ಡಿಕೆ ಶಿವಕುಮಾರ್, ಡಿಸಿಎಂ
Shiggavi By Election: ಉಪ ಚುನಾವಣೆ ಸಂಬಂಧ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಗಳು ಈಗಾಗಲೇ ಶುರುವಾಗಿದ್ದು, ಕೈ ಅಭ್ಯರ್ಥಿ ಯಾಸಿರ್ ಪಠಾಣ್ ಪರ ಇಂದು ಶಿಗ್ಗಾವಿ ಕ್ಷೇತ್ರಕ್ಕೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ತರೆದ ವಾಹನದಲ್ಲಿ ಪ್ರಚಾರ ನಡೆಸಿದ್ದಾರೆ.
ಹಾವೇರಿ**: ನವೆಂಬರ್ 13ರಂದು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ (By Election) ನಡೆಯಲಿದೆ. ಈ ಹಿನ್ನೆಲೆ** ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) - ಜೆಡಿಎಸ್ (JDS) ನಡುವಿನ ಕದನ ಜೋರಾಗಿದೆ. ಚನ್ನಪಟ್ಟಣ**,** ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಉಪ ಚುನಾವಣೆ ಸಂಬಂಧ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಗಳು ಈಗಾಗಲೇ ಶುರುವಾಗಿದೆ. ಕೈ ಅಭ್ಯರ್ಥಿ ಯಾಸಿರ್ ಪಠಾಣ್ ಪರ ಇಂದು ಶಿಗ್ಗಾವಿ ಕ್ಷೇತ್ರಕ್ಕೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್, ತರೆದ ವಾಹನದಲ್ಲಿ ಪ್ರಚಾರ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರ ಪ್ರಚಾರ ಕಾರ್ಯಕ್ರಮ ಶಿಗ್ಗಾವಿ ಕ್ಷೇತ್ರದ ಹೋತನಹಳ್ಳಿ ಗ್ರಾಮದಲ್ಲಿ ನಡೆಯಿತು. ತೆರೆದ ವಾಹನದಲ್ಲಿ ಡಿಕೆಶಿ ಯಾಸಿರ್ ಪಠಾಣ್ ಪರ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರುವರೆ ವರ್ಷ ಅಲ್ಲ. ಎಂಟೂವರೆ ವರ್ಷ ಆಡಳಿತದಲ್ಲಿ ಇರುತ್ತೇವೆ. ಬೊಮ್ಮಾಯಿ 15 ವರ್ಷದ ಆಡಳಿತ ಮಾಡಿದ್ದಾರೆ. ಎರಡೂವರೆ ವರ್ಷ ಸಿಎಂ ಆಗಿದ್ದರು. ಆದರೆ ನಮ್ಮಂತಹ ಒಂದು ಯೋಜನೆ ಕೊಟ್ಟಿದ್ದಾರಾ ನೀವೆ ಹೇಳಿ. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ದಿನಬಳಕೆ ವಸ್ತು ಬೆಲೆ ಜಾಸ್ತಿ ಆದ್ದರಿಂದ ನಾವು ಐದು ಗ್ಯಾರಂಟಿ ಜಾರಿಗೆ ತಂದೆವು. ಇನ್ನು 1.29 ಕೋಟಿ ಮಹಿಳೆಯರಿಗೆ ನೇರವಾಗಿ 2 ಸಾವಿರ ರೂಪಾಯಿ ಹಣವನ್ನು ಅವರ ಖಾತೆಗೆ ಹಾಕುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವೇಳೆ ಸಚಿವರಾದ ಶಿವಾನಂದ್ ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ರಹೀಮ್ ಖಾನ್ ಹಾಗೂ ಮಂಕಾಳ್ ವೈದ್ಯ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.
ಸಿಎಂ ಅವರ ಅದೊಂದು ಹೇಳಿಕೆ ಭಾರೀ ವೈರಲ್!
ಸೋಮವಾರದಂದು ಉಪ ಚುನಾವಣೆ ಪ್ರಯುಕ್ತ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರಚಾರಕ್ಕೆ ದುಮುಕಿದ್ದರು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಹುಲಗೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಪ್ರಚಾರದ ವೇಳೆ ನೀಡಿದ ಅದೊಂದು ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಸಿಎಂ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಮೇಲೆ ನಿಂತಿದ್ಯಾ ಎಂಬ ಸಂಶಯ ಹುಟ್ಟುಹಾಕಿತ್ತು. ‘ನಾನು ಉಳೀಬೇಕಾದ್ರೆ ಪಠಾಣ್ ಗೆಲ್ಲಲೇಬೇಕು.’ ರಾಜ್ಯದಲ್ಲಿ ಮೂರು ಕಡೆ ಉಪ ಚುನಾವಣೆ ನಡೀತಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಮಗೆ ಇನ್ನೂ ಶಕ್ತಿ ಬರುತ್ತೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ. ನಾವು ಜನ ಪರ ಇದ್ದೇವೆ, ನಮ್ಮನ್ನು ಕೈಬಿಡಬೇಡಿ. ಈ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅಂತ ತಿಳಿದು ಪಠಾಣ್ ನನ್ನು ಗೆಲ್ಲಿಸಿ ಎಂದು ಸಿಎಂ ಅವರು ನೆರೆದಂತ ಜನರ ಬಳಿ ಮನವಿ ಮಾಡಿಕೊಂಡಿದ್ದರು
ಶಿಗ್ಗಾವಿ ಉಪಚುನಾವಣೆಯಲ್ಲಿ ಸಿಎಂ ಭವಿಷ್ಯ?
ಇದೀಗ ಸಿಎಂ ಸಿದ್ದರಾಮಯ್ಯ ಅವರ ಈ ಮಾತುಗಳು ಭಾರೀ ಸದ್ದು ಮಾಡುತ್ತಿದೆ. ಸಿಎಂ ಭವಿಷ್ಯ ಶಿಗ್ಗಾವಿ ಉಪಚುನಾವಣೆಯಲ್ಲಿ ಅಡಗಿದ್ಯಾ ಎಂಬ ಸಂಶಯ ಮೂಡುತ್ತಿದೆ. ಉಪ ಚುನಾವಣೆಯ ಫಲಿತಾಂಶವೇ ಇದಕ್ಕೆಲ್ಲ ಉತ್ತರವಾಗಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಅವರಿಂದ ಪಠಾಣ್‌ಗೆ ಸಲಹೆ
ಸಿಎಂ ಸಿದ್ದರಾಮಯ್ಯ ಅವರು ಹುಲಗೂರು ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೆಲವಂದಿಷ್ಟು ಸಲಹೆಗಳನ್ನು ನೀಡಿದ್ದರು. ನೀನು ಏನು ಮಾಡುತ್ತಿಯೋ ಗೊತ್ತಿಲ್ಲ. ಈ ಚುನಾವಣೆಯಲ್ಲಿ ಗೆಲ್ಲಲೇಬೇಕು. ಬಿಜೆಪಿ ಅಭ್ಯರ್ಥಿಯನ್ನು ಹಿಟ್ ಮಾಡಿ ನೀವು ಗೆಲ್ಲಬೇಕು. ಇನ್ನು ಭರತ್‌ಗೂ ಈ ಕ್ಷೇತ್ರಕ್ಕೂ ಏನು ಸಂಬಂಧವಿಲ್ಲ. ಅವರ ತಂದೆ, ತಾತ ಇಬ್ಬರೂ ಸಿಎಂ ಆಗಿದ್ದವರು. ಅವರ ಮೊಮ್ಮಗ ಈಗ ಅಭ್ಯರ್ಥಿಯಾಗಿದ್ದಾರೆ. ಆದರೆ ಪಠಾಣ್ ಅವರು ಕುಸ್ತಿ ಪಟು ಅಂತ ಗೊತ್ತಿರಲಿಲ್ಲ. ಈಗ ನೀನು ಯಾವ ಡೌವ್ ಅಪ್ ಮಾಡ್ತೀಯೋ ಗೊತ್ತಿಲ್ಲ. ಭರತ್ ನನ್ನ ಸೋಲಿಸಲೇಬೇಕು. ಈ ಶಿಗ್ಗಾವಿ ಅಖಾಡದಲ್ಲಿ ನೀನು ಗೆಲುವು ಸಾಧಿಸಲೇಬೇಕು ಎಂದು ಸಿಎಂ ಹೇಳಿದ್ದರು.

Post a Comment