಹು ಮುಖ್ಯವಾಗಿ 2023 ರಿಂದ ಈಚೇಗೆ 478 ಭಾರತೀಯ ಮೀನುಗಾರರು ಮತ್ತು 13 ಭಾರತೀಯ ನಾಗರಿಕ ಕೈದಿಗಳಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿ; ಪೊಲೀಸ್ ಸೇವೆಗೆ ಸೇರಿದ ಮೊದಲ ಹಿಂದೂ ಅಧಿಕಾರಿ ರಾಜೇಂದ್ರ ಮೇಘವರ್ ಯಾರು?
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಅದರಲ್ಲೂ ವಿಶೇಷವಾಗಿ ಹಿಂದೂ ಸಮುದಾಯದ ಪ್ರತಿಭಾವಂತ ಯುವಕ-ಯುವತಿಯರು ಅಡೆತಡೆಗಳನ್ನು ಎದರಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ರಾಜೇಂದ್ರ ಮೇಘವರ್ ಕೂಡ ಒಬ್ಬರು. ರಾಜೇಂದ್ರ ಅವರು ಪಾಕಿಸ್ತಾನ ಪೊಲೀಸ್ ಸೇವೆ (PSP) ಸೇರಿದ ಮೊದಲ ಹಿಂದೂ ಅಧಿಕಾರಿಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ರಾಜೇಂದ್ರ ಮೇಘವರ್ ಅವರು ಶುಕ್ರವಾರ ಫೈಸಲಾಬಾದ್‌ನ ಗುಲ್ಬರ್ಗ್ ಪ್ರದೇಶದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.
ಸಿಂಧ್ ಪ್ರಾಂತ್ಯದ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದ ಬಾಡಿನ್‌ನಿಂದ ಬಂದ ರಾಜೇಂದ್ರ ಮೇಘವರ್ ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (CSS) ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ಸೇರಲು ನಿರ್ಧರಿಸಿದರು. ಸಮಾಜ ಸೇವೆ ಮಾಡಬೇಕೆಂಬ ತಮ್ಮ ಬಹುದಿನಗಳ ಕನಸನ್ನು ನನಸಾಗಿಸಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಮೇಘವರ್ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಅಲ್ಪಸಂಖ್ಯಾತ ಸಮುದಾಯದವರಾಗಿದ್ದರೂ ಯಶಸ್ಸು ಸಾಧಿಸಬಹುದು ಎಂದು ಸಾಬೀತುಪಡಿಸಿದರು. ಈ ಪ್ರವೃತ್ತಿಯು ಸಮಾಜದಲ್ಲಿ ಪಾಕಿಸ್ತಾನದ ಒಳಗೊಳ್ಳುವಿಕೆ ಮತ್ತು ಪ್ರಗತಿಯನ್ನು ತೋರಿಸುತ್ತದೆ.

Post a Comment