ರಾಹುಲ್ ಗಾಂಧಿ
ಏಕಾಂಗಿಯಾಗಿ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅರ್ಹವಾಗಿದೆ.mannದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟದ ಪ್ರಬಲ ಪ್ರದರ್ಶನದ ನಡುವೆ ಲೋಕಸಭೆಯಲ್ಲಿ 99 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು (Opposition Leader) ಪಡೆಯಲು ಅಂತೂ ಇಂತೂ ಅರ್ಹತೆ ಗಳಿಸಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್‌ನ ನೇತಾರ ರಾಹುಲ್ ಗಾಂಧಿ (Rahul Gandhi) ಪ್ರತಿಷ್ಠಿತ ಲೋಕಸಭೆಯ ವಿರೋಧ ಪಕ್ಷದ ನಾಯಕ ಆಗಬೇಕೆಂಬ ಕೂಗು ಜೋರಾಗಿದೆ.ಏಕಾಂಗಿಯಾಗಿ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅರ್ಹವಾಗಿದೆ. ಇದುವರೆಗೆ ಮೌನವಾಗಿದ್ದ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ 10 ವರ್ಷಗಳಲ್ಲೇ ಅತೀ ಹೆಚ್ಚು ಸ್ಥಾನಗಳಲ್ಲಿ ಪಕ್ಷಕ್ಕೆ ಗೆಲ್ಲಿಸಿಕೊಟ್ಟ ನಂತರ ಈ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ.ಸಂಬಂಧಿತ ಸುದ್ದಿಖರ್ಗೆ ಮರ್ಯಾದೆ ಉಳಿಸಿದ ಮುಸ್ಲಿಂ ಮತದಾರರು! ದೊಡ್ಡಮನಿ ಗೆಲುವಿಗೆ ಕಾರಣವಾಗಿದ್ದು ಅದೊಂದೇ ಕ್ಷೇತ್ರ!ಈ 3 ಸಚಿವಾಲಯಗಳಿಗೇ ಬೇಡಿಕೆ ಇಟ್ಟಿದ್ದೇಕೆ ನಿತೀಶ್ ಕುಮಾರ್? ಬಿಹಾರಕ್ಕೆ ಇದರಿಂದ ಬಂಪರ್ ಲಾಭ?ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ ಗಣ್ಯಾತಿಗಣ್ಯರು, ವಿಶ್ವದ ಪವರ್ಫುಲ್ ಲೀಡರ್ಸ್‌ಗೆ ಆಹ್ವಾನ!Loksabha Elections: 2024ರಲ್ಲಿ ನಡೆದದ್ದು ವಿಶ್ವದ ಅತ್ಯಂತ ದುಬಾರಿ ಚುನಾವಣೆಹಿಂದಿನ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇರಲಿಲ್ಲಹಿಂದಿನ ಸಂಸತ್ತಿನಲ್ಲಿ ಭಾರತದ ಅತೀ ಹಳೆಯ ಪಕ್ಷವಾದ ಕಾಂಗ್ರೆಸ್ ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಅಗತ್ಯವಾದ ಸ್ಥಾನಗಳನ್ನು ಹೊಂದಿರಲಿಲ್ಲ. ಅಧೀರ್ ರಂಜನ್ ಚೌಧರಿ ಅವರು ಕಾಂಗ್ರೆಸ್‌ನ ನಾಯಕರಾಗಿದ್ದರೂ ಸಹ ವಿರೋಧ ಪಕ್ಷದ ನಾಯಕರಾಗಿರಲಿಲ್ಲ. ಲೋಕಸಭಾ ವಿಪಕ್ಷ ಸ್ಥಾನವು ಕ್ಯಾಬಿನೆಟ್ ದರ್ಜೆಯ ಹುದ್ದೆಯಾಗಿದ್ದು, ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯ ಭಾಗವಾಗಿರುವಂತಹ ನಿರ್ಣಾಯಕ ನಿರ್ಧಾರಗಳಲ್ಲಿ ತೊಡಗಿಸಿಕೊಂಡಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ಕಾಂಗ್ರೆಸ್ ನಾಯಕರಿಂದ ಕೇಳಿಬಂದ ಒತ್ತಾಯಕಾಂಗ್ರೆಸ್‌ನ ಈ ಬಾರಿಯ ಗೆಲುವಿನ ಕಾರ್ಯವೈಖರಿಯ ಬಹುಪಾಲು ಶ್ರೇಯಸ್ಸು ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಅವರು ಈ ಹುದ್ದೆಯನ್ನು ವಹಿಸಿಕೊಳ್ಳಲು ಪಕ್ಷ ಮತ್ತು ಮೈತ್ರಿಕೂಟವು ಉತ್ಸುಕವಾಗಿದೆ. ಗುರುವಾರ ಮುಂಜಾನೆ ಕಾಂಗ್ರೆಸ್ ಹಿರಿಯ ನಾಯಕ ಮಾಣಿಕಂ ಟ್ಯಾಗೋರ್: “ನಾನು ನನ್ನ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಮತ ಕೇಳಿದ್ದೇನೆ. ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಬೇಕು ಎಂದು ನಾನು ಭಾವಿಸುತ್ತೇನೆಂದು ” ಎಂದು ತಿಳಿಸಿದ್ದಾರೆ.ಇದನ್ನೂ ಓದಿ: Nitish Kumar: ಈ 3 ಸಚಿವಾಲಯಗಳಿಗೇ ಬೇಡಿಕೆ ಇಟ್ಟಿದ್ದೇಕೆ ನಿತೀಶ್ ಕುಮಾರ್? ಬಿಹಾರಕ್ಕೆ ಇದರಿಂದ ಬಂಪರ್ ಲಾಭ? ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೊಸ ಎನ್‌ಡಿಎ ಸಚಿವ ಸಂಪುಟಕ್ಕೆ ಬಿಸಿ ಮುಟ್ಟಿಸಲು ರಾಹುಲ್-ಖರ್ಗೆ ಅವರು ಜೋಡಿ ಒಂದಾಗಬೇಕೆಂದು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಬಲ್ಲ ಮೂಲಗಳು ಹೇಳುವಂತೆ ರಾಹುಲ್ ಗಾಂಧಿ ಅವರು ರೇಸ್‌ನಿಂದ ಹೊರಗುಳಿದರೆ, ಲೋಕಸಭಾ ವಿಪಕ್ಷ ನಾಯಕ ಹುದ್ದೆಗೆ ಆಕಾಂಕ್ಷಿಗಳಾದ ಶಶಿ ತರೂರ್, ಮನೀಶ್ ತಿವಾರಿ ಮತ್ತು ಕೆಸಿ ವೇಣುಗೋಪಾಲ್ ನಡುವೆ ತೀವ್ರ ಪೈಪೋಟಿ ಕಂಡುಬರಬಹುದು. ಕಾಂಗ್ರೆಸ್ ಸಂಸದೀಯ ಪಕ್ಷದ ಸಂವಿಧಾನದ ಪ್ರಕಾರ, ಅದರ ಸೋನಿಯಾ ಗಾಂಧಿ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಲೋಕಸಭಾ ನಾಯಕರನ್ನು ನೇಮಿಸುವ ಅಥವಾ ಬಹಿರಂಗ ಸ್ಪರ್ಧೆಗೆ ಅನುಮತಿ ನೀಡುವ ಅಧಿಕಾರವನ್ನು ಹೊಂದಿದ್ದಾರೆ.

Post a Comment