ಮನೆಯಲ್ಲೇ ಸಿಗುವ ಗಿಡಮೂಲಿಕೆ ಹಾಗೂ ಔಷಧಿಗಳಿಂದ ನೀವು ಡೆಂಗ್ಯೂಗೆ ಪರಿಣಾಮಕಾರಿ ಔಷಧ ತಯಾರಿಸಬಹುದು. ಡೆಂಗ್ಯೂ ನಿಯಂತ್ರಣದ ಮೊದಲ ಮನೆ ಔಷಧಿ ಬೇವಿನ ಎಲೆ. ಬಿಳಿಯ ರಕ್ತಕಣಗಳು ಮತ್ತು ಪ್ಲೆಟ್ ಲೆಟ್ಸ್ ಹೆಚ್ಚಿಸಲು ಬೇವಿನ ಎಲೆಗಳು ಉಪಯುಕ್ತ.ಡೆಂಗ್ಯೂ ಜ್ವರಕ್ಕೆ ಮೂಲ ಕಾರಣ ಸೊಳ್ಳೆಗಳ ಮೂಲಕ ದೇಹವನ್ನು ಪ್ರವೇಶಿಸುವ ವೈರಾಣುಗಳು. ಹೀಗಾಗಿ ಡೆಂಗ್ಯೂವನ್ನು ತಡೆಯಲು ದೇಹದ ರೋಗನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳುವುದು ಉತ್ತಮ ಉಪಾಯ. ಮನೆಯಲ್ಲೇ ಡೆಂಗ್ಯೂವನ್ನು ತಡೆಗಟ್ಟಲು ಹಾಗೂ ಡೆಂಗ್ಯೂನಿಂದ ಪಾರಾಗಲು ಬಳಸಬಹುದಾದ ಔಷಧಗಳೇನು? ಮನೆಮದ್ದುಗಳಿಂದ ಡೆಂಗ್ಯೂ ಬಾರದಂತೆ ತಡೆಯೋದು ಹೇಗೆ? ಈ ಬಗ್ಗೆ ಕೆಲವೊಂದಷ್ಟು ಪರಿಣಾಮಕಾರಿ ಟಿಪ್ಸ್ ಇಲ್ಲಿದೆ ನೋಡಿ.ಮನೆಯಲ್ಲೇ ಸಿಗುವ ಗಿಡಮೂಲಿಕೆ ಹಾಗೂ ಔಷಧಿಗಳಿಂದ ನೀವು ಡೆಂಗ್ಯೂಗೆ ಪರಿಣಾಮಕಾರಿ ಔಷಧ ತಯಾರಿಸಬಹುದು. ಡೆಂಗ್ಯೂ ನಿಯಂತ್ರಣದ ಮೊದಲ ಮನೆ ಔಷಧಿ ಬೇವಿನ ಎಲೆ. ಬಿಳಿಯ ರಕ್ತಕಣಗಳು ಮತ್ತು ಪ್ಲೆಟ್ ಲೆಟ್ಸ್ ಹೆಚ್ಚಿಸಲು ಬೇವಿನ ಎಲೆಗಳು ಉಪಯುಕ್ತ. ಹೀಗಾಗಿ ಬೇವಿನ ಎಲೆಯ ಕಷಾಯ ಅತ್ಯುತ್ತಮ ಮನೆಮದ್ದು. ಇದರಲ್ಲಿ ನಿಂಬಿನ್ ಮತ್ತು ನಿಂಬಿಡನ್ ಸಸ್ಯದಲ್ಲಿ ಕಂಡುಬರುವ ಸಂಯುಕ್ತಗಳಾಗಿದ್ದು, ಇದು ಜ್ವರ,ಊರಿಯೂತ ಹಾಗೂ ಆಂಟಿಮೈಕ್ರೋಬಿಲ್ ಗುಣ ಹೊಂದಿದೆ.ಬೇವಿನ ಎಲೆ ಕಷಾಯ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: ಒಂದು ಮುಷ್ಠಿ ಬೇವಿನ ಎಲೆ, ಒಂದು ಸ್ಪೂನ್ ಜೇನುತುಪ್ಪ/ ನಿಂಬೆರಸಬೇವಿನ ಎಲೆ ರಸ ತಯಾರಿಸುವ ವಿಧಾನ: ಒಂದು ಮುಷ್ಠಿ ಬೇವಿನ ಎಲೆಗೆ ಒಂದು ಲೋಟದಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ ಬಳಿಕ ಸೋಸಿ ಒಂದು ಸ್ಪೂನ್ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಿ ಕುಡಿಯಿರಿ.ಪಪ್ಪಾಯ ರಸ: ಪಪ್ಪಾಯ ರಸ ನ್ಯೂಟ್ರೋಫಿಲ್ಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಹೆಚ್ಚಿನ ಪ್ಲೇಟ್ಲೆಟ್ ಎಣಿಕೆ ರಕ್ತಸ್ರಾವವನ್ನು ನಿಲ್ಲಿಸಲು ಮತ್ತು ರೋಗದ ಪ್ರಗತಿಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಜ್ವರವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಪ್ಲೇಟ್ಲೆಟ್ ಸಂಖ್ಯೆಯನ್ನು ಸಾಮಾನ್ಯಗೊಳಿಸಲು ನೀವು ಪಪ್ಪಾಯಿ ಎಲೆಯ ರಸವನ್ನು ಕುಡಿಯಬಹುದು.ಪಪ್ಪಾಯ ಎಲೆಯನ್ನು ಸ್ವಚ್ಛಗೊಳಿಸಿ ನೀರಿನೊಂದಿಗೆ ರುಬ್ಬಿ ಸೋಸಿಕೊಂಡು ಕುಡಿಯಿರಿ. ಆದರೆ ಇದು ಕೊಂಚ ಉಷ್ಣಕಾರಕವಾಗಿರೋದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಅಷ್ಟೇ ಮುಖ್ಯ.ಗಿಲೋಯ ರಸ: ಗಿಲೋಯ್ ಜ್ಯೂಸ್ ಡೆಂಗ್ಯೂ ಜ್ವರಕ್ಕೆ ಪ್ರಸಿದ್ಧವಾದ ಪರಿಹಾರವಾಗಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ, ಅನಾರೋಗ್ಯದ ವಿರುದ್ಧ ಪರಿಣಾಮಕಾರಿ ರಕ್ಷಣೆ ನೀಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ರೋಗಿಗಳಿಗೆ ಉತ್ತಮವಾಗಲು ಸಹಾಯ ಮಾಡುತ್ತದೆ ಮತ್ತು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆಗಿಲೋಯ್ ರಸ ಮಾಡುವ ವಿಧಾನ: ಗಿಲೋಯ್ ಸಸ್ಯದ ಎರಡು ಸಣ್ಣ ಕಾಂಡಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ, ಬಿಸಿಯಾಗಿರುವಾಗಲೇ ಚೂರು ಚೂರು ಸೇವಿಸುತ್ತ ಬನ್ನಿ. ಇದಲ್ಲದೇ ಗಿಲೋಯ್ ಕಾಂಡದ ರಸವನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಆಗಾಗ ಬೆಚ್ಚಗಿನ ನೀರಿಗೆ ಎರಡು ಹನಿ ಸೇರಿಸಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಇದು ಆರ್ಯುವೇದ ಔಷಧವಾಗಿರೋದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ.ಬಾರ್ಲಿ: ವಿಟಮಿನ್ ಬಿ 1, ಬಿ 2, ಬಿ 6, ಬಿ 12, ಫೋಲಿಕ್ ಆಮ್ಲ ಮತ್ತು ಪ್ಯಾಂಟೊಥೆನಿಕ್ ಆಮ್ಲವನ್ನು ಬಾರ್ಲಿ ಹೊಂದಿದೆ. ಇದರಲ್ಲಿರೋ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ಆಯಾಸ ಮತ್ತು ವಿಟಮಿನ್ ಕೊರತೆಯ ಚಿಕಿತ್ಸೆಗೆ ಕೊಡುಗೆತುಳಸಿ ಮತ್ತು ಕಾಳುಮೆಣಸು ಕಷಾಯ: ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಆಂಟಿವೈರಲ್ ಆಗಿದೆ. ವೈರಸ್ಗಳನ್ನು ಮತ್ತು ಸೋಂಕು ನಿಯಂತ್ರಿಸಲು ಹೆಚ್ಚು ಪರಿಣಾಮಕಾರಿ. ಅದರಲ್ಲೂ ತುಳಸಿಯೊಂದಿಗೆ ಇನ್ನಷ್ಟು ಪರಿಣಾಮಕಾರಿ.ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು: 4-8 ಕರಿಮೆಣಸು, 5-6 ತುಳಸಿ ಎಲೆ, 1 ಸ್ಪೂನ್ ಸಕ್ಕರೆ ( ಬೇಕಿದ್ದರೇ ಬಳಸಬಹುದು.ಕಡ್ಡಾಯವಲ್ಲ) ಕಷಾಯ ತಯಾರಿಸುವ ವಿಧಾನ: 5-6 ತುಳಸಿ ಎಲೆ ತೆಗೆದುಕೊಳ್ಳಿ. ಅವುಗಳನ್ನು ಸ್ವಚ್ಛಗೊಳಿಸಿ ಒಂದು ಲೋಟ ನೀರಿಗೆ ಹಾಕಿ ಕುದಿಯಲು ಇಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಕರಿಮೆಣಸು ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಈ ಕಷಾಯಕ್ಕೆ ಬೇಕೆನಿಸಿದರೇ ಒಂದು ಚಮಚ ಸಕ್ಕರೆ ಸೇರಿಸಿ ಬಿಸಿಯಾಗಿದ್ದಾಗ
ಲೇ ಕುಡಿಯಿರಿ.








Post a Comment