ವಿಶ್ವದ ನಾಯಕರ ಜೊತೆ ಮೋದಿ
ಲೋಕಸಭಾ ಚುನಾವಣೆಯಲ್ಲಿನ ಗೆಲುವು, ಸತತ 3ನೇ ಬಾರಿ ಪ್ರಧಾನಿ ಆಗಲಿರುವ ಮೋದಿ ಅವರಿಗೆ 60ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಧಾನಿಗಳು, ಅಧ್ಯಕ್ಷರು ಸೊಷಿಯಲ್ ಮೀಡಿಯಾ, ದೂರವಾಣಿ ಕರೆ ಮೂಲಕ ಅಭಿನಂದಿಸಿದ್ದಾರೆ. ನವದೆಹಲಿ: ವಿಶ್ವದ ದೊಡ್ಡ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರ ನಾಯಕತ್ವ ಗೆದ್ದಿರುವುದ್ದಕ್ಕೆ ವಿಶ್ವದ ಹಲವು ಘಟಾನುಘಟಿ ನಾಯಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿನ ಗೆಲುವು, ಸತತ 3ನೇ ಬಾರಿ ಪ್ರಧಾನಿ ಆಗಲಿರುವ ಮೋದಿ ಅವರಿಗೆ 60ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಧಾನಿಗಳು, ಅಧ್ಯಕ್ಷರು ಸೊಷಿಯಲ್ ಮೀಡಿಯಾ, ದೂರವಾಣಿ ಕರೆ ಮೂಲಕ ಅಭಿನಂದಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದರು. ಪುಟಿನ್ ಅವರು ಭಾರತದ ಮೋದಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಹೇಳಿದೆ. ಇನ್ನು ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೂ ಇಂಗ್ಲಿಷ್-ಹಿಂದಿ ಎರಡಲ್ಲೂ ವಿಶ್ ಮಾಡಿದ್ದಾರೆ. ಯುಕೆ ಮತ್ತು ಭಾರತವು ಅತ್ಯಂತ ನಿಕಟವಾದ ಸ್ನೇಹವನ್ನು ಹಂಚಿಕೊಳ್ಳುತ್ತದೆ. ಈ ಸ್ನೇಹವು ಅಭಿವೃದ್ಧಿ ಹೊಂದುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಸಂಬಂಧಿತ ಸುದ್ದಿನರೇಂದ್ರ ಮೋದಿಯ ನೂತನ ಸಂಪುಟ ಫೈನಲ್, 1 ಪ್ರಧಾನಿ, 2 ಉಪಪ್ರಧಾನಿ, ಹೀಗಿರಲಿದೆ ಅಂತಿಮ ಒಪ್ಪಂದ!ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ ಗಣ್ಯಾತಿಗಣ್ಯರು, ವಿಶ್ವದ ಪವರ್ಫುಲ್ ಲೀಡರ್ಸ್‌ಗೆ ಆಹ್ವಾನ!NDA Meeting: ಮೋದಿನೇ ಮತ್ತೆ ಪ್ರಧಾನಿ ಆಗಬೇಕೆಂದು ಸರ್ವಾನುಮತದಿಂದ ಆಯ್ಕೆ; ಜೂ. 7ರಂದು ರಾಷ್ಟ್ರಪತಿ ಭೇಟಿNDA Meeting: ಮಹತ್ವದ ಎನ್‌ಡಿಎ ಸಭೆ ಅಂತ್ಯ; ಯಾರೆಲ್ಲಾ ಹಾಜರು, ಯಾರು ಗೈರು?ಯುಎಸ್ ಅಧ್ಯಕ್ಷ ಜೋ ಬಿಡೆನ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಗೆಲುವಿಗಾಗಿ ಅಭಿನಂದನೆಗಳು. ಈ ಐತಿಹಾಸಿಕ ಚುನಾವಣೆಯಲ್ಲಿ ಭಾಗಿಯಾದ ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹ ಬೆಳೆಯುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಥ್ಯಾಂಕ್ಯೂ ಹೇಳಿದ್ದಾರೆ. ಶ್ರೀಲಂಕಾ ಅಧ್ಯಕ್ಷರು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೂಡ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಭಾರತೀಯ ಜನರ ನಂಬಿಕೆಯನ್ನು ಎನ್‌ಡಿಎ ಗೆದ್ದು ತೋರಿಸಿದೆ. ಶ್ರೀಲಂಕಾ ತನ್ನ ಹತ್ತಿರದ ನೆರೆಯ ರಾಷ್ಟ್ರವಾಗಿದ್ದು, ಭಾರತದೊಂದಿಗೆ ತನ್ನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.ಮಾಲ್ಡೀವ್ಸ್ ಅಧ್ಯಕ್ಷರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಗೆ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘2024 ರ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಯಶಸ್ವಿಯಾಗಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟಕ್ಕೆ ಅಭಿನಂದನೆಗಳು. ಎರಡೂ ದೇಶಗಳ ಸಾಮಾನ್ಯ ಏಳಿಗೆಗಾಗಿ ಒಟ್ಟಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ. 60ಕ್ಕೂ ಹೆಚ್ಚು ದೇಶಗಳ ನಾಯಕರಿಂದ ಅಭಿನಂದನೆಗಳುಬಾಂಗ್ಲಾದೇಶ, ಬಾರ್ಬಡೋಸ್ ,ಭೂತಾನ್, ಚೀನಾ, ಕೊಮೊರೊಸ್, ಜೆಕ್ ರಿಪಬ್ಲಿಕ್, ಗಯಾನಾ, ಇರಾನ್ ,ಇಸ್ರೇಲ್, ಇಟಲಿ, ಜಮೈಕಾ, ಜಪಾನ್, ಕೀನ್ಯಾ, ಲಿಥುವೇನಿಯಾ, ಲಾಟ್ವಿಯಾ, ಓಮನ್, ಮಲೇಷ್ಯಾ, ಮಾಲ್ಡೀವ್ಸ್, ಮಾರಿಷಸ್, ಮ್ಯಾನ್ಮಾರ್, ನೇಪಾಳ, ನೈಜೀರಿಯಾ, ಸೀಶೆಲ್ಸ್, ಸರ್ಬಿಯಾ, ಎಸ್ ಕೊರಿಯಾ, ಸಿಂಗಾಪುರ, ಸ್ಪೇನ್, ಶ್ರೀಲಂಕಾ, ತೈವಾನ್, ಉಕ್ರೇನ್ ಸೇರಿದಂತೆ ಅನೇಕ ದೇಶಗಳ ನಾಯಕರು ಮೋದಿ ಅವರನ್ನು ಅಭಿನಂದಿಸಿದ್ದಾರೆ.

Post a Comment