ICC T20 World Cup 2024: ವಿಶ್ವಕಪ್ ಗೆದ್ದ ನಂತರ ಮತ್ತು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ನಂತರ ಕೊಹ್ಲಿ ಅಂತರಾಷ್ಟ್ರೀಯ T20 ಗೆ ನಿವೃತ್ತಿ ಘೋಷಿಸಿದರು. ಪಟ್ಟಿಯಲ್ಲಿ ಇನ್ನೂ ಅನೇಕ ಆಟಗಾರರಿದ್ದಾರೆ. ಟಿ20 ವಿಶ್ವಕಪ್‌ನ ಭಾರತ ಗೆದ್ದಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ಕಾ ಬಾಪ್ ಯಾರು ಅನ್ನೋದನ್ನು ಟೀಂ ಇಂಡಿಯಾ ಪ್ರೂವ್ ಮಾಡಿದೆ. ಇದೆಲ್ಲದರ ನಡುವೆ ಮತ್ತೊಂದು ವಿಚಾರ ಅಂದ್ರೆ ಸಾಕಷ್ಟು ಆಟಗಾರರು ನಿವೃತ್ತಿ ಘೊಷಿಸಿದ್ದಾರೆ.ವಿಶ್ವಕಪ್ ಗೆದ್ದು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು. ಕೊಹ್ಲಿ 125 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4188 ರನ್ ಗಳಿಸಿದ್ದಾರೆ. ಸರಾಸರಿ 48.69, ಸ್ಟ್ರೈಕ್ ರೇಟ್ 137.04.ಕೊಹ್ಲಿ ನಿವೃತ್ತಿಯ ನಂತರ, ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಟಿ 20 ಗೆ ನಿವೃತ್ತಿ ಘೋಷಿಸಿದರು. ರೋಹಿತ್ 159 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 4231 ರನ್ ಗಳಿಸಿ ನಿವೃತ್ತಿ ಹೊಂದಿದ್ದರು. ವಿರಾಟ್ ಅಥವಾ ರೋಹಿತ್ ಮಾತ್ರವಲ್ಲ, ಆಲ್ ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗಿದ್ದಾರೆ. ಜಡೇಜಾ ದೇಶಕ್ಕಾಗಿ 74 ಪಂದ್ಯಗಳಲ್ಲಿ 54 ವಿಕೆಟ್ ಕಬಳಿಸಿದ್ದು, 515 ರನ್ ಗಳಿಸಿದ್ದಾರೆ. ಜಡೇಜಾ ಫೀಲ್ಡರ್ ಆಗಿ ದೀರ್ಘಕಾಲದವರೆಗೆ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.ಮೂವರು ಭಾರತೀಯ ಆಟಗಾರರನ್ನು ಹೊರತುಪಡಿಸಿ, ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ನಿವೃತ್ತರಾದರು. ವಾರ್ನರ್ ದೇಶಕ್ಕಾಗಿ ಎರಡು ವಿಶ್ವಕಪ್, ಒಂದು ಟಿ20 ವಿಶ್ವಕಪ್ ಮತ್ತು ಒಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಟಿ20 ವಿಶ್ವಕಪ್ ಬಳಿಕ ವಾರ್ನರ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.ಪ್ರಸಕ್ತ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಗುಂಪು ಹಂತದಿಂದ ನಿರ್ಗಮಿಸಿದ ನಂತರ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ದೇಶಕ್ಕಾಗಿ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದವರಲ್ಲಿ ಬೌಲ್ಟ್ ಒಬ್ಬರು.ಈ ಐವರು ಸ್ಟಾರ್‌ಗಳು ವಿಶ್ವಕಪ್ ಮುಗಿದ ನಂತರ ನಿವೃತ್ತರಾದರು. ಆದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ ನಿವೃತ್ತಿ ಹೊಂದಬಹುದು. ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಫೈನಲ್‌ನಲ್ಲಿ ಸೆಣಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಡಿ ಕಾಕ್ ನಿವೃತ್ತಿಯಾಗುವ ಸಾಧ್ಯ
ತೆ ಇದೆ.







Post a Comment