ಬಿಜೆಪಿ ಸೋಲಿಗೆ ಕಾರಣವೇನು?
ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿಷಯವು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಭಾಗವಾಗಿತ್ತು. ಆದರೆ ಅಯೋಧ್ಯೆಯಲ್ಲಿ ಬಿಜೆಪಿ ಸೋತಿರುವುದು ದೊಡ್ಡ ಹಿನ್ನಡೆಯಾಗಿದೆ. ಹಾಗಾದರೆ ಈ ಸೋಲಿಗೆ ಪ್ರಮುಖ ಕಾರಣಗಳನ್ನ ನೋಡಿ. ಅಯೋಧ್ಯೆ: 2024ರ ಲೋಕಸಭಾ ಚುನಾವಣೆಯ (Lok Sabha) ಮತ ಎಣಿಕೆ ನಡೆಯುತ್ತಿದೆ. ಇಲ್ಲಿಯವರೆಗಿನ ಟ್ರೆಂಡ್ನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2019 ರ ಪ್ರದರ್ಶನವನ್ನು ಪುನರಾವರ್ತಿಸಲು ಬಿಜೆಪಿ (BJP) ವಿಫಲವಾಗಿದೆ. ಅದರಲ್ಲೂ ಗೇಮ್ ಚೇಂಜರ್ ಆಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಚುನಾವಣಾ ಆಯೋಗದ ಪ್ರಕಾರ, ಸಮಾಜವಾದಿ ಪಕ್ಷ (Samajwadi Party) 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಮಿತ್ರ ಪಕ್ಷ ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿತ್ತು. ಫೈಜಾಬಾದ್ ಕ್ಷೇತ್ರವನ್ನು ಅಯೋಧ್ಯೆ (Ayodhya) ಕ್ಷೇತ್ರ ಎಂದೇ ಕರೆಯಲಾಗುತ್ತದೆ. ಆದರೆ ಈ ಬಾರಿ ಫೈಜಾಬಾದ್ನಲ್ಲಿ ಎಸ್ಪಿಯ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು 48,104 ಮತಗಳಿಂದ ಸೋಲಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿಷಯವು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಭಾಗವಾಗಿತ್ತು. ಆದರೆ ಅಯೋಧ್ಯೆಯಲ್ಲಿ ಬಿಜೆಪಿ ಸೋತಿರುವುದು ದೊಡ್ಡ ಹಿನ್ನಡೆಯಾಗಿದೆ. ಹಾಗಾದರೆ ಈ ಸೋಲಿಗೆ ಪ್ರಮುಖ ಕಾರಣಗಳನ್ನ ನೋಡಿ.ಸಂಬಂಧಿತ ಸುದ್ದಿಜೈಲಲ್ಲಿದ್ದೇ ಗೆದ್ದ ಆ ಇಬ್ಬರು ಅಭ್ಯರ್ಥಿಗಳು ಪ್ರಮಾಣ ವಚನ ಸ್ವೀಕರಿಸುವುದೇಗೆ? ಸಂವಿಧಾನದ ನಿಯಮಗಳೇನು?ಬಿಜೆಪಿಗೆ ಕಡಿಮೆಯಾಗಿದ್ದು 1% ವೋಟ್, ಆದ್ರೆ ಕಳೆದುಕೊಂಡಿದ್ದು 63 ಸೀಟು!ಆದ್ರೆ ಕಾಂಗ್ರೆಸ್ ಕಥೆ ವಿಭಿನ್ನ!ಖರ್ಗೆ ಮರ್ಯಾದೆ ಉಳಿಸಿದ ಮುಸ್ಲಿಂ ಮತದಾರರು! ದೊಡ್ಡಮನಿ ಗೆಲುವಿಗೆ ಕಾರಣವಾಗಿದ್ದು ಅದೊಂದೇ ಕ್ಷೇತ್ರ!ಈ 3 ಸಚಿವಾಲಯಗಳಿಗೇ ಬೇಡಿಕೆ ಇಟ್ಟಿದ್ದೇಕೆ ನಿತೀಶ್ ಕುಮಾರ್? ಬಿಹಾರಕ್ಕೆ ಇದರಿಂದ ಬಂಪರ್ ಲಾಭ?ಅಯೋಧ್ಯೆ ಧಾಮದ ಮೇಲೆ ಗಮನ ಬಿಜೆಪಿ ಅಯೋಧ್ಯೆ ಧಾಮದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿದೆ. ಸಾಮಾಜಿಕ ಜಾಲಾತಾಣಗಳಿಂದ ಹಿಡಿದು ಚುನಾವಣಾ ಪ್ರಚಾರದವರೆಗೆ, ಅಯೋಧ್ಯೆ ಧಾಮದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಹೇಳಲಾಗಿತ್ತು. ಆದರೆ ಬಿಜೆಪಿ ಅಯೋಧ್ಯೆಯ ಗ್ರಾಮೀಣ ಪ್ರದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಅಯೋಧ್ಯೆ ಧಾಮ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಸಂಪೂರ್ಣವಾಗಿ ಭಿನ್ನವಾಗಿತ್ತು. ಈ ಅಸಮಾಧಾನದಿಂದಾಗಿ ಗ್ರಾಮಸ್ಥರು ಬಿಜೆಪಿ ಪರವಾಗಿ ಮತ ಚಲಾಯಿಸಲಿಲ್ಲ ಎನ್ನಲಾಗುತ್ತಿದೆ.ಇದನ್ನೂ ಓದಿ: ಸೋಲು, ಅವಮಾನ, ಬೆನ್ನಿಗೆ ಚೂರಿ! ಎಲ್ಲವನ್ನೂ ಸಹಿಸಿಕೊಂಡು ಎಪಿ ಚುನಾವಣೆಯಲ್ಲಿ ರಿಯಲ್ ಹೀರೋ ಪವನ್ ಕಲ್ಯಾಣ್ರಾಮಪಥಕ್ಕೆ ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಸಿಗದ ಪರಿಹಾರಅಯೋಧ್ಯೆಯ ರಾಮಪಥ ನಿರ್ಮಾಣದ ಸಮಯದಲ್ಲಿ ಅನೇಕ ಮನೆಗಳನ್ನು ನೆಲಸಮಗೊಳಿಸಲಾಯಿತು, ರಾಮ್ ಪಥ್ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಅನೇಕ ಜನರ ಮನೆಗಳು ಮತ್ತು ಅಂಗಡಿಗಳು ನಾಶವಾದವು. ಬೇಸರದ ಸಂಗತಿ ಎಂದರೆ ಅನೇಕ ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದರ ಅಸಮಾಧಾನವು ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. 14 ಕೋಸಿ ಪರಿಕ್ರಮ ಮಾರ್ಗದ ಅಗಲೀಕರಣದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಹೆಚ್ಚಿನ ಸಂಖ್ಯೆಯ ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸಲಾಯಿತು ಆದರೆ ಪೀಡಿತ ಜನರಿಗೆ ಸರಿಯಾದ ಪರಿಹಾರ ಮಾತ್ರ ಸಿಗಲಿಲ್ಲ. ಈ ಅಸಮಧಾನವೂ ಒಂದು ಕಾರಣವಾಗಿದೆ. ಲಲ್ಲು ಸಿಂಗ್ ವಿರುದ್ಧ ತೀವ್ರ ಅಸಮಾಧಾನಬಿಜೆಪಿ ಸಂಸದ ಲಲ್ಲು ಸಿಂಗ್ ಅವರನ್ನು ಮೂರನೇ ಬಾರಿಗೆ ಕಣಕ್ಕಿಳಿಸಿತ್ತು. ಆದರೆ ಇವರಿಗೆ ಸ್ಥಳೀಯರ ಬೆಂಬಲವಿರಲಿಲ್ಲ. ಲಲ್ಲು ಸಿಂಗ್ ವಿರುದ್ಧ ಸ್ಥಳೀಯ ಜನರ ಅಸಮಾಧಾನವನ್ನು ಅರಿಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಬಿಜೆಪಿ ಪ್ರತಿಷ್ಠಿತ ಸ್ಥಾನವನ್ನು ಕಳೆದುಕೊಂಡಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಯನ್ನು ಲಲ್ಲು ಸಿಂಗ್ ನೀಡಿದ್ದರು. ಈ ಹೇಳಿಕೆಯು ಸಹಾ ಸಾಕಷ್ಟು ವಿವಾಧವನ್ನು ಉಂಟಾಗಿತ್ತು.ಬಿಡಾಡಿ ದನಗಳ ಬಗ್ಗೆ ಅಸಮಾಧಾನಅಯೋಧ್ಯೆಯ ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಬಿಡಾಡಿ ದನಗಳ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದರು. ಆದರೆ ಸರ್ಕಾರವು ಪರಿಹಾರವಾಗಿ ದನದ ಕೊಟ್ಟಿಗೆಗಳನ್ನು ನಿರ್ಮಿಸಿದ್ದರೂ ಸಹಾ, ಅದು ಶಾಶ್ವತ ಪರಿಹಾರವನ್ನು ಒದಗಿಸಲಿಲ್ಲ. ಬಿಡಾಡಿ ದನಗಳ ಸಮಸ್ಯೆಯನ್ನು ಸಮಾಜವಾದಿ ಪಕ್ಷ ಒಂದು ದೊಡ್ಡ ವಿಷಯವನ್ನಾಗಿ ಮಾಡಿತು. ಬಿಜೆಪಿ ಜನರ ಅಸಮಾಧಾನವನ್ನು ಎದುರಿಸಬೇಕಾಯಿತು, ಪರಿಣಾಮ ಇಂದು ಸೋಲಿನ ಆಘಾತವನ್ನು ಎದುಸಿದೆ.

Post a Comment