ಸಚಿವ ನಾಗೇಂದ್ರ ರಾಜೀನಾಮೆ
ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ (B. Nagendra) ತಲೆದಂಡವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆಯಂತೆ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಎಸ್‌ಟಿ ನಿಗಮದಲ್ಲಿ 186 ಕೋಟಿ ಹಗರಣ, ನಾಗೇಂದ್ರ ತಲೆದಂಡಸಂಬಂಧಿತ ಸುದ್ದಿBelagavi Politics: DCM ಡಿಕೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ರಮೇಶ್ ಜಾರಕಿಹೊಳಿ ಬಹಿರಂಗ ಎಚ್ಚರಿಕೆನಾಗೇಂದ್ರ ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದಾರೆ; ಡಿಸಿಎಂ ಡಿಕೆಶಿಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆಶಿ, ಚಂದ್ರಬಾಬು ನಾಯ್ಡುರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದರೇ?Minister Nagendra: ಸಿದ್ದು ಸರ್ಕಾರದ ಮೊದಲ ವಿಕೆಟ್ ಪತನ ಫಿಕ್ಸ್? ನಾಳೆ ಸಚಿವ ನಾಗೇಂದ್ರ ರಾಜೀನಾಮೆ!ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 186 ಕೋಟಿ ಅವ್ಯವಹಾರ ಕೇಸ್‌ನಲ್ಲಿ ಸಚಿವ ನಾಗೇಂದ್ರ ತಲೆದಂಡವಾಗಿದೆ. ನಿಗಮದ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು. ಹಗರಣದಲ್ಲಿ ನಾಗೇಂದ್ರ ಹೆಸರು ಪ್ರಸ್ತಾಪಚಂದ್ರಶೇಖರನ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಚಿವರಿಗೆ ಗೊತ್ತಿದ್ದೇ ಹಣ ವರ್ಗಾವಣೆ ಆಗಿದೆ ಅಂತ ಬರೆಯಲಾಗಿತ್ತು. ಇದೇ ಕಾರಣಕ್ಕೆ ನಾಗೇಂದ್ರ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಆಗ್ರಹಿಸಿದ್ದವು.ಇದನ್ನೂ ಓದಿ: Dr Manjunath: ಡಾ ಮಂಜುನಾಥ್ ಗೆಲುವಿಗೆ ಮುಸ್ಲಿಂ ವ್ಯಕ್ತಿ ಹರಕೆ, ಮಾದೇಶ್ವರನ ದೇಗುಲಕ್ಕೆ ತೆರಳಿ ಮುಡಿ ಅರ್ಪಣೆ!ಎಸ್‌ಐಟಿ ಮುಂದೆಯೂ ನಾಗೇಂದ್ರ ಹೆಸರು ಉಲ್ಲೇಖಇದರ ತನಿಖೆ ಹೊಣೆ ಹೊತ್ತಿದ್ದ ಎಸ್ಐಟಿ ಅಧಿಕಾರಿಗಳು ನಿಗಮದ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅಲ್ಲೂ ಕೂಡ ನಾಗೇಂದ್ರ ಹೆಸರು ಪ್ರಸ್ತಾಪ ಆಗಿತ್ತು ಎನ್ನಲಾಗಿದೆ. ಅಲ್ಲದೇ ನಿನ್ನೆ ನಾಗೇಂದ್ರ ಪಿಎ ನೆಕ್ಕಂಟಿ ನಾಗರಾಜ್ ಎಂಬಾತನ್ನು ಎಸ್ಐಟಿ ವಶಕ್ಕೆ ಪಡೆದಿತ್ತು.ನಾಗೇಂದ್ರ ರಾಜೀನಾಮೆಗೆ ಸಿಎಂ ಸೂಚನೆ ಬಹುಕೋಟೆ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರೋದ್ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿ. ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ನಿನ್ನೆ ನಾಗೇಂದ್ರರನ್ನು ಕರೆಸಿದ್ದ ಸಿಎಂ ಹಾಗೂ ಡಿಸಿಎಂ ರಾಜೀನಾಮೆಗೆ ಸೂಚನೆ ನೀಡಿದ್ದರು.ಇಂದು ಸಿಎಂಗೆ ರಾಜೀನಾಮೆ ಸಲ್ಲಿಸಿದ ನಾಗೇಂದ್ರಸಿಎಂ ಹಾಗೂ ಡಿಸಿಎಂ ಸೂಚನೆಯಂತೆ ನಾಗೇಂದ್ರ ಇಂದು ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ನಿವಾಸಕ್ಕೆ ಬಂದ ನಾಗೇಂದ್ರ, ಸಿಎಂಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ.ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರೋದಾಗಿ ಹೇಳಿಕೆ ನಾನು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರೋದಾಗಿ ನಾಗೇಂದ್ರ ಹೇಳಿದ್ದಾರೆ. ನನಗೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡ ಹೇರಿಲ್ಲ, ನಾನೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಅಂತ ನಾಗೇಂದ್ರ ತಿಳಿಸಿದ್ದಾರೆ.

Post a Comment