Karnataka: ಭೋವಿ ನಿಗಮದಲ್ಲಿ ₹100 ಕೋಟಿ ಭ್ರಷ್ಟಾಚಾರ; ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬಾಂಬ್‌?


 ಗೂಳಿಹಟ್ಟಿ 100 ಕೋಟಿ ಬಾಂಬ್! ಕೋಟಾ ಶ್ರೀನಿವಾಸ್ ಪೂಜಾರಿ ಅಂತ ಪ್ರಾಮಾಣಿಕ ದೇಶದಲ್ಲಿ ಇಲ್ಲ. ಆದರೆ 50-60 ಕೋಟಿ ಆಸ್ತಿ ಮಾಡಿದ್ರು ಅವರಿಗೆ ಎಲ್ಲಿಂದ ಬಂತು ಎಂದು ಕೊಟ್ಟಿಲ್ಲ. 100-120 ಕೋಟಿ ಅವ್ಯವಹಾರ ಆಯ್ತು, ದುಡ್ಡೆಲ್ಲಾ ತಿಂದ್ಕಂಡ್ ಹೋದರು ಎಂದು ಆರೋಪಿಸಲಾಗಿದೆ. ಚಿತ್ರದುರ್ಗ: ವಾಲ್ಮೀಕಿ ನಿಗಮದಲ್ಲಿ (valmiki board karnataka ) ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಮೊದಲ ತಲೆದಂಡವಾಗುತ್ತೆ ಅನ್ನೋ ಸುದ್ದಿ ಜೋರಾಗಿ ಹಬ್ಬುತ್ತಿದೆ. ಸಚಿವ ನಾಗೇಂದ್ರ (minister nagendra) ಅವರನ್ನ ಕರೆಸಿಕೊಂಡ ಸಿಎಂ ಹಾಗೂ ಡಿಸಿಎಂ ಮಹತ್ವದ ಚರ್ಚೆ ಮಾಡಿದ್ದಾರೆ. ನಾಗೇಂದ್ರಗೆ ಸಚಿವ ಸ್ಥಾನಕ್ಕೆ ರಾಜೀನಾಮೆ (resignation) ನೀಡುವಂತೆಯೂ ಸಿಎಂ ಸೂಚಿಸಿದ್ದಾರಂತೆ. ಒಂದು ವೇಳೆ SIT ತನಿಖೆಯಲ್ಲಿ ತಪ್ಪಿತಸ್ಥ ಅಲ್ಲ ಎಂದು ಕಂಡುಬಂದರೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರಂತೆ. ಇದರ ನಡುವೆಯೇ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರದ್ದು ಎನ್ನಲಾಗಿರುವ ಆಡಿಯೋ ಒಂದು ವಾಟ್ಸಾಪ್​​ಗಳಲ್ಲಿ ವೈರಲ್​ ಆಗುತ್ತಿದ್ದು. ಹಿಂದಿನ ಬೊಮ್ಮಾಯಿ ಸರ್ಕಾರದಲ್ಲಿ 100 ಕೋಟಿ ರೂಪಾಯಿ ಹಗರಣವಾಗಿದೆ ಎಂಬ ಆರೋಪಿಸಿದ್ದಾರೆ.ಸಂಬಂಧಿತ ಸುದ್ದಿಬಿಜೆಪಿಗೆ ಕಡಿಮೆಯಾಗಿದ್ದು 1% ವೋಟ್​, ಆದ್ರೆ ಕಳೆದುಕೊಂಡಿದ್ದು 63 ಸೀಟು!ಆದ್ರೆ ಕಾಂಗ್ರೆಸ್ ಕಥೆ ವಿಭಿನ್ನ!ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗ್ತಾರಾ ರಾಹುಲ್ ಗಾಂಧಿ? ಕಾಂಗ್ರೆಸ್‌ ಹಿರಿಯ ನಾಯಕರಿಂದಲೇ ಒತ್ತಾಯಈಗ ಸರ್ಕಾರ ರಚಿಸಲ್ಲ, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ತಗೋತ್ತೀವಿ: INDIA ಹೇಳಿಕೆINDIA Meeting: ಖರ್ಗೆ ನಿವಾಸದಲ್ಲಿ ಸಭೆ; ವಿಪಕ್ಷಗಳ ಒಕ್ಕೂಟ ಐಎನ್​ಡಿಐಎ ಭವಿಷ್ಯದ ಬಗ್ಗೆ ನಾಯಕರ ಚರ್ಚೆವೈರಲ್ ಆಡಿಯೋದಲ್ಲಿ ಏನಿದೆ?ನಾನು ಭೋವಿ ನಿಗಮದ ಅಧ್ಯಕ್ಷನಾಗಿದ್ದ ಹಗರಣ ನಡೆದಿದೆ, ಕೋಟ ಶ್ರೀನಿವಾಸ ಪೂಜಾರಿ ಮಿನಿಸ್ಟರ್ ಆಗಿದ್ದಾಗ ಹಗರಣ ಆಗಿದೆ, ಕೋಟ ಪೂಜಾರಿ 50-60 ಕೋಟಿ ಆಸ್ತಿ ಮಾಡಿದ್ದಾರೆ ಎಂಬ ಆಡಿಯೋದಲ್ಲಿ ಆರೋಪಿಸಲಾಗಿದೆ. ಆಡಿಯೋದಲ್ಲಿ ಹೊಸದುರ್ಗ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಕಳೆದ ಬಿಜೆಪಿ ಸರ್ಕಾದಲ್ಲಿ ಭೋವಿ ನಿಗಮದ ಅಕ್ರಮ ತನಿಖೆಗೆ ಆಗ್ರಹಿಸಿದ್ದು, ನಾನು ಮಾಜಿ ಮಂತ್ರಿ ಗೂಳಿಹಟ್ಟಿ ಶೇಖರ್ ಮಾತಾಡುತ್ತಿದ್ದೇನೆ. ಬೊಮ್ಮಾಯಿ ಸಾಹೇವರ 3 ತಿಂಗಳಿರುವಾಗ ಭೋವಿ ನಿಗಮಕ್ಕೆ ಅಧ್ಯಕ್ಷನಾಗಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿ.ಪಕ್ಷ ನಾಯಕ ಅಶೋಕಣ್ಣ, ಮಾಜಿ ಸಿಎಂ ಯಡಯೂರಪ್ಪ, ವಿಜಯೇಂದ್ರಣ್ಣ ಹಾಗೂ ನಾನು ಕೂಡ ನಿಮ್ಮ ಜೊತೆ ಮಂತ್ರಿಯಾಗಿದ್ದೆ. ವಾಲ್ಮೀಕಿ ನಿಗಮ ಅವ್ಯವಹಾರ ವಿಚಾರ ಚರ್ಚೆ ಆಗುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಮೀಡಿಯಾಗಳ ಮುಂದೆ ನಾನೇ ಅಧಿಕೃತವಾಗಿ ಬಂದು ಹೇಳಬಹುದು. ನಾನು ಈಗಾಗಲೇ ಸೋತು ನನ್ನ ಪಾಡಿಗೆ ನಾನು ಮನೆಯಲ್ಲಿದ್ದೇನೆ. ನನ್ನ ಅನುಭವ ನನಗೆ ಗೊತ್ತಿರುವ ಮಾಹಿತಿ ಹೇಳುತ್ತಿದ್ದೇನೆ ಎಂದು ಆಡಿಯೋದಲ್ಲಿ ವಿವರಿಸಲಾಗಿದೆ.ವಾಲ್ಮೀಕಿ ನಿಗಮದ ಹಗರಣ ಎಂದು ನಾಗೇಂದ್ರರ ರಾಜಿನಾಮೆ ಕೇಳುತ್ತಿದ್ದೀರಲ್ವಾ? SC-ST ಹಿಂದುಳಿದವರು ಹುಟ್ಟಿರೋದೇ ಕರ್ಮ ಮಾಡಿ ಹುಟ್ಟಿದ್ದೇವೆ. ಲಿಂಗಾಯತರನ್ನು ಸೇರಿ ಜಾತಿಗೊಂದು ನಿಗಮ ಮಾಡಿ ಚಿಂದಿ ಚಿತ್ರಾನ್ನ ಮಾಡಿದ್ದಾರೆ. ಭೋವಿ ನಿಮಗ ಮಾಡಿ, ಒಬ್ಬರ ಅಧ್ಯಕ್ಷರು, 5 ಜನಕ್ಕೆ ನಿರ್ದೇಶಕರನ್ನ ಮಾಡಿದ್ದಾರೆ. ಜಾತಿಗೊಂದು ನಿಗಮ ಮಾಡಿ ಅನುದಾನ ಕಡಿಮೆ ಆಗಿದೆ. ನಾನು ಸಚಿವನಾಗಿದ್ದ ಸರ್ಕಾರದ ಸಮಯದಲ್ಲಿ ಒಂದೊಂದು ಸಮಾಜಕ್ಕೆ 10-15 ಬೋರ್ವೆಲ್ ಕೊಡ್ತಾ ಇದ್ದೆವು. ಈಗ ಎಲ್ಲಾ ಸಮಾಜಕ್ಕೂ ಕೇವಲ ಒಂದೊಂದು ಬೋರ್​​ವೆಲ್​, ಕಾರು ಕೊಡ್ತಾರೆ. ರಾಜ್ಯದಲ್ಲಿ ಈಗ MLA ಗಳು ತಲೆ ಎತ್ತೋದಕ್ಕೆ ಆಗುತ್ತಿಲ್ಲ. ಸಿಎಂ ಸಾಹೇಬ್ರೇ ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ. ಹಿಂದಿನ ಸರ್ಕಾರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಮಂತ್ರಿ ಆದಾಗ ಆಗಿದೆ. ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ, CBI ಮತ್ತು COD ತನಿಖೆ ಮಾಡ್ಸೋದು ಬೇಡ. ಕೋಟಾ ಶ್ರೀನಿವಾಸ್ ಪೂಜಾರಿ ಅಂತ ಪ್ರಾಮಾಣಿಕ ದೇಶದಲ್ಲಿ ಇಲ್ಲ. ಆದರೆ 50-60 ಕೋಟಿ ಆಸ್ತಿ ಮಾಡಿದ್ರು ಅವರಿಗೆ ಎಲ್ಲಿಂದ ಬಂತು ಎಂದು ಕೊಟ್ಟಿಲ್ಲ. 100-120 ಕೋಟಿ ಅವ್ಯವಹಾರ ಆಯ್ತು, ದುಡ್ಡೆಲ್ಲಾ ತಿಂದ್ಕಂಡ್ ಹೋದರು. ಬೋವಿ ನಿಗಮದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋಟಿ ಕೋಟಿ ಹಣ ನುಂಗಿದ್ದಾರೆ. ಸಚಿವರಾಗಿದ್ದವರಿಗೆ 15% ನಿಗಮದ ಅಧ್ಯಕ್ಷರಿಗೆ, ಆಡಳಿತ ಮಂಡಳಿಗೆ 5% ಪರ್ಸೆಂಟ್. ಕೋಟ ಶ್ರೀನಿವಾಸ ಪೂಜಾರಿ ನೇರವಾಗಿ ಜವಾಬ್ದಾರಿ ಆಗಿದ್ದಾರೆ. ಇದನ್ನೂ ಓದಿ: Annamalai: ಇದೆಂಥಾ ವಿಕೃತಿ? ಅಣ್ಣಾಮಲೈ ಫೋಟೋ ಇಟ್ಟು ಮೇಕೆ ಕಡಿದ ಡಿಎಂಕೆ ಕಾರ್ಯಕರ್ತರುಹಲವು ಅಧಿಕಾರಿಗಳನ್ನ ಹಾಕಿಕೊಂಡಿದ್ದಾರೆ, ಒಂದೇ ಒಂದು ದಾಖಲೆ ಇಟ್ಟಿಲ್ಲ. ಒಂದೇ ಒಂದು ರೂಪಾಯಿ ಫಲಾನುಭವಿಗಳಿಗೆ ತಲುಪಿಲ್ಲ. ನಮ್ಮ ಸಮಾಜದ ಲೀಡರ್ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅವತ್ತಿನ ಬೊಮ್ಮಾಯಿ ಸರ್ಕಾರದಲ್ಲಿ ಸಿಐಡಿ ತನಿಖೆಗೆ ಹಾಕಿದ್ದರು. ಇಬ್ಬರು ಈ ಪ್ರಕರಣದಲ್ಲಿ ಮರ್ಡರ್ ಕೂಡಾ ಆಗಿದ್ದಾರೆ. 100 ಕೋಟಿ ಹಣ ತಿಂದು ಹಾಕಿದ್ದಾರೆ ದುಡ್ಡೇ ಇಲ್ಲ. ನಾನು ನೇರವಾಗಿ ಹೇಳಿದ್ದೇನೆ, ಕೋಟ ಶ್ರೀನಿವಾಸ್ ಪೂಜಾರಿ ಪಾಲಿದೆ, ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ತನಿಖೆ ಆದ ಬಳಿಕ ತಿಳಿಯುತ್ತದೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಸಚಿವ ಮಹದೇವಪ್ಪ ಬಂದಾಗ ಈ ತನಿಖೆ ನಿಂತಿದೆ.ಭೋವಿ ನಿಗಮದ ತನಿಖೆ ಯಾಕೆ ನಿಲ್ಲಿಸಿದ್ದೀರಾ? ಶುರು ಮಾಡಿಸಿ. ವಾಲ್ಮೀಕಿ ನಿಗಮದ ಅವ್ಯವಹಾರದ ಎಲ್ಲಾ ಹಣ ವಾಪಸ್ ಬಂದಿದೆ. ನಮ್ಮ ಸಮಾಜ MLC ಮಗ ಕೂಡಾ 30 ಕೋಟಿ ಕೂಡಾ ನುಂಗಿದ್ದಾರೆ. ಬೋವಿ ನಿಗಮದ 120 ಕೋಟಿ ಹಣ ನುಂಗಿದ್ದಾರೆ. ವಿಜಯೇಂದ್ರಣ್ಣ, ಅಶೋಕಣ್ಣ ಧೈರ್ಯ ಇದ್ದರೆ ಜಡ್ಜ್ ಮೂಲಕ ತನಿಖೆ ಮಾಡಿಸಿ, ಪಾಪ ನಿಮಗೆ ಸಿಗೋದೆಲ್ಲಾ ಬರಿ ಎಸ್ಸಿ ಎಸ್ಟಿಗಳೇ ಟಾರ್ಗೇಟ್. ಈಗ ಪಾಪ ಸಚಿವ ನಾಗೇಂದ್ರ ಎಸ್​ಟಿ ಬಿಟ್ಟಿ ಸಿಕ್ಕಿದ್ದಾರೆ ಎಂದು ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ

Post a Comment

Previous Post Next Post