ಸಿಎಂ ಸಿದ್ದರಾಮಯ್ಯ
ನಾಡದೊರೆ ಸಿಎಂ ಸಿದ್ದರಾಮಯ್ಯ (CM Siddaramaiah) ಯಾವ ಬ್ರಾಂಡ್‌ನ ಮೊಬೈಲ್ ಯೂಸ್ ಮಾಡಬಹುದು? ಈ ಕ್ಯೂರಿಯಾಸಿಟಿ ನಿಮಗಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಮೊಬೈಲ್ ಅನ್ನೇ ಯೂಸ್ ಮಾಡಲ್ವಂತೆ! ಹೌದು, ಖುದ್ದು ಸಿದ್ದರಾಮಯ್ಯ ಅವ್ರೇ ಹೇಳಿದ್ದಾರೆ.ಬೆಂಗಳೂರು: ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಮೊಬೈಲ್ (Mobile) ಇರುತ್ತೆ. ಸ್ಮಾರ್ಟ್ ಫೋನ್ (Smartphones) ಬಂದ ಮೇಲಂತೂ ಎಲ್ಲರೂ ಮೊಬೈಲ್ ಯೂಸ್ ಮಾಡೋದು ಜಾಸ್ತಿಯಾಗಿದೆ. ಅಂದಹಾಗೆ ನಾಡದೊರೆ ಸಿಎಂ ಸಿದ್ದರಾಮಯ್ಯ (CM Siddaramaiah) ಯಾವ ಬ್ರಾಂಡ್‌ನ ಮೊಬೈಲ್ ಯೂಸ್ ಮಾಡಬಹುದು? ಈ ಕ್ಯೂರಿಯಾಸಿಟಿ ನಿಮಗಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಮೊಬೈಲ್ ಅನ್ನೇ ಯೂಸ್ ಮಾಡಲ್ವಂತೆ! ಹೌದು, ಖುದ್ದು ಸಿದ್ದರಾಮಯ್ಯ ಅವ್ರೇ ಹೇಳಿದ್ದಾರೆ. ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಸಮಾಜಿಕ ಜಾಲತಾಣ ವಿಚಾರ ಸಂಕಿರಣ ಇಂದು ಬೆಂಗಳೂರಿನ (Bengaluru) ಪ್ರೆಸ್ ಕ್ಲಬ್‌ನಲ್ಲಿ (Press Club) ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದರಾಮಯ್ಯ ತಮ್ಮ ಮೊಬೈಲ್ ಬಗ್ಗೆ ಮಾತನಾಡಿದ್ದಾರೆ.ಮೊಬೈಲ್ ಯೂಸ್ ಮಾಡಲ್ವಂತೆ ಸಿಎಂ ಸಿದ್ದರಾಮಯ್ಯಸಂಬಂಧಿತ ಸುದ್ದಿBhavani Revanna: ಪರಪ್ಪನ ಅಗ್ರಹಾರ ಜೈಲಿಗೆ ಬಂದ ಭವಾನಿ ರೇವಣ್ಣ!KPCC President: ಸಿಎಂ ಆಪ್ತರಿಗೆ ಸಿಗುತ್ತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಮೂವರ ಮೇಲೆ ಸಿದ್ದರಾಮಯ್ಯ ಒಲವು!Karnataka Politics: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಇಲ್ಲ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ! ವರ್ಲ್ಡ್ ಕಪ್ ವಿನ್ ಸಂಭ್ರಮಿಸಿದ ಸಿಎಂ ಸಿದ್ದರಾಮಯ್ಯಫಸ್ಟಾಫಲ್ ನಾನು ಮೊಬೈಲ್ ಫೋನ್ ಇಟ್ಟುಕೊಂಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾನೆ. ಆದರೆ ನನ್ನ ಮಗ ಹೇಳ್ತಾ ಇರ್ತಾನೆ ಸರ್ಕಾರದ ಬಗ್ಗೆ ಈ ರೀತಿಯ ಅಭಿಪ್ರಾಯ ಬರ್ತಿವೆ ಅಂತಾ. ಆರು ತಿಂಗಳು ಫೋನ್ ಇಟ್ಟುಕೊಂಡಿದ್ದೆ. ಅವಾಗ ರಾತ್ರಿ ಸಿಕ್ಕಾಪಟ್ಟೆ ಫೋನ್ ಗಳು ಬಂದ್ಬಿಡುವು, ನಿದ್ದೆ ಮಾಡೋಕೆ ಆಗ್ತಾ ಇರಲಿಲ್ಲ. ಅದಕ್ಕಾಗಿ ನಾನು ಫೋನ್ ಇಟ್ಟು ಕೊಳ್ತಿಲ್ಲ, ಆಪ್ತರ ಮೂಲಕ ನಾನು ಏನಾದರೂ ಇದ್ದರೆ ಮಾಹಿತಿ ಪಡೆಯುತ್ತೇನೆ ಅಂತ ಸಿಎಂ ಹೇಳಿದ್ದಾರೆ.ಸೋಶಿಯಲ್ ಮೀಡಿಯಾ ಮೂಲಕ ವೇಗವಾಗಿ ಸುದ್ದಿಸಾಮಾಜಿಕ ಜಾಲತಾಣ ಬಹಳ ಬೇಗ ಜನರನ್ನು ಮುಟ್ಟುವಂತ ಮಾಧ್ಯಮ. ಈ ಹಿಂದೆ ಎಲೆಕ್ಟ್ರಾನಿಕ್ ಹಾಗೂ ಪ್ರಿಂಟ್ ಮೀಡಿಯಾ ಮೂಲಕ, ಟಿವಿ ಚಾನೆಲ್ಗಳು, ರೇಡಿಯೋಗಳ ಮೂಲಕ ಸುದ್ದಿ ತಿಳಿದುಕೊಳ್ತಿದ್ವಿ. ಇವಾಗ ಸೋಷಿಯಲ್ ಮೀಡಿಯಾ ಮೂಲಕ ಬಹಳ ವೇಗವಾಗಿ ಮಾಹಿತಿ ಪಡೆದುಕೊಳ್ತೇವೆ ಅಂತ ಸಿಎಂ ಹೇಳಿದ್ದಾರೆ.ಇದನ್ನೂ ಓದಿ: Bhavani Revanna: ಪರಪ್ಪನ ಅಗ್ರಹಾರ ಜೈಲಿಗೆ ಬಂದ ಭವಾನಿ ರೇವಣ್ಣ!ಫೇಕ್ ನ್ಯೂಸ್‌ನಿಂದ ಸಮಾಜಕ್ಕೆ ತೊಂದರೆಅದು ಎಷ್ಟು ಉಪಯೋಗ ಆಗ್ತವೋ ಅಷ್ಟು ಕೆಟ್ಟದ್ದು ಕೂಡ ಆಗುತ್ತದೆ. ಅದನ್ನು ಬಹಳ ಒಳ್ಳೆಯ ರೀತಿಯಲ್ಲಿ, ಸತ್ಯ ಸಂಗತಿಗಳನ್ನು ತಿಳಿಸಿದ್ರೆ ಬಹಳ ಚೆನ್ನಾಗಿ ಇರುತ್ತದೆ ಅಂತ ಸಿಎಂ ಹೇಳಿದ್ದಾರೆ. ಫೇಕ್ ನ್ಯೂಸ್ ಗಳಾದ್ರೆ ಸಮಾಜಕ್ಕೆ ತೊಂದರೆ ಆಗುತ್ತದೆ ಎಂದಿರುವ ಸಿಎಂ, ಫೇಕ್ ನ್ಯೂಸ್ ನಿಯಂತ್ರಿಸಲು ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಘಟಕಗಳನ್ನು ಮಾಡಿದ್ದೇವೆ. ಫೆಸಿಫಿಕ್ ಆಗಿ, ಸುದ್ದಿ ಕಲೆಕ್ಟ್ ಮಾಡುವಂತವರು, ಸುದ್ದಿ ಎಡಿಟ್ ಮಾಡುವಂತವರು ಇದ್ದಾರೆ. ಇದರಲ್ಲಿ ಯಾರು ಬೇಕಾದರೂ ಅಭಿಪ್ರಾಯ ವ್ಯಕ್ತಪಡಿಸಬಹುದು ಅಂತ ಸಿದ್ದರಾಮಯ್ಯ ಹೇಳಿದ್ರು. ಫೇಕ್ ನ್ಯೂಸ್ ಬಗ್ಗೆ ಮಾಧ್ಯಮಗಳು ಜಾಗೃತರಾಗಿ ಇರಬೇಕು ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಫೇಕ್ ನ್ಯೂಸ್ ಬಗ್ಗೆ ವಿಚಾರ ಸಂಕಿರಣ ಆಗಿದ್ರೆ ಒಳ್ಳೆಯದಿತ್ತು. ಜಾಲತಾಣ ಇರಬಾರದು ಎಂದು ನಾನು ಹೇಳೋಕೆ ಹೋಗಲ್ಲ. ಆದರೆ ಫೇಕ್ ನ್ಯೂಸ್ ನಿಯಂತ್ರಣ ಮಾಡುವುದು ಅವಶ್ಯಕತೆ ಇದೆ. ನಾವು ನಿಯಂತ್ರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Post a Comment