ಸೈಬರ್ ಕ್ರೈಂ (ಸಾಂದರ್ಭಿಕ ಚಿತ್ರ)
ಗಿಫ್ಟ್ ಆಸೆಯಲ್ಲಿ ವರ್ತಕನೋರ್ವ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಹುಬ್ಬಳ್ಳಿ: ಗಿಫ್ಟ್ ಆಸೆಗೆ ಹೋಗಿ ವರ್ತಕನೋರ್ವ ಲಕ್ಷಾಂತರ ರೂಪಾಯಿ ವಂಚನೆಗೆ ಒಳಗಾದ ಘಟನೆ ಹುಬ್ಬಳ್ಳಿಯಲ್ಲಿ (Hubballi Crime News) ನಡೆದಿದೆ. 15 ಲಕ್ಷ ರೂಪಾಯಿ ಗಿಫ್ಟ್ ಸಿಗುತ್ತೆ ಅನ್ನೊ ಭರದಲ್ಲಿ ವ್ಯಕ್ತಿ 14.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಏನಿದು ಗಿಫ್ಟ್? ಏನಿದು ಪಂಗನಾಮ ಅಂತೀರಾ? ಈ ಸ್ಟೋರಿ ನೋಡಿ.ಏನಾದ್ರೂ ಪುಕ್ಸಟ್ಟೆಯಾಗಿ ಗಿಫ್ಟ್ ಸಿಗುತ್ತೆ ಅಂದ್ರೆ ಸಾಕು ಮುಗಿಬೀಳುವ ಸ್ವಭಾವ ಇರೋರೇ ಜಾಸ್ತಿ. ಇಂತಹ ಗಿಫ್ಟ್ ಆಸೆಗೆ ಹೋಗಿ ವ್ಯಾಪಾರಿಯೋರ್ವ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ಸಿಗುತ್ತೆ ಅಂತ ನಂಬಿ 14.86 ಲಕ್ಷ ಕಳೆದುಕೊಂಡಿರುವ ವಿಚಿತ್ರ ಘಟನೆಗೆ ಹುಬ್ಬಳ್ಳಿಯ ಗೊಕುಲ್ ರಸ್ತೆಯ ಕೋಟಿಲಿಂಗೇಶ್ವರ ನಗರ ಸಾಕ್ಷಿಯಾಗಿದೆ. ಕೋಟಿಲಿಂಗೇಶ್ವರ ನಗರದ ಗುರುಪಾದಯ್ಯ ವಂಚನೆಗೆ ಒಳಗಾದ ವ್ಯಾಪಾರಿಯಾಗಿದ್ದಾರೆ. ಗಿಫ್ಟ್ ಹಣ ಪಡೆದುಕೊಳ್ಳಲು ಟ್ಯಾಕ್ಸ್ ಪಾವತಿಸಬೇಕೆಂದು ಹೇಳಿ ವಂಚನೆ ಮಾಡಲಾಗಿದ್ದು, ರಾಘವೇಂದ್ರ ಎಂಬಾತನಿಂದ ವಂಚನೆ ನಡೆದ ಆರೋಪ ಕೇಳಿಬಂದಿದೆ.ಸಂಬಂಧಿತ ಸುದ್ದಿHostel Facility: ಹುಬ್ಬಳ್ಳಿಯ ವಿದ್ಯಾರ್ಥಿಗಳೇ-ಪೋಷಕರೇ, ಇಲ್ಲಿದೆ ನಿಮಗೊಂದು ಪ್ರಮುಖ ಮಾಹಿತಿವಿದ್ಯಾರ್ಥಿಗಳೇ ಗಮನಿಸಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನIndian Railways: ಮೈಸೂರು, ಪಂಢರಪುರ, ಚನ್ನಪಟ್ಟಣ-ಬೆಂಗಳೂರು, ಅರಸೀಕೆರೆ ಬೆಂಗಳೂರು ರೈಲುಗಳಲ್ಲಿ ಬದಲಾವಣೆHubballi Power Cut: ಹೆಸ್ಕಾಂ ವ್ಯಾಪ್ತಿಯ ಈ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಬರೋಬ್ಬರಿ 14.86 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆಗುರುಪಾದಯ್ಯ ಅವರ ಅಂಗಡಿಗೆ ಸ್ಪೀಡ್ ಪೋಸ್ಟ್ ಬಂದಿತ್ತು. ಅದರಲ್ಲಿ 15.51 ಲಕ್ಷ ರೂ. ಗಳ ಗಿಫ್ಟ್ ಸ್ಕ್ರ್ಯಾಚ್ ಕಾರ್ಡ್ ಇತ್ತು. ಜೊತೆಗೆ ಪ್ಲಿಪ್‌ಕಾರ್ಟ್ ಹೆಸರಿನಲ್ಲಿ ಭಾರತ ಸರ್ಕಾರದ ಪರಿಶೀಲನಾ ಪ್ರಮಾಣಪತ್ರ ಇತ್ತು. ಇದನ್ನು ನಂಬಿ ಪ್ರಮಾಣಪತ್ರದಲ್ಲಿರುವ ಮೊಬೈಲ್ ಸಂಖ್ಯೆಗೆ ಗುರುಪಾದಯ್ಯ ಫೋನ್ ಮಾಡಿದ್ದ. ಆಧಾರ್ ಕಾರ್ಡ್ ಮತ್ತಿತರ ಮಾಹಿತಿ ಪಡೆದುಕೊಂಡಿದ್ದ ರಾಘವೇಂದ್ರ ಎಂಬಾತ, ನಂತರ ಗಿಫ್ಟ್ ಹಣ ಪಡೆದುಕೊಳ್ಳಲು ಟ್ಯಾಕ್ಸ್ ತುಂಬಬೇಕೆಂದು ಹೇಳಿದ್ದ.ಹಣ ರಿಕವರಿ ಆಗುತ್ತಾ?ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಪಂಗನಾಮ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತಾನು ಮೋಸ ಹೋಗಿರೋದು ಖಾತ್ರಿಯಾದ ನಂತರ ಗುರುಪಾದಯ್ಯ ಪೊಲೀಸರ ಮೊರೆ ಹೋಗಿದ್ದಾರೆ. ತಡವಾಗಿ ಪ್ರಕರಣ ದಾಖಲಿಸಿರೋದ್ರಿಂದ ತಕ್ಷಣ ಹಣ ರಿಕವರಿ ಮಾಡಲು ಆಗಿಲ್ಲ. ಆದರೂ ಎಲ್ಲ ಅಕೌಂಟ್ ಗಳನ್ನು ಫ್ರೀಜ್ ಮಾಡಲಾಗಿದೆ. ಹಣ ರಿಕವರಿಗೆ ಪ್ರಯತ್ನಿಸ್ತಿದೇವೆ ಎಂದು ಕಾನೂನು ಮತ್ತು ಸುವ್ಯಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.ಇದನ್ನೂ ಓದಿ: Uttara Kannada: ಭಟ್ಕಳದಲ್ಲಿ ಅಯೋಧ್ಯೆಯ ರಾಮಮಂದಿರ; ಬಾಲರಾಮನ ಕಂಡು ಪುಳಕಿತರಾದ ಭಕ್ತರು!ಸುಲಭವಾಗಿ ಹಣ ಸಿಗುತ್ತೆ ಅಂತ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದ್ರಲ್ಲಿಯೂ ಲಾಭದ ಆಸೆ ತೋರಿಸಿ ಹಣ ಡಬ್ಲಿಂಗ್, ಉಚಿತ ಗಿಫ್ಟ್ ಇತ್ಯಾದಿಗಳ ಹೆಸರಲ್ಲಿ ವಂಚನೆಗಳ ಪ್ರಮಾಣ ಹೆಚ್ಚಾಗುತ್ತಿದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಡಿಸಿಪಿ ಕುಶಾಲ್ ಚೌಕ್ಸೆ ಸಲಹೆ ನೀಡಿದ್ದಾರೆ. ಕ್ರೈಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ.ಕ್ಷುಲ್ಲಕ ಕಾರಣಕ್ಕೆ ಹಲ್ಲೆಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿರೋ ಘಟನೆ ಹುಬ್ಬಳ್ಳಿಯ ಸೆಟ್ಲ್ಮೆಂಟ್ ಏರಿಯಾದಲ್ಲಿ ನಡೆದಿದೆ. ಪ್ರಜ್ವಲ ಬೆಳ್ಳಿಗಟ್ಟಿ, ವಿಕಾಸ ಭಜಂತ್ರಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಸೆಟಲ್‌ಮೆಂಟ್ ಪ್ರದೇಶದ ಸ್ವಯಂ ಜಾಧವ, ಪ್ರಜ್ವಲ ಜಾಧವ ಮತ್ತಿತರರಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment