ಸಾಂಕೇತಿಕ ಚಿತ್ರ
ಶಾಲೆಯ ಆವರಣದಲ್ಲಿರುವ ಹ್ಯಾಂಡ್ ಪಂಪ್ ಬಳಿ ನೀರು ಕುಡಿಯಲು ಹೋಗಿದ್ದಾನೆ. ಆ ವೇಳೆ ಅಲ್ಲಿದ್ದ ಬಕೆಟ್ ಅನ್ನು ಬಾಲಕ ಮುಟ್ಟಿದ್ದಾನೆ. ಆಗ ಅಲ್ಲೇ ಇದ್ದ ಮೇಲ್ಜಾತಿಯ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ಮಾಡಿದ್ದಾನೆಂದು ದೂರು ದಾಖಲಿಸಲಾಗಿದೆ. ರಾಜಸ್ಥಾನ: ಎಲ್ಲರೂ ಸಮಾನರು, ನಾವೆಲ್ಲರೂ ಒಂದೇ ಎಂದು ಹೇಳಿಕೊಡುವಂತಹ ಶಾಲೆಯಲ್ಲೇ (School) ಜಾತಿ, ಧರ್ಮ ಎಂದು ನಿಂದಿಸಿದ್ದಲ್ಲದೆ ದಲಿತ ಬಾಲಕನಿಗೆ ಥಳಿಸಿರುವ ಅಮಾನುಷ ಘಟನೆ ರಾಜಸ್ಥಾನದ (Rajasthan) ಹಳ್ಳಿಯೊಂದರಲ್ಲಿ ನಡೆದಿದೆ. 8 ವರ್ಷದ ದಲಿತ ಬಾಲಕ (Dalit boy) ಶಾಲೆಯಲ್ಲಿ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಥಳಿತಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.ಶಾಲೆಯಲ್ಲಿ ಬಕೆಟ್ ಮುಟ್ಟಿದ್ದಕ್ಕೆ ಥಳಿತರಾಜಸ್ಥಾನದ ಅಲ್ವಾರ್ ಎಂಬ ಹಳ್ಳಿಯೊಂದರ ಶಾಲೆಯಲ್ಲಿ 8 ವರ್ಷದ ದಲಿತ ಬಾಲಕ ನೀರಿನ ಪಂಪ್ ಬಳಿ ಇದ್ದ ನೀರಿನ ಬಕೆಟ್ ಮುಟ್ಟಿದ್ದಾನೆ. ದಲಿತ ಎಂಬ ಕಾರಣಕ್ಕೆ ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸಂಬಂಧಿತ ಸುದ್ದಿBelagavi School: ಪಕ್ಷಿಗಳಿಗೆ ನೀರು, ಊಟ ನೀಡುತ್ತಿರುವ ಬೆಳಗಾವಿಯ ಮಕ್ಕಳು!ಕಳೆದುಹೋದ ಈ 18 ಸ್ಮಾರಕಗಳ ಕುರಿತು ಕೇಂದ್ರ ಏಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ?ಫಾರಿನ್ ಟ್ರಿಪ್ ಹೋಗಲು ಖತರ್ನಾಕ್ ಐಡಿಯಾ, ಕಿಡ್ನಾಪ್ ಡ್ರಾಮಾ ಮಾಡಿ 30 ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು!Ancestors Rising: ಪುರಾತನ ದೇವಾಲಯದ ಅಡಿಯಲ್ಲಿತ್ತು ಸಾವಿರ ವರ್ಷ ಹಳೆಯ ವಿಗ್ರಹ, ಏನಿದರ ರಹಸ್ಯ?ಬಾಲಕನ ತಂದೆಯಿಂದ ದೂರುಬೆಳಗ್ಗೆ 9.30ರ ಸುಮಾರಿಗೆ ಶಾಲಾ ಆವರಣದಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬಾಲಕ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.ಇದನ್ನೂ ಓದಿ: Iran Embassy: ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; 8 ಮಂದಿ ಸಾವುಮೇಲ್ಜಾತಿ ವ್ಯಕ್ತಿಯಿಂದ ಹಲ್ಲೆಶಾಲೆಯ ಆವರಣದಲ್ಲಿರುವ ಹ್ಯಾಂಡ್ ಪಂಪ್ ಬಳಿ ನೀರು ಕುಡಿಯಲು ಹೋಗಿದ್ದಾನೆ. ಆ ವೇಳೆ ಅಲ್ಲಿದ್ದ ಬಕೆಟ್ ಅನ್ನು ಬಾಲಕ ಮುಟ್ಟಿದ್ದಾನೆ. ಆಗ ಅಲ್ಲೇ ಇದ್ದ ಮೇಲ್ಜಾತಿಯ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ಮಾಡಿದ್ದಾನೆಂದು ದೂರು ದಾಖಲಿಸಲಾಗಿದೆ. ಬಾಲಕನ ತಂದೆಯಿಂದ ದೂರುಬೆಳಗ್ಗೆ 9.30ರ ಸುಮಾರಿಗೆ ಶಾಲಾ ಆವರಣದಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬಾಲಕ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.ಇದನ್ನೂ ಓದಿ: Iran Embassy: ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; 8 ಮಂದಿ ಸಾವುಮೇಲ್ಜಾತಿ ವ್ಯಕ್ತಿಯಿಂದ ಹಲ್ಲೆಶಾಲೆಯ ಆವರಣದಲ್ಲಿರುವ ಹ್ಯಾಂಡ್ ಪಂಪ್ ಬಳಿ ನೀರು ಕುಡಿಯಲು ಹೋಗಿದ್ದಾನೆ. ಆ ವೇಳೆ ಅಲ್ಲಿದ್ದ ಬಕೆಟ್ ಅನ್ನು ಬಾಲಕ ಮುಟ್ಟಿದ್ದಾನೆ. ಆಗ ಅಲ್ಲೇ ಇದ್ದ ಮೇಲ್ಜಾತಿಯ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ಮಾಡಿದ್ದಾನೆಂದು ದೂರು ದಾಖಲಿಸಲಾಗಿದೆ.ಬಾಲಕನ ತಂದೆ ಹೇಳಿದ್ದೇನು?ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಥಳಿತಕ್ಕೊಳಗಾದ ಬಾಲಕನ ತಂದೆ, “ಶಾಲೆಯ ಆವರಣದಲ್ಲಿ ನೀರಿನ ಹ್ಯಾಂಡ್ ಪಂಪ್ ಇದೆ, ಗ್ರಾಮದ ಜನರೆಲ್ಲರೂ ಅಲ್ಲೇ ನೀರನ್ನು ತುಂಬಿಸಿಕೊಳ್ಳುತ್ತಾರೆ. ನನ್ನ ಮಗ ನೀರು ಕುಡಿಯಲೆಂದು ಅಲ್ಲಿದ್ದ ನೀರಿನ ಬಕೆಟ್ ಅನ್ನು ಪಕ್ಕಕ್ಕೆ ಸರಿಸಿದ್ದಾನೆ. ಆಗ ಅಲ್ಲಿದ್ದ ಮೇಲ್ಜಾತಿಯ ವ್ಯಕ್ತಿ ನನ್ನ ಮಗನ ಜೊತೆ ಕ್ರೂರವಾಗಿ ವರ್ತಿಸಿ ಮನಬಂದಂತೆ ಥಳಿಸಿದ್ದಾನೆ ಅಂತ ಹೇಳಿದ್ದಾನೆ.ಥಳಿಸಿದ ವ್ಯಕ್ತಿಯಿಂದ ಜಾತಿ ನಿಂದನೆಅವನ ಚೀರಾಟ ಕೇಳಿದ ಕೂಡಲೇ ನಮ್ಮ ಸಂಬಂಧಿಕರು ಶಾಲೆ ಬಳಿ ಹೋಗಿದ್ದಾರೆ. ಅಷ್ಟರಲ್ಲಿ ನನ್ನ ಮಗ ಅಳುತ್ತಾ ನಿಂತಿದ್ದನು. ನಡೆದ ವಿಷಯ ನನಗೆ ತಿಳಿಸಿದ ಕೂಡಲೇ ನಾನು, ನಮ್ಮ ಸಂಬಂಧಿಕರು ಹಲ್ಲೆ ಮಾಡಿದ ವ್ಯಕ್ತಿ ಮನೆಗೆ ಹೋಗಿದ್ದೆವು. ಆಗಲೂ ಆ ವ್ಯಕ್ತಿ ನಮ್ಮ ಮುಂದೆ ಕ್ಷಮೆಯಾಚಿಸದೆ, ಮತ್ತೆ ನಮ್ಮ ಕುಟುಂಬದ ಮೇಲೆ ಜಾತಿನಿಂದನೆ ಮಾಡಿದ್ದಾನೆ ಎಂದು ಹೇಳಿದರು. ಶಾಲೆಗೆ ಹೋಗಲು ಬಾಲಕ ಹೆದರುತ್ತಿದ್ದಾನೆನನ್ನ ಮಗ ಈಗ ಶಾಲೆಗೆ ಹೋಗಲು ಹೆದರುತ್ತಿದ್ದಾನೆ. ಪೊಲೀಸರಿಗೆ ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾನೆ. ಶಾಲೆಗೆ ಹೋದರೆ ಮತ್ತೆ ಆ ವ್ಯಕ್ತಿ ನನ್ನನ್ನು ಥಳಿಸುತ್ತಾನೆ ಎಂದು ನನ್ನ ಮಗ ಬೆದರಿಕೆಯಲ್ಲಿದ್ದಾನೆ. ನನಗೆ ನ್ಯಾಯ ಸಿಗಬೇಕು, ಅಪರಾಧಿಗೆ ಶಿಕ್ಷೆಯಾಗಲೇಬೇಕು ಎಂದು ಬಾಲಕನ ತಂದೆ ಹೇಳಿದ್ದಾರೆ.ಸೂಕ್ತ ಕ್ರಮದ ಭರವಸೆ ನೀಡಿದ ಪೊಲೀಸರುಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಸವಾಯಿ ಸಿಂಗ್, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತಪ್ಪಿತಸ್ಥ ಎಂದು ಕಂಡುಬಂದ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬಾಲಕನಿಗೆ ತೊಂದರೆಯಾಗದಂತೆ ಕ್ರಮಬಾಲಕನು ಶಾಲೆಗೆ ಹೋಗಲು ಯಾವುದೇ ರೀತಿ ಭಯಪಡಬೇಕಿಲ್ಲ. ಇನ್ನು ಮುಂದೆ ಎಂದಿನಂತೆ ಸುರಕ್ಷಿತವಾಗಿ ಶಾಲೆಗೆ ಹೋಗುತ್ತಾನೆ, ಅಲ್ಲಿ ಬಾಲಕನಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಾವು ಅವರ ಕುಟುಂಬಕ್ಕೆ ಭರವಸೆ ನೀಡಿದ್ದೇವೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸವಾಯಿ ಸಿಂಗ್ ತಿಳಿಸಿದ್ದಾರೆ.

Post a Comment