Annamalai: ನಮ್ಮಪ್ಪ ಕುಪ್ಪುಸ್ವಾಮಿ, ಕರುಣಾನಿಧಿ ಅಲ್ಲ! ನಾವು ಗೆಲ್ಲೋಕೆ ಸ್ವಲ್ಪ ಟೈಮ್ ಬೇಕು: ಅಣ್ಣಾಮಲೈ


  ಅಣ್ಣಾಮಲೈ (ಫೈಲ್​ ಫೋಟೋ)

ನಮ್ಮ ಅಪ್ಪ ಕುಪ್ಪಾಸ್ವಾಮಿ, ನಾನು ಒಬ್ಬ ರೈತನ ಮಗನಾಗಿದ್ದೇನೆ. ಏನು ಮಾಡೋದು ನಮ್ಮ ಅಪ್ಪ ಕರುಣಾನಿಧಿಯಲ್ಲ, ದೊಡ್ಡ ರಾಜಕೀಯ ನಾಯಕನೂ ಅಲ್ಲ. ನಾನು ಕರುಣಾನಿಧಿ ಮಗನಾಗಿದ್ದರೆ ಚುನಾವಣೆಯಲ್ಲಿ ಗೆದ್ದು ಬಿಡುತ್ತಿದ್ದೆ. ಚೆನ್ನೈ: ಸಾಕಷ್ಟು ನಿರೀಕ್ಷೆಗಳೊಂದಿಗೆ ತಮಿಳುನಾಡಿನಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಪಕ್ಷದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ನಮ್ಮಪ್ಪ ಕುಪ್ಪುಸ್ವಾಮಿ, ಕರುಣಾನಿಧಿ ಅಲ್ಲ. ನಾವು ಗೆಲ್ಲೋಕೆ ಸ್ವಲ್ಪ ಟೈಮ್ ಬೇಕು ಎಂದು ಹೇಳುವ ಮೂಲಕ ರಾಜ್ಯದಲ್ಲಿನ ಕುಟುಂಬ ರಾಜಕಾರಣವನ್ನು ಟೀಕಿಸಿದರು. ಆಡಳಿತಾರೂಢ ಡಿಎಂಕೆ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರು.ನಮ್ಮ ಅಪ್ಪ ಕುಪ್ಪಾಸ್ವಾಮಿ, ನಾನು ಒಬ್ಬ ರೈತನ ಮಗನಾಗಿದ್ದೇನೆ. ಏನು ಮಾಡೋದು ನಮ್ಮ ಅಪ್ಪ ಕರುಣಾನಿಧಿಯಲ್ಲ, ದೊಡ್ಡ ರಾಜಕೀಯ ನಾಯಕನೂ ಅಲ್ಲ. ನಾನು ಕರುಣಾನಿಧಿ ಮಗನಾಗಿದ್ದರೆ ಚುನಾವಣೆಯಲ್ಲಿ ಗೆದ್ದು ಬಿಡುತ್ತಿದ್ದೆ. ಹಾಗಾಗಿ ನಾನು ಗೆಲ್ಲಲು ಸಮಯ ಹಿಡಿಯುತ್ತೆ. ನನ್ನಂತವರು ಒಂದೊಂದೇ ಮೆಟ್ಟಿಲು ಹತ್ತಿ ಗೆಲುವನ್ನು ಕಾಣಬೇಕಾಗುತ್ತದೆ. ನನ್ನ ತಂದೆ ಕುಪ್ಪಾಸ್ವಾಮಿ ನನಗೆ ಅದನ್ನೇ ಹೇಳಿಕೊಟ್ಟಿದ್ದಾರೆ. ನಿಧಾನಕ್ಕೆ ಹೋಗು, ಒಂದೊಂದೇ ಮೆಟ್ಟಿಲು ಹತ್ತು, ನ್ಯಾಯವಾದ ದಾರಿಯಲ್ಲಿ ನಡಿ ಎಂದು ಹೇಳಿಕೊಟ್ಟಿದ್ದಾರೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಂಬಂಧಿತ ಸುದ್ದಿಬಿಜೆಪಿಗೆ ಕಡಿಮೆಯಾಗಿದ್ದು 1% ವೋಟ್​, ಆದ್ರೆ ಕಳೆದುಕೊಂಡಿದ್ದು 63 ಸೀಟು!ಆದ್ರೆ ಕಾಂಗ್ರೆಸ್ ಕಥೆ ವಿಭಿನ್ನ!ಈ 3 ಸಚಿವಾಲಯಗಳಿಗೇ ಬೇಡಿಕೆ ಇಟ್ಟಿದ್ದೇಕೆ ನಿತೀಶ್ ಕುಮಾರ್? ಬಿಹಾರಕ್ಕೆ ಇದರಿಂದ ಬಂಪರ್ ಲಾಭ?ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ ಗಣ್ಯಾತಿಗಣ್ಯರು, ವಿಶ್ವದ ಪವರ್​ಫುಲ್ ಲೀಡರ್ಸ್‌ಗೆ ಆಹ್ವಾನ!Loksabha Elections: 2024ರಲ್ಲಿ ನಡೆದದ್ದು ವಿಶ್ವದ ಅತ್ಯಂತ ದುಬಾರಿ ಚುನಾವಣೆಸೋಲಿನ ಆತ್ಮಾವಲೋಕನ ಮಾಜಿ ಪೊಲೀಸ್ ಅಧಿಕಾರಿ (ಐಪಿಎಸ್) ಕೆ.ಅಣ್ಣಾಮಲೈ ಅವರು ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ನಷ್ಟವನ್ನು ರಾಜ್ಯ ಘಟಕವು ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋತಿದ್ದಾರೆ.ನಾವು ದೆಹಲಿಗೆ ಸಂಸದರನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ಅದರಿಂದ ನಮಗೆ ನೋವಾಗಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಮುಂದಿನ ಬಾರಿ ನಾವು ಮತ ​​ಹಂಚಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸಂಸದರನ್ನು ಸಂಸತ್ತಿಗೆ ಕಳುಹಿಸುತ್ತೇವೆ ಎಂದು ಕೆ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.ಮುಂಬರುವ ವರ್ಷಗಳಲ್ಲಿ ಪಕ್ಷದ ಮತಗಳಿಕೆ ಮತ್ತಷ್ಟು ಹೆಚ್ಚಾಗಲಿದೆ . ಈ ಬಾರಿ 12 ಸ್ಥಾನಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದೆ. 2014 ಕ್ಕೆ ಹೋಲಿಸಿದರೆ ಬಿಜೆಪಿ ತನ್ನ ಮತಗಳನ್ನು ದ್ವಿಗುಣಗೊಳಿಸಿದೆ. 2021 ರ ರಾಜ್ಯ ಚುನಾವಣೆಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಖಂಡಿತವಾಗಿಯೂ ಬೆಳೆದಿದೆ ಎಂದರು.

Post a Comment

Previous Post Next Post