Kalaburagi Constituency: ಖರ್ಗೆ ಮರ್ಯಾದೆ ಉಳಿಸಿದ ಮುಸ್ಲಿಂ ಮತದಾರರು! ದೊಡ್ಡಮನಿ ಗೆಲುವಿಗೆ ಕಾರಣವಾಗಿದ್ದು ಅದೊಂದೇ ಕ್ಷೇತ್ರ!


4:50ಮಲ್ಲಿಕಾರ್ಜುನ ಖರ್ಗೆ

ಅಚ್ಚರಿ ಎಂದರೆ, ಎಂಟು ಬಾರಿ ವಿಧಾನಸಭೆಗೆ ಖರ್ಗೆ ಪ್ರತಿನಿಧಿಸಿರುವ ಯಾದಗಿರಿ ಜಿಲ್ಲೆಯ ಗುರ್ಮಿಟ್ಕಲ್ ಕ್ಷೇತ್ರದಲ್ಲೂ ಬಿಜೆಪಿ 16,402 ಮತಗಳ ಗಣನೀಯ ಮುನ್ನಡೆ ನೀಡಿದೆ. ಅಲ್ಲಿ ಡಾ.ಜಾಧವ್ 82,642 ಮತಗಳನ್ನು ಪಡೆದರೆ, ದೊಡ್ಡಮನಿ 66,240 ಮತಗಳನ್ನು ಪಡೆದಿದ್ದಾರೆ. ಬೆಂಗಳೂರು: ಲೋಕಸಭಾ ಚುನಾವಣೆ 2024ರ (Lok Sabha Election) ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ (Congress) ಕಳೆದ ಚುನಾವಣೆಗಿಂತ ಡಬಲ್​ ಸ್ಥಾನಗಳನ್ನು ಗೆದ್ದು ಬೀಗಿದೆ. ಇದರಲ್ಲಿ ರಾಹುಲ್ ಗಾಂಧಿಯ (Rahul Gandhi) ಅವರ ಭಾರತ್ ಜೋಡೋ ಯಾತ್ರೆ ಹಾಗೂ ಕನ್ನಡಿಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ (Mallikharjuna Kharge) ನಾಯಕತ್ವವೂ ಮಹತ್ವ ಪಡೆದಿದೆ. ಖರ್ಗೆ ಅವರ ಪ್ರಾಬಲ್ಯವಿರುದ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ ಸ್ವೀಪ್​ ಮಾಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸ್ವತಃ ಸೋಲು ಕಂಡಿದ್ದ ಕಲಬುರಗಿ (Kalaburagi) ಕ್ಷೇತ್ರವನ್ನ ಮರಳಿ ಪಡೆದಿರುವುದು ಅವರಿಗೆ ಸಂಭ್ರಮದ ವಿಷಯವಾಗಿದೆ. ಆದರೆ ಈ ಬಾರಿ ಖರ್ಗೆಯವರ ಕ್ಷೇತ್ರದ ಗೆಲುವು ಸುಲಭದ್ದಾಗಿರಲಿಲ್ಲ. ಕೇವಲ ಎರಡು ಕ್ಷೇತ್ರಗಳ ಮತದಾರರು. 27205 ಮತಗಳಿಂದ ಕೈ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಗೆಲುವು ಸಾಧಿಸಿದ್ದಾರೆ. ಮುಸ್ಲೀಮರಿಂದಲೇ ಇಂದು ಕಲುಬುರಗಿಯಲ್ಲಿ ಕಾಂಗ್ರೆಸ್​ ಮಾನವನ್ನ ಕಾಪಾಡಿದೆ. ಖರ್ಗೆ ಸೋಲಿಸಿದ್ದ ಕ್ಷೇತ್ರಗಳಲ್ಲಿ ಈ ಬಾರಿಯೂ ಹಿನ್ನಡೆಸಂಬಂಧಿತ ಸುದ್ದಿಲೋಕಸಭೆಯಲ್ಲಿ ವಿಪಕ್ಷ ನಾಯಕರಾಗ್ತಾರಾ ರಾಹುಲ್ ಗಾಂಧಿ? ಕಾಂಗ್ರೆಸ್‌ ಹಿರಿಯ ನಾಯಕರಿಂದಲೇ ಒತ್ತಾಯ 3 ಸಚಿವಾಲಯಗಳಿಗೇ ಬೇಡಿಕೆ ಇಟ್ಟಿದ್ದೇಕೆ ನಿತೀಶ್ ಕುಮಾರ್? ಬಿಹಾರಕ್ಕೆ ಇದರಿಂದ ಬಂಪರ್ ಲಾಭ?ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ ಗಣ್ಯಾತಿಗಣ್ಯರು, ವಿಶ್ವದ ಪವರ್​ಫುಲ್ ಲೀಡರ್ಸ್‌ಗೆ ಆಹ್ವಾನ!

Belagavi Politics: DCM ಡಿಕೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ಗೆ ರಮೇಶ್​ ಜಾರಕಿಹೊಳಿ ಬಹಿರಂಗ ಎಚ್ಚರಿಕೆ

ಈ ಬಾರಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಕ್ಷೇತ್ರದಲ್ಲಿ ಅಳಿಯ ರಾಧಾಕೃಷ್ಣ ದೊಡ್ಡಮನಿಗೆ ಟಿಕೆಟ್ ಕೊಡಿಸಿದ್ದರು. ಕಳೆದ ಬಾರಿ ಹಾಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಸೋಲು ಕಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಅಫಜಲಪುರ, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಜಾಧವ್​ಗೆ ಜಾಧವ್​ ಭಾರಿ ಮುನ್ನಡೆ ಪಡೆದು ಖರ್ಗೆ ಅವರ ಸೋಲಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಆ ಕ್ಷೇತ್ರದ ಶಾಸಕ ಎಂವೈ ಪಾಟೀಲ್ ತಮ್ಮ ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡಿದ್ದರು. ಏಕೆಂದರೆ ಪಾಟೀಲರನ್ನ ಕಾಂಗ್ರೆಸ್​ಗೆ ಕರೆತಂದು ಶಾಸಕರನ್ನಾಗಿ ಮಾಡಿದ್ದು, ಇದೇ ಖರ್ಗೆಯವರಾಗಿದ್ದರು. ಜೀವರ್ಗಿ ಅಫ್ಜಲ್​ಪುರದಲ್ಲಿ 20 ಸಾವಿರ ಹಿನ್ನಡೆ2019ರ ಚುನಾವಣೆಯಲ್ಲಿ ಖರ್ಗೆ 36 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದರು. “ನಾನು ಶ್ರೀ ಖರ್ಗೆ ಅವರಿಗೆ ತುಂಬಾ ಋಣಿಯಾಗಿದ್ದೇನೆ. ನನ್ನನ್ನು ಕಾಂಗ್ರೆಸ್‌ಗೆ ಕರೆತಂದು ಈ ಕ್ಷೇತ್ರದ ಶಾಸಕನನ್ನಾಗಿ ಮಾಡಿದ್ದು ಅವರೇ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಮುನ್ನಡೆ ನೀಡಲು ಸಾಧ್ಯವಾಗಲಿಲ್ಲ. ನನ್ನ ವಿಧಾನಸಭಾ ಕ್ಷೇತ್ರವೇ ಖರ್ಗೆಯವರ ಸೋಲಿಗೆ ದೊಡ್ಡ ಕೊಡುಗೆ ನೀಡಿದೆ. ದೊಡ್ಡಮನಿ ಅವರಿಗೆ ಈ ಬಾರಿ ಡಾ.ಜಾಧವ್ ಅವರಿಗಿಂತ ಹೆಚ್ಚಿನ ಮತ ನೀಡುವಂತೆ ಕ್ಷೇತ್ರದ ಜನತೆಗೆ ಮನವಿ ಮಾಡುತ್ತೇನೆ, ಇದರಿಂದ ಖರ್ಗೆಯವರಿಗೆ ಋಣ ಮರುಪಾವತಿ ಮಾಡಿದ್ದೇನೆ ಎಂಬ ಭಾವನೆ ಬರಬಹುದು " ಎಂದು ಪಾಟೀಲ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಸಭೆಯಲ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: Mallikarjun Kharge: ‘ಕೈ’ಗೆ ಗೆಲುವಿನ ‘ಟಾನಿಕ್’ ಕೊಟ್ಟ ಖರ್ಗೆ! ಕನ್ನಡಿಗನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ಗೆ ಗೆಲುವುದುರದೃಷ್ಟವಶಾತ್ ಈ ಬಾರಿ ಆ ಕ್ಷೇತ್ರದಲ್ಲಿ ಡಾ.ಜಾಧವ್ 85,929 ಮತಗಳನ್ನು ಪಡೆದಿದ್ದರೆ, ದೊಡ್ಡಮನಿ ಅವರ 65,300 ಮತಗಳನ್ನ ಪಡೆದು, 20 ಸಾವಿರ ಹಿನ್ನಡೆ ಅನುಭವಿಸಿದ್ದರು. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದುದ್ದ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಖರ್ಗೆ ಸೋಲಿಗೆ ಕಾರಣವಾಗಿದ್ದ ಮಾಜಿ ಸಿಎಂ ಎನ್.ಧರಮ್ ಸಿಂಗ್ ಅವರ ಪುತ್ರ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಪ್ರತಿನಿಧಿಸುವ ಜೇವರ್ಗಿ ವಿಧಾನಸಭಾ ಕ್ಷೇತ್ರವು 2019 ರಲ್ಲಿ ಡಾ. ಜಾಧವ್ ಅವರಿಗೆ 26,000 ಕ್ಕೂ ಹೆಚ್ಚು ಮತಗಳ ಮುನ್ನಡೆ ತಂದುಕೊಟ್ಟಿತ್ತು. ಅಲ್ಲಿಯೂ ಕೂಡ ಈ ಬಾರಿ ಬಿಜೆಪಿಗೆ 5,026 ಮತಗಳ ಮುನ್ನಡೆ ನೀಡಿದೆ.ಖರ್ಗೆ ಕ್ಷೇತ್ರದಲ್ಲೂ ಹಿನ್ನಡೆಅಚ್ಚರಿ ಎಂದರೆ, ಎಂಟು ಬಾರಿ ವಿಧಾನಸಭೆಗೆ ಖರ್ಗೆ ಪ್ರತಿನಿಧಿಸಿರುವ ಯಾದಗಿರಿ ಜಿಲ್ಲೆಯ ಗುರ್ಮಿಟ್ಕಲ್ ಕ್ಷೇತ್ರದಲ್ಲೂ ಬಿಜೆಪಿ 16,402 ಮತಗಳ ಗಣನೀಯ ಮುನ್ನಡೆ ನೀಡಿದೆ. ಅಲ್ಲಿ ಡಾ.ಜಾಧವ್ 82,642 ಮತಗಳನ್ನು ಪಡೆದರೆ, ದೊಡ್ಡಮನಿ 66,240 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಪ್ರತಿನಿಧಿಸುತ್ತಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲೂ ಬಿಜೆಪಿಗೆ 9,288 ಮತಗಳ ಮುನ್ನಡೆ ಸಿಕ್ಕಿದೆ. ಡಾ.ಜಾಧವ್ 87,078 ಮತ್ತು ದೊಡ್ಡಮನಿ 77,790 ಮತಗಳನ್ನು ಪಡೆದಿದ್ದಾರೆ.ಮೇಲಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದರೂ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದರೂ, ದೊಡ್ಡಮನಿ ಗೆಲ್ಲಲು ಕಾರಣವಾಗಿದ್ದ ಮಾತ್ರ ಎರಡು ಕ್ಷೇತ್ರಗಳು ಮಾತ್ರ. 4 ಕಲಬುರಗಿ ಉತ್ತರ ಹಾಗೂ ಚಿತ್ತಾಪುರ. ಖರ್ಗೆ ಅವರ ಪುತ್ರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರಗಳು ದೊಡ್ಡಮನಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿ ಮುಳುಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದವು.ಚಿತ್ತಾಪುರದಲ್ಲಿ ಕಾಂಗ್ರೆಸ್‌ 80,756 ಮತಗಳನ್ನ ಪಡೆದರೆ, ಜಾಧವ್ 64,416 ಮತಗಳನ್ನು ಪಡೆದರು. ಇಲ್ಲಿ ದೊಡ್ಡಮನಿ 16,340 ಮತಗಳ ಮುನ್ನಡೆ ಸಾಧಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಪ್ರತಿನಿಧಿಸುತ್ತಿದ್ದ ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 9,207 ಮತಗಳ ಮುನ್ನಡೆ ದೊರಕಿದೆ. ಬಸವರಾಜ್ ಮಟ್ಟಿಮಾಡು ಪ್ರತಿನಿಧಿಸುತ್ತಿದ್ದ ಕಲಬುರಗಿ ಗ್ರಾಮಾಂತರ ಬಿಜೆಪಿ ಕ್ಷೇತ್ರದಲ್ಲಿ ಕಾಂಗ್ರೆಸ್ 2,077 ಮತಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ ಗಣ್ಯಾತಿಗಣ್ಯರು, ವಿಶ್ವದ ಪವರ್​ಫುಲ್ ಲೀಡರ್ಸ್‌ಗೆ ಆಹ್ವಾನ!ನಿರ್ಣಾಯಕ ಪಾತ್ರವಹಿಸಿದ ಮುಸ್ಲಿಂ ಮತದಾರರು ಮಾತ್ರಮೇಲಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಮುನ್ನಡೆ ಪಡೆದರು, ಜಾಧವ್​ ವಿರುದ್ಧ ಗೆಲ್ಲಲು ಕಾರಣವಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರ. ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ (ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ) ಪತ್ರಿನಿಧಿಸುವ ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಕಾಂಗ್ರೆಸ್‌ ಬರೋಬ್ಬರಿ 51,729 ಮತಗಳ ಭಾರೀ ಮುನ್ನಡೆ ತಂದುಕೊಂಡಿದೆ. ಈ ಮೂಲಕ ಮೂಲಕ ಉಳಿದ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಕ್ಷೇತ್ರ ನೆರವಾಯಿತು. ಮುಸ್ಲೀಮ್ ಬಾಹುಳ್ಯವಿರುವ ಕ್ಷೇತ್ರದಲ್ಲಿ ಡಾ.ಜಾಧವ್ ಇಲ್ಲಿ 70,313 ಮತಗಳನ್ನ ಪಡೆದರೆ, ದೊಡ್ಡಮನಿ ಬರೋಬ್ಬರಿ 1,22,042 ಮತಗಳನ್ನು ಪಡೆದರು. ದೊಡ್ಡ ಅಂತರವೇ ಅವರ ಗೆಲುವಿಗೆ ಕಾರಣವಾಯಿತು.

Post a Comment

Previous Post Next Post